ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​; ನಾಳೆ ಹೊಸ ದಾಖಲೆ ಬರೆಯಲಿರೋ ವಿರಾಟ್​ ಕೊಹ್ಲಿ

author-image
Ganesh Nachikethu
Updated On
ಈ ವರ್ಷವೂ ಆರ್​​ಸಿಬಿ ಕಪ್ ಗೆಲ್ಲಬಾರದು.. ಇಂತಹದೊಂದು ಟೀಮ್​ ಇರಬೇಕು! ಹೀಗೆ ಗೇಲಿ ಮಾಡಿದ್ದು ಯಾರು?
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕ್ಷಣಗಣನೆ!
  • ನಾಳೆ ನಡೆಯಲಿರೋ ಪಂದ್ಯದಲ್ಲಿ KKR, RCB ಮುಖಾಮುಖಿ
  • ಹೊಸ ದಾಖಲೆ ಬರೆಯಲಿರೋ ಹೊಸ್ತಿಲಲ್ಲಿ ವಿರಾಟ್​​ ಕೊಹ್ಲಿ

ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ. ಇವರು ಟಿ20 ಕ್ರಿಕೆಟ್​​ನಲ್ಲಿ ಹೊಸ ಸಾಧನೆ ಮಾಡೋ ಹೊಸ್ತಿಲಲ್ಲಿದ್ದಾರೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕ್ಷಣಗಣನೆ ಶುರುವಾಗಿದೆ. ನಾಳೆ ನಡೆಯಲಿರೋ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿವೆ. ಈ ಹೊತ್ತಲ್ಲೇ ಐಪಿಎಲ್​​ 2025ರಲ್ಲಿ ಕೊಹ್ಲಿ ಇದುವರೆಗೂ ಯಾವುದೇ ಭಾರತೀಯ ಕ್ರಿಕೆಟಿಗ ಮಾಡಲು ಸಾಧ್ಯವಾಗದ ಅದ್ಭುತ ದಾಖಲೆ ಸೃಷ್ಟಿಸಲಿದ್ದಾರೆ.

ಕೊಹ್ಲಿ ಹೊಸ ಸಾಧನೆಗೆ ಬೇಕು 114 ರನ್​​

ಇನ್ನು, ವಿರಾಟ್​ ಕೊಹ್ಲಿ ಹೊಸ ಸಾಧನೆಗೆ ಕೇವಲ 114 ರನ್​ ಬೇಕಿದೆ. ಇವರು 114 ರನ್​ ಬಾರಿಸಿದ್ರೆ ಟಿ20 ಕ್ರಿಕೆಟ್​​ನಲ್ಲೇ ಹೊಸ ಮೈಲಿಗಲು ಸಾಧಸಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 13000 ರನ್‌ ಪೂರೈಸಿದ ಮೊದಲ ಭಾರತೀಯ ಬ್ಯಾಟರ್​​ ಆಗಲಿದ್ದಾರೆ.

ಟಿ20 ಕ್ರಿಕೆಟ್​​ಗೆ ಗುಡ್​ ಬೈ

ಕಳೆದ ವರ್ಷ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​​​ಗೆ ಗುಡ್​ ಬೈ ಹೇಳಿದರು. ಈಗ ಕೇವಲ ಐಪಿಎಲ್​​ ಲೀಗ್​ ಆಡುತ್ತಿರೋ ಇವರು 114 ರನ್​ ಬಾರಿಸಿ 13 ಸಾವಿರ ರನ್​ ಪೂರೈಸಬಹುದು.

ಕೊಹ್ಲಿ ಟಿ20 ಕ್ರಿಕೆಟ್​ ಸಾಧನೆ

ವಿರಾಟ್​ ಇದುವರೆಗೆ 399 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇವರು 41.43 ಸರಾಸರಿಯಲ್ಲಿ 12886 ರನ್ ಗಳಿಸಿದ್ದಾರೆ. ನಾಳೆ 114 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ಸಾಧನೆ ಮಾಡೋ ತವಕದಲ್ಲಿ ಕೊಹ್ಲಿ ಇದ್ದಾರೆ.

ಇದನ್ನೂ ಓದಿ:ಆರ್​​ಸಿಬಿ, ಕೆಕೆಆರ್​ ನಡುವಿನ ಐಪಿಎಲ್​ ಪಂದ್ಯ ನಡೆಯೋದು ಡೌಟ್​; ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment