ಭರ್ಜರಿ ಗುಡ್​ನ್ಯೂಸ್ ಕೊಟ್ಟ ಕೊಹ್ಲಿ​.. ಅಭಿಮಾನಿಗಳ ಅನುಮಾನ ದೂರ ಮಾಡಿದ ಕಿಂಗ್..!

author-image
Ganesh
Updated On
ಭರ್ಜರಿ ಗುಡ್​ನ್ಯೂಸ್ ಕೊಟ್ಟ ಕೊಹ್ಲಿ​.. ಅಭಿಮಾನಿಗಳ ಅನುಮಾನ ದೂರ ಮಾಡಿದ ಕಿಂಗ್..!
Advertisment
  • ಐಪಿಎಲ್​​ನಲ್ಲಿ ಬ್ಯುಸಿ ಆಗಿರುವ ವಿರಾಟ್ ಕೊಹ್ಲಿ
  • ತಮ್ಮ ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಸ್ಪಷ್ಟನೆ
  • ವಿರಾಟ್ ಕೊಹ್ಲಿ ಕ್ರಿಕೆಟ್​ಗೆ ಗುಡ್​ಬೈ ಹೇಳ್ತಿದ್ದಾರಾ?

ಕ್ರಿಕೆಟ್ ಲೋಕದಲ್ಲಿ ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಅಭಿಮಾನಿಗಳು ಬರೀ ಐಪಿಎಲ್​ ಬಗ್ಗೆಯೇ ಹೋದಲ್ಲಿ, ಬಂದಲ್ಲಿ ಚರ್ಚೆ ಮಾಡ್ತಿದ್ದಾರೆ. ಇದರ ನಡುವೆ ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್​​ಮನ್, ಮಾಜಿ ನಾಯಕ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್ ನೀಡಿದ್ದಾರೆ.

ಟಿ-20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಿಂಗ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎದುರಾಗಿತ್ತು. ಈ ಅವಧಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ಗೂ ಗುಡ್​ಬೈ ಹೇಳಲಿದ್ದಾರೆ ಎಂಬ ವದಂತಿ ಶುರುವಾಗಿದ್ದವು. ಈ ಐಸಿಸಿ ಟೂರ್ನಿಯಲ್ಲಿ ಕೊಹ್ಲಿ ಅದ್ಭುತ ಆಟವಾಡಿದರು. ಪರಿಣಾಮ ಭಾರತ ತಂಡ ಚಾಂಪಿಯನ್ ಕೂಡ ಆಯಿತು. ಮಾತ್ರವಲ್ಲ, ಅದೇ ದಿನ ಏಕದಿನ ಕ್ರಿಕೆಟ್​ಗೆ ಗುಡ್​ಬೈ ಹೇಳ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನು ಕೊಹ್ಲಿ ಸುಳ್ಳು ಮಾಡಿದ್ದರು.

ಇದನ್ನೂ ಓದಿ: ಮತ್ತೆ CSK ಸೋಲಿಸಿದ ಆರ್​ಸಿಬಿ.. ಆಫ್​ ದಿ ಫೀಲ್ಡ್​ನಲ್ಲೂ ಬೆಂಗಳೂರೇ ನಂಬರ್ ಒನ್..!

publive-image

ಅಷ್ಟಕ್ಕೂ ಕೊಹ್ಲಿ ನಿವೃತ್ತಿ ಕುರಿತ ಚರ್ಚೆಗಳು ನಿಂತಿರಲಿಲ್ಲ. ಇದೀಗ ಈ ಎಲ್ಲಾ ವದಂತಿಗಳಿಗೆ ಕೊಹ್ಲಿ ಅಧಿಕೃತವಾಗಿ ಫುಲ್​ಸ್ಟಾಪ್ ಇಟ್ಟಿದ್ದಾರೆ. ಐಪಿಎಲ್​ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಭಾಗಿಯಾಗಿದ್ದರು. ಅಲ್ಲಿ ನಿರೂಪಕರು, ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಏನಾದರೂ ಸುಳಿವು ನೀಡೋದು ಇದೆಯಾ ಎಂದು ಕೇಳಿದ್ದಾರೆ. ಆಗ ಉತ್ತರಿಸಿದ ಕೊಹ್ಲಿ ನನ್ನ ನೆಕ್ಸ್ಟ್​ ಟಾರ್ಗೆಟ್ ವರ್ಲ್ಡ್​ ಕಪ್ ಎಂದಿದ್ದಾರೆ. 2027ರಲ್ಲಿ ಐಸಿಸಿ ವರ್ಲ್ಡ್​ ಕಪ್ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಟೂರ್ನಿ ಆಯೋಜನೆ ಮಾಡ್ತಿದೆ.

ಇದನ್ನೂ ಓದಿ: ‘ನೀವು ಬ್ಯಾಟ್ ಮಾಡಿ, ಬೌಲಿಂಗ್ ಮಾಡ್ತೇನೆ’ ಎಂದ ಪಡಿಕ್ಕಲ್ -ಸವಾಲ್ ಹಾಕಿದ್ದು ಯಾರಿಗೆ..? VIDEO

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment