/newsfirstlive-kannada/media/post_attachments/wp-content/uploads/2025/04/Salt.jpg)
ಐಪಿಎಲ್‌ನಲ್ಲಿ ಫಿಲ್ ಸಾಲ್ಟ್ ಈ ವರ್ಷದಿಂದ ಆರ್ಸಿಬಿ ಪರ ಆಡುತ್ತಿದ್ದಾರೆ. ಮೆಗಾ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ 11.5 ಕೋಟಿ ನೀಡಿ ಅವರನ್ನು ಖರೀದಿಸಿದೆ. ಆರ್ಸಿಬಿಯ ಆರಂಭಿಕ ಆಟಗಾರನಾಗಿರುವ ಸಾಲ್ಟ್, ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ.
ರನ್ ಗಳಿಕೆಯಲ್ಲಿ ಕೊಹ್ಲಿ ಜೊತೆ ಉತ್ತಮ ಪಾರ್ಟ್ನರ್ಶಿಪ್ ಹೊಂದಿರುವ ಸಾಲ್ಟ್, ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಮಿಸ್ಟರ್ ನಾಗ್ ನಡೆಸಿದ ವಿಶೇಷ ಮಾತುಕತೆಯಲ್ಲಿ ಕೊಹ್ಲಿ ನನ್ನ ಸ್ನೇಹಿತನಲ್ಲ ಎಂದಿದ್ದಾರೆ.
ಇದನ್ನೂ ಓದಿ: ವೈಭವ್ ಪ್ರತಿಭೆ ಗುರುತಿಸಿದ್ದು ಯಾರು..? ಅವರೇ ದ್ರಾವಿಡ್ಗೆ ಈ ಹೆಸರು ಶಿಫಾರಸು ಮಾಡಿದ್ದು..
ಮಿಸ್ಟರ್ ನಾಗ್ ಅವರು, ಫಿಲ್ ಸಾಲ್ಟ್ ಅವರ ಹಿಂದಿನ ಸಂದರ್ಶನದ ಬಗ್ಗೆ ಕೆದುಕಿದ್ದಾರೆ. ‘ನಿಮ್ಮ ಒಂದು ಸಂದರ್ಶನದಲ್ಲಿ ಐಪಿಎಲ್‌ನಲ್ಲಿ ಸ್ನೇಹಿತರಿಲ್ಲ ಎಂದು ಹೇಳಿದ್ದಿರಿ. ಹಾಗಾದರೆ ನೀವು ವಿರಾಟ್ ಜೊತೆ ಆಟವಾಡುವಾಗ ನೀವು ಅವರೊಂದಿಗೆ ಸ್ನೇಹಿತರಾಗುತ್ತೀರಾ ಅಥವಾ ಇಲ್ಲವೇ..? ಎಂದು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಉತ್ತರಿಸಿದ ಸಾಲ್ಟ್, ಇಲ್ಲ ಕಲೀಗ್ ಅಂತಾ ಉತ್ತರಿಸಿದ್ದಾರೆ. ಆಗ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ, ನಾನು ಯಾರ ಜೊತೆ ಆಡುತ್ತೇನೋ, ಅವರೆಲ್ಲರೂ ಸ್ನೇಹಿತರೇ. ಹಾಗಾಗಿ ಇಂದಿನ ಸಂದರ್ಶನದಲ್ಲಿ ನಾನು ನಿಮಗೆ ಹೆಚ್ಚಿನ ಬುಲೆಟ್ಸ್ ನೀಡಲು ಬಯಸಲ್ಲ ಎಂದು ಸಾಲ್ಟ್ ಹೇಳಿದ್ದಾರೆ. ಕೊಹ್ಲಿ ನನ್ನ ಕಲೀಗ್ ಎಂದು, ಕೊನೆಗೆ ತಮ್ಮ ಮಾತನ್ನು ಬದಲಾಯಿಸಿದ ಸಂದರ್ಶನದ ವಿಡಿಯೋ ಭಾರೀ ವೈರಲ್ ಆಗ್ತಿದೆ.
ಇದನ್ನೂ ಓದಿ: ವೈಭವ್ ಪ್ರತಿಭೆ ಗುರುತಿಸಿದ್ದು ಯಾರು..? ಅವರೇ ದ್ರಾವಿಡ್ಗೆ ಈ ಹೆಸರು ಶಿಫಾರಸು ಮಾಡಿದ್ದು..
Mr. Nags interviewing Phil Salt. 😂pic.twitter.com/3VnQyWNbf1
— Mufaddal Vohra (@mufaddal_vohra) April 30, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್