newsfirstkannada.com

ಕೊಹ್ಲಿಗೊಂದು ನ್ಯಾಯ? ಬೇರೆಯವ್ರಿಗೆ ಇನ್ನೊಂದು ನ್ಯಾಯ.. ಬಿಸಿಸಿಐನ ಸುಣ್ಣ, ಬೆಣ್ಣೆ ಆಟಕ್ಕೆ ಆಕ್ರೋಶ..!

Share :

Published August 16, 2024 at 1:33pm

    ಕೊಹ್ಲಿಗೊಂದು ನ್ಯಾಯ? ಬೇರೆಯವ್ರಿಗೆ ಒಂದು ನ್ಯಾಯ?

    ತಿಂಗಳಿಗೂ ಹೆಚ್ಚು ಕಾಲ ಬ್ಯಾಟ್​ ಮುಟ್ಟಲ್ಲ ಕೊಹ್ಲಿ

    ಕೊಹ್ಲಿಗೆ ದೇಶ ಮೊದಲ​? ಫ್ಯಾಮಿಲಿ ಮೊದಲ? ಎಂದ ಫ್ಯಾನ್ಸ್

ದುಲೀಪ್​​ ಟ್ರೋಫಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿರೋ ವಿರಾಟ್​ ಕೊಹ್ಲಿ, ಮತ್ತೆ ಸುದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಲಂಡನ್​ನಲ್ಲಿ ಬೀಡು ಬಿಟ್ಟಿರೋ ಕೊಹ್ಲಿ, ಕಮ್​ಬ್ಯಾಕ್​ ಮಾಡೋದು ಇನ್ನೂ ಒಂದುವರೆ ತಿಂಗಳ ಬಳಿಕ ಬಾಂಗ್ಲಾ ಎದುರಿನ ಸರಣಿಯಲ್ಲಿ. ಕಳಪೆ ಫಾರ್ಮ್​ ಸುಳಿಗೆ ಸಿಲುಕಿ ರನ್​ಗಳಿಕೆಗೆ ಪರದಾಡ್ತಿರೋ ಕೊಹ್ಲಿ ಮತ್ತೆ ಸುದೀರ್ಘ ಅವಧಿಗೆ ಕ್ರಿಕೆಟ್​ನಿಂದ​ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ನಿರ್ಧಾರದಿಂದ ಕೊಹ್ಲಿ ಕರಿಯರ್​ನ ಭವಿಷ್ಯದ ಪ್ರಶ್ನೆ ಎದ್ದಿದೆ.

ಶ್ರೀಲಂಕಾ ಪ್ರವಾಸದ ಅಂತ್ಯದ ಬಳಿಕ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಸುದೀರ್ಘ ವಿಶ್ರಾಂತಿಗೆ ಜಾರಿದ್ದಾರೆ. ಕೊಲಂಬೋದಿಂದ ನೇರವಾಗಿ ಲಂಡನ್​ಗೆ ಹಾರಿರುವ ವಿರಾಟ್​ ಕೊಹ್ಲಿ, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಲಂಡನ್​ನ ರಸ್ತೆ ಬದಿಯಲ್ಲಿ ಸಾಮಾನ್ಯನಂತೆ ಕೊಹ್ಲಿ ನಿಂತಿರೋ ವಿಡಿಯೋ ವೈರಲ್​​ ಆಗಿದೆ. ಇದ್ರ ಜೊತೆಗೆ ಕಿಂಗ್​ ಕೊಹ್ಲಿಯ ಕ್ರಿಕೆಟ್​ ಕರಿಯರ್​ನ ಭವಿಷ್ಯದ ಚರ್ಚೆಯೂ ಶುರುವಾಗಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ ಬಿಡ್ಡಿಂಗ್! 5 ಆಟಗಾರರ ಮೇಲೆ ಕೋಟಿ ಕೋಟಿ ಹಣ.. ಸಚಿನ್ ಅತ್ಯಂತ ದುಬಾರಿ!

ಕೈ ಕೊಟ್ಟ ಕೊಹ್ಲಿ.. ದುಲೀಪ್​ ಟ್ರೋಫಿಗೆ ಟಾಟಾ
ಮುಂಬರೋ ಬಾಂಗ್ಲಾದೇಶ ಸರಣಿಗೆ ಸಿದ್ಧತೆಯ ಭಾಗವಾಗಿ ಬಿಸಿಸಿಐ, ಟೀಮ್​ ಇಂಡಿಯಾದ ಸ್ಟಾರ್​ಗಳನ್ನ ದುಲೀಪ್​​ ಟ್ರೋಫಿ ಟೂರ್ನಿಯಲ್ಲಿ ಆಡಲು ಸೂಚಿಸಿತ್ತು. ವಿರಾಟ್​ ಕೊಹ್ಲಿಗೂ ಕೂಡ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಡೊಮೆಸ್ಟಿಕ್​ ಕಣದಿಂದ ಹಿಂದೆ ಸರಿದಿರೋ ಕೊಹ್ಲಿ ಮತ್ತೆ ವಿಶ್ರಾಂತಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಕೊಹ್ಲಿಗೊಂದು ನ್ಯಾಯ.? ಬೇರೆಯವರಿಗೆ ಒಂದು ನ್ಯಾಯಾನ ಎಂಬ ಪ್ರಶ್ನೆ ಹುಟ್ಟಿಸಿದೆ.

ಬಾಂಗ್ಲಾ ಟೆಸ್ಟ್​​ ಸರಣಿಗೆ 34 ದಿನಗಳು ಬಾಕಿ
ಮುಂಬರೋ ಬಾಂಗ್ಲಾ ಎದುರಿನ ಟೆಸ್ಟ್​ ಸರಣಿಗೆ 34 ದಿನಗಳ ಅಂತರ ಇದೆ. ಒಂದು ತಿಂಗಳಿಗೂ ಹೆಚ್ಚು ಕಾಲ ವಿರಾಟ್​ ಕೊಹ್ಲಿ ಬ್ಯಾಟ್​ ಮುಟ್ಟಲ್ಲ. ವಿದೇಶದಲ್ಲಿರೋದ್ರಿಂದ ಅಭ್ಯಾಸದ ಕಣದಿಂದಿಲೂ ಹೊರಗಿರ್ತಾರೆ. ಸುದೀರ್ಘ ದಿನಗಳ ಕಾಲ ಮೈದಾನದಿಂದ ಹೊರಗುಳಿಯೋ ಕೊಹ್ಲಿ, ನೇರವಾಗಿ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯೊಂದಿಗೆ ಕಮ್​ಬ್ಯಾಕ್​ ಮಾಡೋ ನಿರ್ಧಾರ ಮಾಡಿದ್ದಾರೆ. ಕೊಹ್ಲಿಗೆ ಪ್ರಾಕ್ಟಿಸ್​​ ಬೇಡ್ವಾ? ಅಭ್ಯಾಸವನ್ನೇ ನಡೆಸದೇ ನೇರವಾಗಿ ಸರಣಿಗೆ ಬರೋ ನಿರ್ಧಾರ ಎಷ್ಟರ ಮಟ್ಟಿಗೆ ಸರಿ? ಅನ್ನೋ ಪ್ರಶ್ನೆ ಈಗ ಚರ್ಚೆಯಲ್ಲಿವೆ.

ಇದನ್ನೂ ಓದಿ:ವಿನಯ್​ ಕುಮಾರ್​, ಬಾಲಾಜಿ ಸೈಡ್​ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!

9 ತಿಂಗಳಿಂದ ಟೆಸ್ಟ್​​​ ಕ್ರಿಕೆಟ್​ ಆಡಿಲ್ಲ ಕೊಹ್ಲಿ
ಈ ವರ್ಷದ ಆರಂಭದಲ್ಲಿ ನಡೆದ ಸೌತ್​ ಆಫ್ರಿಕಾ ಪ್ರವಾಸವೇ ಕೊನೆ. ಆ ಬಳಿಕ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ ಆಡೇ ಇಲ್ಲ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ತಂಡಕ್ಕೆ ಆಯ್ಕೆಯಾದ್ರೂ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಿದ್ದರಿಂದ ಕೊನೆಯ ಕ್ಷಣದಲ್ಲಿ ಸರಣಿಯಿಂದ ಹೊರಗುಳಿದಿದ್ರು. ಇದೀಗ 9 ತಿಂಗಳ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಕೊಹ್ಲಿ ಕಮ್​​ಬ್ಯಾಕ್​ ಮಾಡ್ತಿದ್ದಾರೆ. ಸುದೀರ್ಘ ಕಾಲದಿಂದ ರೆಡ್ ​ಬಾಲ್​ ಕ್ರಿಕೆಟನ್ನೇ ಆಡದ ಕೊಹ್ಲಿ, ಸಿದ್ಧತೆಯನ್ನೇ ನಡೆಸದೇ ನೇರವಾಗಿ ಬಾಂಗ್ಲಾ ಎದುರಿನ ಸರಣಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿರೋದು ಟೀಕೆಗೆ ಗುರಿಯಾಗುವಂತೆ ಮಾಡಿದೆ.

ಪದೇ ಪದೆ ವೈಫಲ್ಯ ಕಂಡರೂ ಎಚ್ಚೆತ್ತುಕೊಳ್ಳದ ಕೊಹ್ಲಿ
ಟಿ20 ವಿಶ್ವಕಪ್​ನಲ್ಲಿ ಫೈನಲ್​ ಪಂದ್ಯ ಹೊರತು ಪಡಿಸಿ ಉಳಿದ ಪಂದ್ಯಗಳಲ್ಲಿ ಕೊಹ್ಲಿ ಫ್ಲಾಪ್​ ಶೋ ನೀಡಿದ್ರು. ಟೂರ್ನಿ ಅಂತ್ಯದ ಬಳಿಕ ಲಂಡನ್​​ನಲ್ಲಿ ಬೀಡು ಬಿಟ್ಟಿದ್ದ ಕೊಹ್ಲಿ, ಬಳಿಕ ಶ್ರೀಲಂಕಾ ಎದುರಿನ ಏಕದಿನ ಸರಣಿ ವೇಳೆ ವಾಪಾಸ್ಸಾಗಿದ್ರು. ಸಿದ್ಧತೆಯೆ ಇಲ್ಲದೇ ಅಖಾಡಕ್ಕಿಳಿದ ಕೊಹ್ಲಿ, ಮೂರು ಪಂದ್ಯಗಳಲ್ಲಿ ಅ್ಟಟ್ಟರ್​ ಫ್ಲಾಪ್​ ಶೋ ನೀಡಿದ್ರು. ಈ ವೈಫಲ್ಯ ಮಾತ್ರವಲ್ಲ.. ಈ ವರ್ಷದಲ್ಲಿ ಪದೇ ಪದೇ ರೆಸ್ಟ್​ ಮೊರೆ ಹೊಗ್ತಿರೋದ್ರಿಂದ ಕೊಹ್ಲಿ ಬ್ಯಾಟ್​​ ಹಳೆ ಖದರ್​​ನಲ್ಲಿ ಸದ್ದೇ ಮಾಡಿಲ್ಲ.

ಇದನ್ನೂ ಓದಿ:ನೀರಜ್ ಬಗ್ಗೆ ಕೇಳ್ತಿದ್ದಂತೆ ನಾಚಿಕೊಂಡ ಮನು ಭಾಕರ್.. ಪ್ರೀತಿ, ಮದುವೆ ಬಗ್ಗೆ ಮೌನ ಮುರಿದ ಅಥ್ಲೀಟ್..!

2024ರಲ್ಲಿ ವಿರಾಟ್​ ಕೊಹ್ಲಿ
2024ರಲ್ಲಿ 15 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರುವ ವಿರಾಟ್​ ಕೊಹ್ಲಿ 296 ರನ್​ಗಳಿಸಿದ್ದಾರೆ. ಕೇವಲ 19.73ರ ಸರಾಸರಿಯಲ್ಲಿ ರನ್​ಗಳಿಸಿರೋ ಕೊಹ್ಲಿ 1 ಬಾರಿ ಮಾತ್ರ ಅರ್ಧಶತಕದ ಗಡಿ ದಾಟಿದ್ದಾರೆ.

ಅಭ್ಯಾಸದ ಕೊರತೆ..
ಅಭ್ಯಾಸದ ಕೊರತೆಯಿಂದಾಗಿ ಪದೇ ಪದೇ ಕೊಹ್ಲಿ ವೈಫಲ್ಯ ಅನುಭವಿಸ್ತಿದ್ದಾರೆ. ಶ್ರೀಲಂಕಾ ಮೂರು ಪಂದ್ಯದಲ್ಲಿ LBWಗೆ ವಿಕೆಟ್​ ಒಪ್ಪಿಸಿದ್ದು, ಇದಕ್ಕೆ ಹಿಡಿದ ಕನ್ನಡಿಯಾಗಿದೆ. ಲಾಂಗ್​ ಗ್ಯಾಪ್​ ಕೊಹ್ಲಿಗೆ ಪದೇ ಪದೇ ಮುಳುವಾಗ್ತಿದ್ರೂ, ವಿಶ್ರಾಂತಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಕರಿಯರ್​ ಆರಂಭದಲ್ಲಿ ದೇಶವೇ ಮೊದಲು ಎಂದು ಕ್ರಿಕೆಟ್​ಗೆ ಆದ್ಯತೆ ಕೊಡ್ತಿದ್ದ ಕೊಹ್ಲಿ, ಇದೀಗ ಫ್ಯಾಮಿಲಿ ಫಸ್ಟ್​ ಅಂತಿದ್ದಾರೆ. ಕೊಹ್ಲಿಯ ಈ ಆದ್ಯತೆ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಮತ್ತೆ ರೆಸ್ಟ್​ ಮೊರೆ ಹೋಗಿದ್ದಾರೆ. ಹೀಗಾಗಿ ಬಾಂಗ್ಲಾ ಎದುರಿನ ಸರಣಿಯಲ್ಲಿ ವಿರಾಟ್​ ಕೊಹ್ಲಿ ಪರ್ಫಾಮೆನ್ಸ್​ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಗೊಂದು ನ್ಯಾಯ? ಬೇರೆಯವ್ರಿಗೆ ಇನ್ನೊಂದು ನ್ಯಾಯ.. ಬಿಸಿಸಿಐನ ಸುಣ್ಣ, ಬೆಣ್ಣೆ ಆಟಕ್ಕೆ ಆಕ್ರೋಶ..!

https://newsfirstlive.com/wp-content/uploads/2024/07/ROHIT_SHARMA_KOHLI-2.jpg

Load More