/newsfirstlive-kannada/media/post_attachments/wp-content/uploads/2025/03/VIRAT_KOHLI_ANUSHKA_SHARMA.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ಬಾಕ್ಸ್ ಇವೆಂಟ್ಗಾಗಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಸಿಲಿಕಾನ್ ಸಿಟಿಗೆ ಆಗಮಿಸಿದ್ದಾರೆ. ಆರ್ಸಿಬಿ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಕೋಲ್ಕತ್ತಾ ವಿರುದ್ಧ ಆಡಲಿದೆ. ಚಾಂಪಿಯನ್ ಟ್ರೋಫಿ ಗೆದ್ದ ಜೋಶ್ನಲ್ಲಿರುವ ವಿರಾಟ್ ಕೊಹ್ಲಿ, ಬಿಸಿಸಿಐನ ಕುಟುಂಬ ನಿರ್ಬಂಧ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಹುಲ್ ದ್ರಾವಿಡ್- ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ಸ್ ಸ್ಪೋರ್ಟ್ಸ್ ಸಮಿಟ್ನಲ್ಲಿ ನಿರೂಪಕಿ ಇಸಾ ಗುಹಾ ಅವರ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಅವರು ಮಾತನಾಡಿ, ವಿದೇಶಗಳಲ್ಲಿ ಕ್ರಿಕೆಟ್ ಆಡುವಾಗ ಕಳಪೆ ಪ್ರದರ್ಶನದಿಂದ ತಂಡ ಸೋತಾಗ ಯಾವುದೇ ಆಟಗಾರ ಒಂಟಿಯಾಗಿ ಕುಳಿತು ದುಃಖಿಸಲು ಇಷ್ಟ ಪಡಲ್ಲ. ಕ್ರಿಕೆಟರ್ ಆಗಿರುವುದರ ಜೊತೆಗೆ ಒತ್ತಡಗಳ ಹೊರತಾಗಿ ಸಾಮಾನ್ಯನಾಗಿರಲು ಇಷ್ಟ ಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: 50 ಕ್ರಿಕೆಟ್ ಪ್ಲೇಯರ್ಗಳಿಗೆ ಭಾರೀ ಅವಮಾನ.. ಹಂಡ್ರೆಡ್ ಡ್ರಾಫ್ಟ್ನಲ್ಲಿ ಈ ದೇಶದ ಆಟಗಾರರೆಲ್ಲ ಅನ್ಸೋಲ್ಡ್!
ಮೈದಾನದಿಂದ ಹೊರಗೆ ಬಂದಾಗ ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಆಟಗಾರ ಸಾಮಾನ್ಯ ಸ್ಥಿತಿಗೆ ಬರುತ್ತಾನೆ. ಆಟದ ಜೊತೆ ಜೊತೆಗೆ ಕುಟುಂಬದೊಂದಿಗೆ ಯಾವಾಗ ಇರಲು ಬಯಸುತ್ತೇನೆ. ಮೈದಾನದಲ್ಲಿ ಕ್ರಿಕೆಟ್ ಆಡಿದ ಬಳಿಕ ರೂಮ್ಗೆ ಹೋಗಿ ಒಬ್ಬನೇ ಕುಳಿತು ದುಃಖಿಸಲು ಆಗಲ್ಲ. ಎಲ್ಲರಂತೆ ಸಾಮಾನ್ಯನಾಗಿ ಇರಬೇಕು. ಆಟದ ಎಲ್ಲ ಜವಾಬ್ದಾರಿ ಮುಗಿದ ಮೇಲೆ ಕುಟುಂಬದ ಜೊತೆ ಸಮಯ ಕಳೆಯಬಹುದು ಎಂದು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಸ್ಕಾರ್ ಟ್ರೋಫಿಯ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 3-1 ಅಂತರದಿಂದ ಸೋತಿತ್ತು. ಇದರಿಂದ ಬೇಸರಗೊಂಡಿದ್ದ ಬಿಸಿಸಿಐ ತಂಡದಲ್ಲಿ ಶಿಸ್ತು ಮತ್ತು ಏಕತೆ ತರಲು 10 ಅಂಶಗಳ ನಿಯಮವನ್ನು ಜಾರಿ ಮಾಡಿತ್ತು. ಈ ನಿಯಮ ಪಾಲಿಸದಿದ್ದರೇ ಆಟಗಾರರ ಬಿಸಿಸಿಐ ಒಪ್ಪಂದ, ಶುಲ್ಕ ಕಡಿತ ಹಾಗೂ ಐಪಿಎಲ್ನಿಂದ ಬ್ಯಾನ್ ಮಾಡುವ ಶಿಕ್ಷೆಯ ಕುರಿತು ಹೇಳಿತ್ತು. ಇದೀಗ ವಿರಾಟ್ ಕೊಹ್ಲಿಯವರು ಬಿಸಿಸಿಐ ರೂಲ್ಸ್ ವಿರುದ್ಧ ಕಿಡಿ ಕಾರಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ