newsfirstkannada.com

ಆರ್​​​ಸಿಬಿಗೆ ಬಿಗ್​ ಶಾಕ್​​.. ಪ್ಲೇ ಆಫ್​ಗೆ ಮುನ್ನವೇ ನಿವೃತ್ತಿ ಸುಳಿವು ಕೊಟ್ಟ ವಿರಾಟ್​ ಕೊಹ್ಲಿ!

Share :

Published May 16, 2024 at 5:43pm

  ಪ್ಲೇ ಆಫ್​ ರೇಸ್​ನಲ್ಲಿರೋ ಆರ್​​ಸಿಬಿ ಟೀಮ್​​ಗೆ ಬಿಗ್​ ಶಾಕ್​​

  ಆರ್​​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ ವಿರಾಟ್​ ಕೊಹ್ಲಿ..!

  ನಿವೃತ್ತಿ ಸುಳಿವು ಕೊಟ್ಟ ವಿರಾಟ್​ ಕೊಹ್ಲಿ ಹೇಳಿದ್ದೇನು?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಹೇಗಾದ್ರೂ ಮಾಡಿ ಪ್ಲೇ ಆಫ್​ಗೆ ಹೋಗಲೇಬೇಕು ಎಂದು ಆರ್​​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಹಾಗಾಗಿ ಮೇ 18ಕ್ಕೆ ನಡೆಯಲಿರೋ ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್​ ಪ್ರವೇಶಿಸಲು ಆರ್​​ಸಿಬಿ ಕಾತುರದಿಂದ ಕಾಯುತ್ತಿದೆ. ಇದರ ಮಧ್ಯೆ ವಿರಾಟ್​ ಕೊಹ್ಲಿ ನಿವೃತ್ತಿ ಸುಳಿವು ನೀಡಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಬಹುದು ಅನ್ನೋ ಚರ್ಚೆ ಎಷ್ಟೋ ದಿನಗಳಿಂದ ನಡೆಯುತ್ತಲೇ ಇದೆ. ಟಿ20 ವಿಶ್ವಕಪ್​ ಬಳಿಕ ಕೊಹ್ಲಿ ಭಾರತ ಟಿ20 ತಂಡದಿಂದ ಔಟ್​ ಆಗಲಿದ್ದಾರೆ. 35 ವರ್ಷದ ಕೊಹ್ಲಿಗೆ ಇದು ಕೊನೆ ಟಿ20 ವಿಶ್ವಕಪ್ ಎನ್ನಲಾಗಿತ್ತು. ಈ ಬಗ್ಗೆ ಕೊಹ್ಲಿ ಮೌನಮುರಿದಿದ್ದಾರೆ.

ನಾನು ಒಬ್ಬ ಕ್ರಿಕೆಟರ್​​. ನನಗೂ ಕೊನೆ ದಿನಾಂಕ ಎಂಬುದು ಇದೆ. ಅಯ್ಯೋ! ಮುಂದೇನು ಮಾಡೋದು ಅನ್ನೋ ಯೋಚನೆಯಲ್ಲೇ ನನ್ನ ವೃತ್ತಿ ಜೀವನಕ್ಕೆ ಗುಡ್​ ಬೈ ಹೇಳಲು ಇಷ್ಟವಿಲ್ಲ. ಕಾರಣ ನಾನು ಸದಾ ಹೀಗೆ ಇರಲು ಸಾಧ್ಯವಿಲ್ಲ. ನಾನು ಸುಮ್ಮನೇ ನಿವೃತ್ತಿ ಘೋಷಿಸಲು ಸಾಧ್ಯವಿಲ್ಲ. ಒಮ್ಮೆ ನನ್ನ ಕೆಲಸ ಮುಗಿದರೆ ನಾನು ನಿವೃತ್ತಿ ಘೋಷಿಸುತ್ತೇನೆ. ನಿವೃತ್ತಿ ಘೋಷಿಸಿದ ನಂತರ ನಾನು ಯಾರಿಗೂ ಕಾಣಲ್ಲ. ಹಾಗಾಗಿ ನಾನು ಕ್ರಿಕೆಟ್​ ಆಡುವತನಕ ಎಲ್ಲಾ ರೀತಿಯಲ್ಲೂ ತಂಡಕ್ಕೆ ಕೊಡುಗೆ ನೀಡಲು ಬಯಸುತ್ತೇನೆ ಎಂದರು.

ಅದ್ಭುತ ಫಾರ್ಮ್​​ನಲ್ಲಿರೋ ಕೊಹ್ಲಿ!

2024ರ ಐಪಿಎಲ್‌ನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಾನು ಇದುವರೆಗೂ ಆಡಿರೋ 13 ಪಂದ್ಯಗಳಲ್ಲಿ 661 ರನ್ ಗಳಿಸಿದ್ದಾರೆ. ಈ ಪೈಕಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: RCB ಪ್ಲೇ ಆಫ್​ಗೆ ಹೋಗೋ ಚಾನ್ಸ್​ ಎಷ್ಟಿದೆ..? ಏನಿದು ಮಾಜಿ ಕ್ರಿಕೆಟರ್ಸ್​ ಹೊಸ ಲೆಕ್ಕಾಚಾರ?

ಆರ್​​​ಸಿಬಿಗೆ ಬಿಗ್​ ಶಾಕ್​​.. ಪ್ಲೇ ಆಫ್​ಗೆ ಮುನ್ನವೇ ನಿವೃತ್ತಿ ಸುಳಿವು ಕೊಟ್ಟ ವಿರಾಟ್​ ಕೊಹ್ಲಿ!

https://newsfirstlive.com/wp-content/uploads/2024/04/VIRAT-KOHLI-6.jpg

Load More