ಕಾಶ್ಮೀರದಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಕೊಹ್ಲಿ ಕಿಡಿ.. ಕನ್ನಡಿಗ KL ರಾಹುಲ್ ಏನಂದ್ರು..?

author-image
Ganesh
Updated On
ಕಾಶ್ಮೀರದಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಕೊಹ್ಲಿ ಕಿಡಿ.. ಕನ್ನಡಿಗ KL ರಾಹುಲ್ ಏನಂದ್ರು..?
Advertisment
  • ದಾಳಿಗೆ ಒಟ್ಟು 26 ಮಂದಿ ಜೀವ ಕಳೆದುಕೊಂಡಿದ್ದಾರೆ
  • ದಾಳಿಯನ್ನು ಖಂಡಿಸಿದ ಕ್ರಿಕೆಟಿಗರು, ನ್ಯಾಯಕ್ಕಾಗಿ ಆಗ್ರಹ
  • ತೆಂಡುಲ್ಕರ್, ಗಿಲ್ ಎಲ್ಲರಿಂದಲೂ ಸಂತಾಪ ಸೂಚನೆ

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾಕ ದಾಳಿಯನ್ನು ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ರನ್ ಮಷಿನ್ ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಸೇರಿದಂತೆ ಅನೇಕ ಸ್ಟಾರ್​ ಕ್ರಿಕೆಟಿಗರು ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೊಹ್ಲಿ ಏನಂದ್ರು..?

ಪಹಲ್ಗಾಮ್​ನಲ್ಲಿ ನಡೆದ ಹೇಯ ದಾಳಿಗೆ ದುಃಖಿತನಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಎಲ್ಲಾ ಸಂತ್ರಸ್ತರಿಗೂ ನ್ಯಾಯ ಸಿಗಲಿ ಎಂದು ಕೊಹ್ಲಿ ಆಗ್ರಹಿಸಿದ್ದಾರೆ.

publive-image

ಕೆ.ಎಲ್.ರಾಹುಲ್

ಕನ್ನಡಿಗ ಕೆಎಲ್ ರಾಹುಲ್ ಟ್ವೀಟ್ ಮಾಡಿ, ಕಾಶ್ಮೀರದ ದಾಳಿ ವಿಚಾರ ಮನಸ್ಸಿಗೆ ತುಂಬಾ ನೋವು ತಂದಿದೆ. ಸಂತ್ರಸ್ತ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ನೊಂದ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಾದ ನೋವಿಗೆ ಮಿಡಿದ ರಾಜ್ ಕುಟುಂಬ.. ಹುಟ್ಟುಹಬ್ಬದಂದು ಕೇಕ್ ಕತ್ತರಿಸಲು ನಿರಾಕರಿಸಿದ ಯುವ

publive-image

ಕಣಿವೆ ನಾಡಿನ ಪಹಲ್ಗಾಮ್​​ನಲ್ಲಿ ಭಯಾನಕ ರೀತಿಯಲ್ಲಿ ಉಗ್ರರ ದಾಳಿಯಾಗಿದೆ. ಸಹಜ ಜೀವನ, ಶಾಂತಿ ಸ್ಥಿತಿಗೆ ಮರಳ್ತಿದ್ದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಪರಿಸ್ಥಿತಿಯನ್ನ ಬಿಗಡಾಯಿಸಿದೆ. ಕಣಿವೆ ನಾಡಿನಲ್ಲಿ ನಡೆದ ಇತ್ತೀಚಿನ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. ಬೇಸಿಗೆ ರಜೆ ಕಳೆಯಲು ಕಾಶ್ಮೀರಕ್ಕೆ ಆಗಮಿಸಿದ್ದ ಪ್ರವಾಸಿಗರನ್ನೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಕೃತ್ಯದ ಹೊಣೆಯನ್ನ ಎಲ್​​ಇಟಿಯ The Resistance Front ಹೊತ್ತುಕೊಂಡಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಿಂದ ಇಳಿದು ಬಂದ ಉಗ್ರರು, ಪ್ರವಾಸಿಗರ ಸೋಗಿನಲ್ಲಿ ಮಾತನಾಡಿಸುವ ನೆಪದಲ್ಲಿ ದಾಳಿ ಆರಂಭಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಓಪನ್​ ಫೈರ್​​ ಮಾಡಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್​​ನಲ್ಲಿ ನರಮೇಧ ನಡೆಸಿದ ಶಂಕಿತ ನಾಲ್ವರು ರಾಕ್ಷಸರ ಫೋಟೋ ರಿಲೀಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment