Advertisment

‘ಅವರು ಅಳುತ್ತಿದ್ದರು.. ಆಗ ನನ್ನ ಕಣ್ಣಲ್ಲೂ ನೀರು ಬಂತು..’ ರೋಹಿತ್​​ ಕಣ್ಣೀರಿಟ್ಟ ಕ್ಷಣ ವಿವರಿಸಿದ ಕೊಹ್ಲಿ

author-image
Ganesh
Updated On
ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್.. ನಿವೃತ್ತಿ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಬಿಟ್ಟು ಹೋಗ್ತಾರಾ?
Advertisment
  • ಟಿ-20 ವಿಶ್ವಕಪ್ ಗೆದ್ದು ಬಂದ ಟೀಂ ಇಂಡಿಯಾಗೆ ಸ್ವಾಗತ
  • ಮುಂಬೈನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿರಾಟ್ ಮಾತು
  • ಗೆಲುವು ಸಾಧಿಸ್ತಿದ್ದಂತೆ ರೋಹಿತ್ ಶರ್ಮಾ ಹೇಗಿದ್ದರು ಗೊತ್ತಾ?

ವಿಶ್ವಕಪ್​​ ಗೆದ್ದ ಅನುಭವವನ್ನು ಕಿಂಗ್ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿರಾಟ್.. ಬಾರ್ಬಡೋಸ್‌ನಲ್ಲಿ ಚಾಂಪಿಯನ್ ಆದ ನಂತರ ನಾನು ಮತ್ತು ರೋಹಿತ್ ಶರ್ಮಾ ಹೇಗೆ ಕಣ್ಣೀರು ಇಟ್ವಿ ಅನ್ನೋದನ್ನು ಹೇಳಿದ್ದಾರೆ.

Advertisment

ಅದು ನಮಗೆ ಮರೆಯಲಾರದ ಕ್ಷಣ. ವಿಜಯದ ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡೆವು. ನನ್ನ 15 ವರ್ಷಗಳ ವೃತ್ತಿ ಜೀವನದಲ್ಲಿ ರೋಹಿತ್‌ ಅವರು ಇಷ್ಟು ಭಾವುಕರಾಗಿದ್ದನ್ನ ನೋಡಿರಲಿಲ್ಲ. ಮೊದಲ ಬಾರಿಗೆ ರೋಹಿತ್ ಶರ್ಮಾ ತುಂಬಾ ಭಾವುಕರಾಗಿರುವುದನ್ನು ನೋಡಿದೆ. ನಾನು ಡ್ರೆಸ್ಸಿಂಗ್ ರೂಮ್​​ನ ಮೆಟ್ಟಿಲು ಹತ್ತುವಾಗ ಅವರು ಅಳುತ್ತಿದ್ದರು. ನನಗೂ ಕಣ್ಣೀರು ಬಂತು. ನಾವಿಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡೆವು. ನಾವು ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ. ಟ್ರೋಫಿಯನ್ನು ತಂದಿದ್ದೇವೆ, ಇದಕ್ಕಿಂತ ಒಳ್ಳೆಯದ್ದು ಬೇರೆ ಏನೂ ಇಲ್ಲ.

publive-image

ಇದನ್ನೂ ಓದಿ:ಎಕ್ಸಿಟ್​ ಪೋಲ್​​ನಲ್ಲಿ ಹೀನಾಯ ಸೋಲಿನ ಭವಿಷ್ಯ.. ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ?

2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ನಂತರ ಸಚಿನ್ ತೆಂಡೂಲ್ಕರ್ ಸೇರಿದಂತೆ ತಂಡದ ಹಿರಿಯ ಆಟಗಾರರು ಅಳುತ್ತಿದ್ದರು. ಅವರು ಯಾಕೆ ಕಣ್ಣೀರು ಹಾಕ್ತಿದ್ದಾರೆ ಎಂದು ಅರ್ಥ ಆಗಿರಲಿಲ್ಲ. ಇದೀಗ ನಾನು ತಂಡದ ಹಿರಿಯ ಆಟಗಾರನಾದ ಮೇಲೆ ಅರಿತುಕೊಂಡೆ ಎಂದಿದ್ದಾರೆ.

Advertisment

ಟೀಂ ಇಂಡಿಯಾಗೆ 125 ಕೋಟಿ ಬಹುಮಾನ
ಟೀಂ ಇಂಡಿಯಾಗೆ 125 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ಚಾಂಪಿಯನ್ ಆದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ ಮಾಡಿದ್ದಾರೆ. ಈ ಬಹುಮಾನದ ಚೆಕ್ ಅನ್ನು ಟೀಂ ಇಂಡಿಯಾಗೆ ಸನ್ಮಾನ ಸಮಾರಂಭದಲ್ಲಿ ನೀಡಲಾಯಿತು.

ಇದನ್ನೂ ಓದಿ:ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment