/newsfirstlive-kannada/media/post_attachments/wp-content/uploads/2025/04/VIRAT-KOHLI-4.jpg)
ರಾಜಸ್ಥಾನ್ ರಾಯಲ್ಸ್ನ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 14 ವರ್ಷದ ಈ ಹುಡುಗ ಕೇವಲ 35 ಬಾಲ್ನಲ್ಲಿ 11 ಸಿಕ್ಸರ್, 7 ಬೌಂಡರಿಯೊಂದಿಗೆ ಶತಕ ಬಾರಿಸುತ್ತಿದ್ದಂತೆಯೇ ವಿಶ್ವ ಕ್ರಿಕೆಟ್ನ ದಿಗ್ಗಜರು, ಪುಟ್ಟ ಪೋರನ ಕೊಂಡಾಡುತ್ತಿದ್ದಾರೆ.
ಅದರಂತೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿ, ಒಂದಡೆ ಸಾಮರ್ಥ್ಯ ಹಾಗೂ ಮತ್ತೊಂದೆಡೆ ವೈಭವ್ ಸೂರ್ಯವಂಶಿ. ಮುಂದಿನ ಪೀಳಿಗೆಯನ್ನು ಮುನ್ನಡೆಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್.. ಮಾವನ ಮೇಲೆ ದಾಳಿಗೆ ಮಚ್ಚು, ದೊಣ್ಣೆ ತಂದ ಸೊಸೆ; ಕಾರಣವೇನು?
ಅದೇ ರೀತಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪ್ರತಿಕ್ರಿಯಿಸಿ, ವೈಭವ್ನ ನಿರ್ಭಿತ ಆಟ, ಬ್ಯಾಟ್ ಬೀಸುವ ವೇಗ, ಮುಂಚಿತವಾಗಿಯೇ ಬಾಲ್ನ ಸ್ಪೀಡ್ ಗಮನಿಸಿಕೊಂಡು ಬ್ಯಾಟಿಂಗ್ ಮಾಡುವ ರೀತಿ ತುಂಬಾ ಸೊಗಸಾಗಿದೆ ಎಂದು ತೆಂಡುಲ್ಕರ್ ಬಣ್ಣಿಸಿದ್ದಾರೆ.
ನಿಮಗೆ 14 ವಯಸ್ಸಾಗಿದ್ದಾಗ ಏನು ಮಾಡುತ್ತಿದ್ದೀರಿ? ಈ ಬಾಲಕ ವಿಶ್ವಶ್ರೇಷ್ಠ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದಾನೆ. ಈತನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ‘ಗುರಿ, ಸಮಯ ನೀವೇ ನಿರ್ಧರಿಸಿ..’ ಮೋದಿ ಮೀಟಿಂಗ್ನಲ್ಲಿ ತೆಗೆದುಕೊಂಡು 5 ನಿರ್ಧಾರಗಳು ಏನೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್