ಆರ್ಸಿಬಿ ನಾಯಕ ಫಾಫ್ ಡು ಫ್ಲೆಸ್ಸಿಸ್ ತಂಡದ ಬಗ್ಗೆ ಹೇಳಿದ್ದೇನು?
ಹೋರಾಟದಲ್ಲಿ ಯಾವುದೂ ಅಸಾಧ್ಯವಲ್ಲ, ಆರ್ಸಿಬಿ ಎಕ್ಸಾಂಪಲ್!
NEVER GIVE UP ಅಟಿಟ್ಯುಡ್ನೊಂದಿಗೆ ಕಣಕ್ಕಿಳಿದಿದ್ದ ಆರ್ಸಿಬಿ
ಪ್ಲೇ ಆಫ್ಗೆ ಆರ್ಸಿಬಿ ಎಂಟ್ರಿ ಆಗಿರೋ ಮಾತು ನಿಜಾನಾ ಎಂಬ ಅನುಮಾನ ಇವತ್ತಿಗೂ ಕೆಲವರಿಗೆ ಕಾಡ್ತಿದೆ. ಯಾಕಂದ್ರೆ, ಆರ್ಸಿಬಿಯ ಈ ಸಾಧನೆ ಅಸಾಧ್ಯವಾದುದ್ದಾಗಿತ್ತು. ಜಸ್ಟ್ 2 ವಾರಗಳ ಹಿಂದೆ ಮಾತು ಹೇಳಿದ್ರೆ, ಎಲ್ರೂ ನಗ್ತಾ ಇದ್ರು. ಕೇವಲ 1 ಪರ್ಸೆಂಟ್ ಚಾನ್ಸ್ ಉಳಿಸಿಕೊಂಡಿದ್ದ, ಆರ್ಸಿಬಿ ಪ್ಲೇ ಆಫ್ ಪ್ರವೇಶ ಮಾಡಿದ ಪರಿ ನಿಜಕ್ಕೂ ರೋಚಕ. ಅತಿ ರೋಚಕ. ಅಂಥಹ ರೋಚಕ ಜರ್ನಿಯ ಮಾಹಿತಿ ಇಲ್ಲಿದೆ.
ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು. 7 ಸೋಲು.. ಈ ಪೈಕಿ ಸತತ 6 ಮುಖಭಂಗ. ಪಾಯಿಂಟ್ ಟೇಬಲ್ನಲ್ಲಿ ಕೊನೆ ಸ್ಥಾನ. 10ನೇ ಸ್ಥಾನದಲ್ಲಿದ್ದ ಆರ್ಸಿಬಿ ಕನಿಷ್ಠ 9ನೇ ಸ್ಥಾನಕ್ಕೇರುತ್ತೆ ಎಂಬ ಕಿಂಚಿತ್ತೂ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದ್ರೆ, ಅಸಾಧ್ಯ ಅಂದದನ್ನ ಸಾಧಿಸಿ ತೋರಿಸಿದೆ ಆರ್ಸಿಬಿ.
ಇದನ್ನೂ ಓದಿ: ವಿಲನ್ಗಳೇ ಹೀರೋಗಳಾದ ಕಥೆ.. ಈ ಯಂಗ್ ಪ್ಲೇಯರ್ ಆಡಿದ ಪಂದ್ಯಗಳಲ್ಲಿ RCBಗೆ ರೋಚಕ ಗೆಲುವು
ಕೆಲವೊಮ್ಮೆ ನಿರೀಕ್ಷೆ ಮಾಡದಂತ ಘಟನೆಗಳು ನಡೆಯುತ್ತವೆ. ದುರಾದೃಷ್ಟಕರವಾದ ಘಟನೆಗಳೂ ನಡೆಯುತ್ತವೆ. ಇವತ್ತು ನಾನು ಇಲ್ಲಿರೋದಕ್ಕೆ ಕಾರಣ ಇನ್ನೂ 1% ಅವಕಾಶವಿದೆ. ಕೆಲವೊಮ್ಮೆ ಈ ಅವಕಾಶ ಸಾಕು. ಆದ್ರೆ, ನೀವು ಆ 1% ಅವಕಾಶದ ಬಗ್ಗೆ ಹೇಗೆ ಯೋಚಿಸ್ತಿರಿ ಅನ್ನೋದು ಮುಖ್ಯವಾಗುತ್ತೆ. ನೀವು ಆಟದಲ್ಲಿ ಸಂಪೂರ್ಣ ಪರಿಶ್ರಮ ಹಾಕಲು ಬಯಸಿದ್ರೆ, ಅದನ್ನು 1ರಿಂದ 10 ಪರ್ಸೆಂಟ್ ಮಾಡಬಹುದು. ನಂತರ 10ರಿಂದ 30ಕ್ಕೆ ಹೆಚ್ಚಿಸಬಹದು. ಅಂತಿಮವಾಗಿ ಏನಾದರೂ ಮ್ಯಾಜಿಕ್ ನಡೆಯಬಹುದು.
ವಿರಾಟ್ ಕೊಹ್ಲಿ, ಆಟಗಾರ
ವರ್ಷದ ಹಿಂದೆ ಆರ್ಸಿಬಿ ವನಿತೆಯರಿಗೆ ಕೊಹ್ಲಿ ಹೇಳಿದ ಮಾತುಗಳಿವು. ಅಂದಿನ ಮಾತು, ಇಂದು ನಿಜವಾಗಿದೆ. ಈ ಸೀಸನ್ನಲ್ಲಿ ಆರ್ಸಿಬಿ ಮೆನ್ಸ್ ತಂಡದ ಪರಿಸ್ಥಿತಿ ಹಾಗೇ ಇತ್ತು. ಆದ್ರೆ, ಆ 1 ಪರ್ಸೆಂಟ್ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ.
ಸತತ 6 ಸೋಲು.. ಪ್ಲೇ ಆಫ್ ಚಾನ್ಸ್ ಶೇ.1ರಷ್ಟು..!
ಮೊದಲ ಪಂದ್ಯದಲ್ಲಿ ಇದೇ ಚೆನ್ನೈ ಎದುರು ಮುಖಭಂಗ ಅನುಭವಿಸಿದ್ದ ಆರ್ಸಿಬಿ, ತವರಿನಲ್ಲಿ ನಡೆದ 2ನೇ ಪಂದ್ಯದಲ್ಲಿ ಗೆದ್ದು ಬೀಗಿತ್ತು. ಆರ್ಸಿಬಿ ಹೊಸ ಅಧ್ಯಾಯ ಕಿಕ್ ಸ್ಟಾರ್ಟ್ ಆಯ್ತು ಎಂದು ಭಾವಿಸಿಲಾಗಿತ್ತು. ಆದ್ರೆ, ಅದ್ರ ಬೆನ್ನಲ್ಲೇ ಒಂದಲ್ಲ.. ಎರಡಲ್ಲ.. ಸತತ 6 ಪಂದ್ಯಗಳಲ್ಲಿ ಸೋಲುಂಡಿತು. ಈ 6 ಸೋಲುಗಳು, ಆರ್ಸಿಬಿಯ ಪ್ಲೇ ಆಫ್ ಕನಸನ್ನ ಬಹುತೇಕ ಕಮರುವಂತೆ ಮಾಡಿತ್ತು. ಕೆಕೆಎರ್ ಎದುರು ಈಡನ್ ಗಾರ್ಡನ್ಸ್ನಲ್ಲಿ 1 ರನ್ನಿಂದ ಸೋತಾಗ ಆರ್ಸಿಬಿಗೆ ಪ್ಲೇ ಆಫ್ ಎಂಟ್ರಿಗಿದ್ದ ಚಾನ್ಸ್ ಕೇವಲ 1 ಪರ್ಸೆಂಟ್ ಮಾತ್ರ.
ನಮಗೆ ಕೇವಲ 1 ಪರ್ಸೆಂಟ್ ಚಾನ್ಸ್ ಇತ್ತು. ಹೀಗಾಗಿ ನಾವು ಉತ್ತಮ ಕ್ರಿಕೆಟ್ ಆಡಲು ಬಯಸಿದ್ವಿ. 2 ಪಂದ್ಯಗಳ ನಂತರ ಪ್ಲೇ ಆಫ್ ಅವಕಾಶದ ಬಗ್ಗೆ ಯೋಚನೆ ಮಾಡಿದ್ವಿ. ಇಂದು ಆಫ್ಫೀಲ್ಡ್ನತ್ತ ಹೆಜ್ಜೆ ಹಾಕುತ್ತಿದ್ದರೆ ಕನಸಿನಂತೆ ಭಾಸವಾಗುತ್ತಿದೆ.
ಫಾಫ್ ಡು ಫ್ಲೆಸ್ಸಿಸ್, ಆರ್ಸಿಬಿ ನಾಯಕ
ಸೋಲು.. ಟೀಕೆ ಟಿಪ್ಪಣೆ.. ಗ್ರೇಟ್ ಕಮ್ಬ್ಯಾಕ್
ಸತತ ಸೋಲಿನಿಂದ ಕಗ್ಗಂಟ್ಟಿದ್ದ ಆರ್ಸಿಬಿಯ ಪ್ಲೇ ಆಫ್ ಡೋರ್ ಬಹುತೇಕ ಮುಚ್ಚಿತ್ತು. ದಿಗ್ಗಜ ಆಟಗಾರರು ಆರ್ಸಿಬಿ ತಂಡಕ್ಕೆ ಕೊನೆ ಸ್ಥಾನವೇ ಗತಿ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ರು. ಆದ್ರೆ, NEVER GIVE UP ಆಟಿಟ್ಯುಡ್ ನೊಂದಿಗೆ ಕಣಕ್ಕಿಳಿದ ಆರ್ಸಿಬಿ ಬಲಿಷ್ಠ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಅವರದೇ ನೆಲದಲ್ಲಿ ಸೋಲಿಸಿತ್ತು. ಅಲ್ಲಿಂದ ಶುರುವಾಯ್ತು ನೋಡಿ ಆರ್ಸಿಬಿಯ ಅಸಲಿ ಹೊಸ ಅಧ್ಯಾಯ..
ಡು ಆರ್ ಡೈ.. ವೀರ ಹೋರಾಟ.. 6ಕ್ಕೆ 6 ಜಯ..!
9 ಪಂದ್ಯಗಳ ಪೈಕಿ ಜಸ್ಟ್ ಎರಡರಲ್ಲಿ ಮಾತ್ರ ಗೆದ್ದಿದ್ದ ಆರ್ಸಿಬಿ, ಸನ್ ರೈಸರ್ಸ್ ಎದುರಿನ ಗೆಲುವು ಹೊಸ ಅಧ್ಯಾಯಕ್ಕೆ ನಾಂದಿಯಾಡ್ತು. ಪ್ಲೇ-ಆಫ್ ಎಂಟ್ರಿಗೆ ಕೇವಲ 1 ಪರ್ಸೆಂಟ್ ಮಾತ್ರವೇ ಅವಕಾಶ ಇದ್ದರೂ, ಹೋರಾಟದ ಛಲ ಬಿಡದ ಆರ್ಸಿಬಿ ಪ್ರತಿ ಮ್ಯಾಚ್ನ ನಾಕೌಟ್ನಂತೆ ಸ್ವೀಕರಿಸಿತು. ಇದಕ್ಕೆ ಸಿಕ್ಕ ಪ್ರತಿಫಲ 6ಕ್ಕೆ 6 ಗೆಲುವು.
ಇದನ್ನೂ ಓದಿ: KGF ಪಾರ್ಟ್-1 ಹಿಟ್ ಆಗ್ಲಿಲ್ಲ.. ಪಾರ್ಟ್- 2 ಬ್ಲಾಕ್ ಬಸ್ಟರ್ ಹಿಟ್; RCB ಫುಲ್ ಪೈಸಾ ವಸೂಲ್
ಬ್ಯಾಕ್ ಟು ಬ್ಯಾಕ್ ಗುಜರಾತ್ ಎದುರು 2 ಪಂದ್ಯ ಗೆದ್ದ ಆರ್ಸಿಬಿ, ಪಾಯಿಂಟ್ ಟೇಬಲ್ನ ಕೊನೆ ಸ್ಥಾನದಿಂದ 7ನೇ ಸ್ಥಾನಕ್ಕೆ ಲಗ್ಗೆ ಇಡ್ತು. ಈ ಬೆನ್ನಲ್ಲೇ ಪಂಜಾಬ್ ಹಾಗೂ ಡೆಲ್ಲಿ ಎದುರು ಗೆಲುವು ಸಾಧಿಸಿದ ಆರ್ಸಿಬಿ 5ನೇ ಸ್ಥಾನಕ್ಕೆ ಎಂಟ್ರಿ ನೀಡ್ತು. ಆದ್ರೆ, ಕಹಾನಿ ಮೇ ಟ್ವಿಸ್ಟ್ ಎಂಬಂತೆ ಲಕ್ನೋ ಎದುರು ಡೆಲ್ಲಿ ಗೆದ್ದಾಗ ಮತ್ತೆ ಪಾಂಯಿಂಟ್ ಟೇಬಲ್ನಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ಬಳಿಕ ಚಿನ್ನಸ್ವಾಮಿಯಲ್ಲಿ ಡೆಲ್ಲಿಗೆ ಡಿಚ್ಚಿ ನೀಡಿ, ಚೆನ್ನೈಗೆ ಚಮಕ್ ನೀಡಿದ ಆರ್ಸಿಬಿ, 4ನೇ ತಂಡವಾಗಿ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡ್ತು.
ಇದನ್ನೂ ಓದಿ: ಲೋಕಲ್ ಬಾಯ್ಸ್ನಂತೆ ಹೆಗಲ ಮೇಲೆ ಕೈ ಹಾಕೊಂಡು ಭರ್ಜರಿ ಸ್ಟೆಪ್ಸ್.. ಕಾರ್ತಿಕ್, ಸಿರಾಜ್ ಡ್ಯಾನ್ಸ್ ಹೇಗಿದೆ?
ಅಸಾಧ್ಯವಾದುದ್ದು ಯಾವುದು ಇಲ್ಲ.. ಇದಕ್ಕೆ ಆರ್ಸಿಬಿಯ ಕಮ್ಬ್ಯಾಕ್ ಕಥೆಯೇ ಸ್ಪೂರ್ತಿ. ಸತತ ಸೋಲನುಭವಿಸಿದ್ರೂ, ಆರ್ಸಿಬಿಯಲ್ಲಿ ಹೋರಾಟದ ಕಿಚ್ಚಿತ್ತು. ಗುರಿ ಸ್ಪಷ್ಟವಾಗಿತ್ತು. ಸಾಧಿಸುವ ಛಲ ತಂಡದಲ್ಲಿತ್ತು. ಆರ್ಸಿಬಿ ಸಾಗಿ ಬಂದ ಹಾದಿಯಲ್ಲಿ ನಂಬಿಕೆಯೊಂದೇ ಆಸ್ತಿಯಾಗಿತ್ತು. ಬಂದೆಲ್ಲ ಸವಾಲನ್ನ ಸ್ವೀಕರಿಸಿ, ಆನ್ ಫೀಲ್ಡ್ನಲ್ಲಿ ನೂರರಷ್ಟು ಎಫರ್ಟ್ ಹಾಕಿ, ಒಗ್ಗಟ್ಟಾಗಿ ಹೋರಾಡಿ ಇದೀಗ ಗುರಿ ತಲುಪಿದೆ. ಯಾವುದೂ ಅಸಾಧ್ಯವಲ್ಲ ಅನ್ನೋ ಮಾತಿಗೆ ಈ ಸೀಸನ್ನ ಆರ್ಸಿಬಿ ಜರ್ನಿ ಬೆಸ್ಟ್ ಎಕ್ಸಾಂಪಲ್.!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ