/newsfirstlive-kannada/media/post_attachments/wp-content/uploads/2025/03/KOHLI_Unbox.jpg)
ವಿರಾಟ್ ಕೊಹ್ಲಿ ಮುಂದಿನ ನಡೆ ಏನು.? T20 ಇಂಟರ್ ನ್ಯಾಷನಲ್ ಹಾಗೂ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಕೊಹ್ಲಿ ಮುಂದೇನು ಮಾಡ್ತಾರೆ.? ತೀವ್ರ ಚರ್ಚೆಯಾದ ಈ ಪ್ರಶ್ನೆಗಳಿವು. ಈ ಕುತೂಹಲಕ್ಕೆ ವಿರಾಟ್ ಕೊಹ್ಲಿ ತಮ್ಮ ನಡೆಯಿಂದಲೇ ಆನ್ಸರ್ ಕೊಟ್ಟಿದ್ದಾರೆ. ಕಿಂಗ್ ಆಗಿ ಕ್ರಿಕೆಟ್ ಲೋಕವನ್ನ ಆಳಿದ ಕೊಹ್ಲಿ ಇದೀಗ ಬ್ಯುಸಿನೆಸ್ ಲೋಕವನ್ನ ಕಬ್ಜ ಮಾಡಿಕೊಳ್ಳಲು ಹೊರಟಿದ್ದಾರೆ.
ಕ್ರಿಕೆಟ್ ಲೋಕ ಕಂಡ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಿಧಾನವಾಗಿ ಕ್ರಿಕೆಟ್ ಫೀಲ್ಡ್ನಿಂದ ದೂರವಾಗ್ತಿದ್ದಾರೆ. ಟಿ20 ಇಂಟರ್ನ್ಯಾಷನಲ್, ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿ ಈಗ ಏಕದಿನಕ್ಕೆ ಮಾತ್ರ ಸೀಮಿತ. ಕ್ರಿಕೆಟ್ ಮೈದಾನನಿಂದ ಹೊರ ಬರ್ತಿರೋ ವಿರಾಟ್ ಕೊಹ್ಲಿ ಹೊಸ ಫೀಲ್ಡ್ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಕ್ರಿಕೆಟ್ ಸಾಮ್ರಾಜ್ಯವನ್ನ ಸುಲ್ತಾನನಂತೆ ಕಿಂಗ್ ಕೊಹ್ಲಿ, ಇದೀಗ ಬ್ಯುಸಿನೆಸ್ ಲೋಕವನ್ನ ಕಬ್ಜಾ ಮಾಡೋಕೆ ಹೊರಟಿದ್ದಾರೆ.
ಕ್ರಿಕೆಟ್ ಆಡ್ತಿದ್ದಾಗ್ಲೂ ವಿರಾಟ್ ಕೊಹ್ಲಿ ಬ್ಯುಸಿನೆಸ್ ಲೋಕದಲ್ಲಿ ಸಕ್ರೀಯರಾಗೇ ಇದ್ದರು. ಆದ್ರೆ, ಆಗ ಫುಲ್ ಟೈಮ್ ಕ್ರಿಕೆಟರ್, ಪಾರ್ಟ್ ಟೈಮ್ ಬ್ಯುಸಿನೆಸ್ಮನ್ ಆಗಿದ್ದರು. ಇದೀಗ ಫುಲ್ ಟೈಮ್ ಬ್ಯುಸಿನೆಸ್ ಮನ್, ಪಾರ್ಟ್ ಟೈಮ್ ಕ್ರಿಕೆಟರ್ ಆಗೋಕೆ ವಿರಾಟ್ ಕೊಹ್ಲಿ ಹೊರಟಿದ್ದಾರೆ. ಬ್ಯುಸಿನೆಸ್ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರೋ ಕೊಹ್ಲಿ ಮೊದಲ ಹೆಜ್ಜೆಯಲ್ಲೇ ಬರೋಬ್ಬರಿ 40 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಅಜಿಲಿಟಾಸ್ ಕಂಪನಿಯಲ್ಲಿ ಕೊಹ್ಲಿ ಹೂಡಿಕೆ.!
ಪೂಮಾ ಕಂಪನಿಯ ಇಂಡಿಯಾ ಹೆಡ್ ಆಗಿದ್ದ ಅಭಿಷೇಕ್ ಗಂಗೂಲಿ ಹೊಸದಾಗಿ ಅಜಿಲಿಟಾಸ್ ಅನ್ನೋ ಕಂಪನಿ ಆರಂಭಿಸಿದ್ದಾರೆ. ಇದೀಗ ಅಭಿಷೇಕ್ ಗಂಗೂಲಿ ಜೊತೆಗೆ ವಿರಾಟ್ ಕೊಹ್ಲಿ ಕೈ ಜೋಡಿಸಿದ್ದಾರೆ. ಸ್ಪೋರ್ಟ್ಸ್ ವೇರ್ ಕಂಪನಿಯನ್ನ ಆರಂಭಿಸಲು ಅಭಿಷೇಕ್ ಗಂಗೂಲಿ ಮುಂದಾಗಿದ್ದಾರೆ. ಈ ಕಂಪನಿ ಜೊತೆಗೆ ಕೊಹ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಇಲ್ಲಿ ಕೊಹ್ಲಿ ಕೇವಲ ಬ್ರ್ಯಾಂಡ್ ಅಂಬಾಸಿಡರ್ ಮಾತ್ರವಲ್ಲ, ಓನರ್ ಕೂಡ ಹೌದು. ಈ ಸ್ಪೋರ್ಟ್ಸ್ವೇರ್ ಕಂಪನಿಯಲ್ಲಿ 40 ಕೋಟಿ ಹಣವನ್ನ ಕೊಹ್ಲಿ ಹೂಡಿಕೆ ಮಾಡಲಿದ್ದಾರೆ. ಕೇವಲ 40 ಕೋಟಿನಾ ಅಂದ್ಕೋಬೇಡಿ. ಇದು ಆರಂಭಿಕ ಹೂಡಿಕೆಯಷ್ಟೇ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಹೂಡಿಕೆ ಮಾಡಲಿದ್ದಾರೆ ಅನ್ನೋದು ಕಂಪನಿ ಮೂಲದ ಮಾತಾಗಿದೆ.
2023ರಲ್ಲಿ ಅಜಿಲಿಟಾಸ್, ಭಾರತದ ಟಾಪ್ ಶೂ ಉತ್ಪಾದಕ ಕಂಪನಿಯಾದ ಮೊಚಿಕೋ ಶೂಸ್ ಅನ್ನ ಕಬ್ಜ ಮಾಡಿದೆ. ಅಡಿಡಾಸ್, ಪೂಮಾ, ನ್ಯೂ ಬ್ಯಾಲೆನ್ಸ್, ಯುಎಸ್ ಪೋಲೋ ಸೇರಿದಂತೆ ಹಲವು ಟಾಪ್ ಬ್ರಾಂಡ್ಗಳ ಶೂಗಳು ಮೊಚಿಕೋ ಶೂಸ್ನಲ್ಲೇ ತಯಾರಾಗ್ತಿದ್ದವು. ಇದ್ರ ಜೊತೆಗೆ ಭಾರತದ ಅತಿ ದೊಡ್ಡ ಸ್ಪೋರ್ಟ್ಸ್ ಫೂಟ್ವೇರ್ ಕಂಪನಿಯಾದ ಲೊಟೋದ ಲೈಸನ್ಸ್ ರೈಟ್ಸ್ ಅನ್ನೂ ಅಜಿಲಿಟಾಸ್ ಖರೀದಿಸಿದೆ. ಈ ಮೂಲಕ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಶೂಗಳನ್ನ ಸೇಲ್ ಮಾಡೋ ರೈಟ್ಸ್ ಪಡೆದುಕೊಂಡಿದೆ. ತಯಾರಿಕಾ ಕಂಪನಿ ಹಾಗೂ ಸೇಲ್ ಮಾಡೋ ರೈಟ್ಸ್ ಎರಡನ್ನೂ ಪಡೆದಿರೋ ಅಜಿಲಿಟಾಸ್ ಇದೀಗ ತನ್ನದೇ ಆದ ಹೊಸ ಬ್ರ್ಯಾಂಡ್ನ ಪರಿಚಯಿಸೋ ಪ್ಲಾನ್ನಲ್ಲಿದೆ. ಅಂದ್ಹಾಗೆ ಈ ಬ್ರ್ಯಾಂಡ್ ಕೇವಲ ಶೂಗೆ ಸೀಮಿತವಲ್ಲ.. A TO Z ಸ್ಪೋರ್ಟ್ಸ್ಗೆ ಸಂಬಂಧಿಸಿದ ಎಲ್ಲವನ್ನೂ ಈ ಕಂಪನಿ ತಯಾರಿಸಲಿದೆ.
ಪುಮಾದ ಆಫರ್ ರಿಜೆಕ್ಟ್ ಮಾಡಿದ್ದು ಇದಕ್ಕೇನಾ.?
2017ರಿಂದ ವಿರಾಟ್ ಕೊಹ್ಲಿ ಪೂಮಾದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ರು. 8 ವರ್ಷಗಳ ಕಾಲಕ್ಕೆ ಬರೋಬ್ಬರಿ 110 ಕೋಟಿಗೆ ಆಗ ಒಪ್ಪಂದ ಮಾಡಿಕೊಂಡಿದ್ದರು. ಆಗ ಅಭಿಷೇಕ್ ಗಂಗೂಲಿ ಪೂಮಾ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಈ ವರ್ಷದ ಆರಂಭದಲ್ಲಿ ಅದನ್ನ ರಿನ್ಯೂವಲ್ ಮಾಡಿಕೊಳ್ಳಲು ಪೂಮಾ ಬಿಗ್ ಆಫರ್ ನೀಡಿತ್ತು. 300 ಕೋಟಿ ಹಣವನ್ನ ನೀಡಲು ಪೂಮಾ ಮುಂದಾಗಿತ್ತು. ಆದ್ರೆ, ಕೊಹ್ಲಿ ಆಫರ್ನ ರಿಜೆಕ್ಟ್ ಮಾಡಿದರು. ಅಭಿಷೇಕ್ ಗಂಗೂಲಿಯ ಹೊಸ ಕಂಪನಿಯಲ್ಲಿ ಹೂಡಿಕೆ ಮಾಡೋ ದೃಷ್ಟಿಯಿಂದಲೇ ಕೊಹ್ಲಿ ಆ ಆಫರ್ನ ರಿಜೆಕ್ಟ್ ಮಾಡಿದರು.
ಇದನ್ನೂ ಓದಿ:ರೈತರೇ ಹುಷಾರ್..! ಜಿಲ್ಲೆಯಲ್ಲಿ ನಕಲಿ DAP ಗೊಬ್ಬರ ಮಾರಾಟ.. ಇಬ್ಬರು ಅರೆಸ್ಟ್
ಫುಲ್ ಟೈಮ್ ಬ್ಯುಸಿನೆಸ್ಮನ್ ಆಗಿ ಕೊಹ್ಲಿಯದ್ದು ಇದು ಮೊದಲ ಹೆಜ್ಜೆ. ಪಾರ್ಟ್ ಟೈಮ್ ಇದ್ದಾಗಲೇ ಹಲವು ಕಡೆ ಹೂಡಿಕೆ ಮಾಡಿದ್ದಾರೆ. ಒನ್ 8 ತನ್ನದೇ ಕಂಪನಿ ಹುಟ್ಟು ಹಾಕಿರುವ ಕೊಹ್ಲಿ, ಡಿಜಿಟ್ ಇನ್ಶೂರೆನ್ಸ್, MPL, Wrogn ಸೇರಿದಂತೆ ಹಲವು ಸ್ಟಾರ್ಟ್ಅಪ್ಗಳಲ್ಲೂ ಹೂಡಿಕೆ ಮಾಡಿದ್ದಾರೆ.
ಇಷ್ಟು ದಿನ ತನ್ನ ಮಾಂತ್ರಿಕ ಆಟದಿಂದ ಕ್ರಿಕೆಟ್ ಲೋಕವನ್ನ ಆಳಿದ ವಿರಾಟ್ ಕೊಹ್ಲಿ, ಇದೀಗ ಬ್ಯುಸಿನೆಸ್ ಲೋಕದತ್ತ ಅಧಿಕೃತವಾಗಿ ಹೆಜ್ಜೆ ಇಟ್ಟಿದ್ದಾರೆ. ಕ್ರಿಕೆಟ್ನಂತೆ ಬ್ಯುಸಿನೆಸ್ನಲ್ಲೂ ಭರಪೂರ ಯಶಸ್ಸು ಕೊಹ್ಲಿ ಕೈ ಹಿಡಿಯಲಿ ಅನ್ನೋದು ಫ್ಯಾನ್ಸ್ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ