ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್​ ರೋಹಿತ್ ಗುಣ ಹೇಗಿರುತ್ತೆ..? ವಿರಾಟ್ ಕೊಹ್ಲಿ ನೇರವಾಗಿ ಹೇಳಿದ್ದು ಏನು?

author-image
Bheemappa
Updated On
ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್​ ರೋಹಿತ್ ಗುಣ ಹೇಗಿರುತ್ತೆ..? ವಿರಾಟ್ ಕೊಹ್ಲಿ ನೇರವಾಗಿ ಹೇಳಿದ್ದು ಏನು?
Advertisment
  • ಕೊನೆಗೂ ರೋಹಿತ್ ಶರ್ಮಾ ಬಗ್ಗೆ ಮನದಲ್ಲಿರುವುದು ಹೇಳಿದ್ದ ಸ್ಟಾರ್
  • ಕ್ಯಾಪ್ಟನ್​ ರೋಹಿತ್ ಗುಣಗಳ ಬಗ್ಗೆ ನೇರಾನೇರಾ ಮಾತಾಡಿದ ಕೊಹ್ಲಿ
  • ಪಂದ್ಯ ನಡೆಯುವ 1 ದಿನ ಮೊದಲೇ ರೋಹಿತ್ ಬಗ್ಗೆ ವಿರಾಟ್ ಮಾತು

ಏಪ್ರಿಲ್ 7 ಅಂದರೆ ನಾಳೆ ವಾಂಖೆಡೆ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಐಪಿಎಲ್ ಪಂದ್ಯ ನಡೆಯಲಿದೆ. ಈಗಾಗಲೇ ಎರಡು ತಂಡದ ಆಟಗಾರರು ಸಮರಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಪಂದ್ಯ ನಡೆಯುವ ಒಂದು ದಿನ ಮೊದಲೇ ರೋಹಿತ್ ಶರ್ಮಾ ಕುರಿತು ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದರ ಜೊತೆಗೆ ಇಬ್ಬರ ಕ್ರಿಕೆಟ್ ಜರ್ನಿ ಹೇಗಿತ್ತು ಎಂಬದರ ಬಗ್ಗೆ ಕೊಹ್ಲಿ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಾವಿಬ್ಬರು ಬಹಳ ವರ್ಷಗಳಿಂದ ಒಟ್ಟಿಗೆ ಕ್ರಿಕೆಟ್ ಆಡಿಕೊಂಡು ಬರುತ್ತಿದ್ದೇವೆ. ಪಂದ್ಯದ ವೇಳೆ ಸಾಕಷ್ಟು ಕಲಿತುಕೊಂಡು ಮುಂದೆ ಹೋಗುತ್ತಿದ್ದೇವೆ. ಇಬ್ಬರ ಗುಣಗಳು ಒಂದೇ ರೀತಿ ಇದೆ. ಕ್ರಿಕೆಟ್ ವೃತ್ತಿ ಜೀವನವು ಒಂದೇ ಸಮಯದಲ್ಲಿ ಒಟ್ಟಿಗೆ ಬೆಳೆಯುತ್ತಿದೆ. ಪಂದ್ಯದಲ್ಲಿ ಇಬ್ಬರು ತುಂಬಾ ಚರ್ಚೆ ಮಾಡಿ ಮುಂದೆ ಸಾಗುತ್ತೇವೆ. ಪಂದ್ಯ ನಡೆಯುವಾಗ ಸಾಕಷ್ಟು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೆಲವೊಮ್ಮೆ ಅವರ ಗುಣ ಮೆಚ್ಚುವಂತದ್ದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಸೋತರೂ ಫ್ಲೈಯಿಂಗ್ ಕಿಸ್.. ಕ್ಯಾಪ್ಟನ್​ ಶ್ರೇಯಸ್​ಗೆ ಪ್ರೀತಿಯ ಅಪ್ಪುಗೆ ಕೊಟ್ಟ ಬಾಲಿವುಡ್​ ಬ್ಯೂಟಿ! -video

publive-image

ಕ್ರಿಕೆಟ್​ ಮ್ಯಾಚ್​ ನಡೆಯುವಾಗ ಯಾವಾಗಲೂ ಆ ಸಮಯಕ್ಕೆ ಬೇಕಾದ ವಿಷಯ ಕುರಿತು ಚರ್ಚಿಸುತ್ತೇವೆ. ಎಷ್ಟೋ ಬಾರಿ ಇಬ್ಬರು ಒಂದೇ ನಿರ್ಧಾರಕ್ಕೆ ಬಂದು ತೀರ್ಮಾನ ತೆಗೆದುಕೊಂಡಿದ್ದೇವೆ. ತಂಡಕ್ಕಾಗಿ ಒಬ್ಬರ ಮೇಲೆ ಒಬ್ಬರು ನಂಬಿಕೆ, ವಿಶ್ವಾಸ ಇಟ್ಟುಕೊಳ್ಳುತ್ತೇವೆ. ರೋಹಿತ್ ಶರ್ಮಾ ಹಾಗೂ ನಾನು ಈ ವರೆಗೂ ಕ್ರಿಕೆಟ್​ ಅನ್ನು ವೃತ್ತಿ ಎಂದು ನೋಡದೇ ಆಟವಾಗಿ ಆ ಸಮಯ ಆನಂದಿಸಿದ್ದೇವೆ. ಆ ಕ್ಷಣಗಳು ಈಗಲೂ ಮಹಾ ಅದ್ಭುತ ಎಂದು ಹೇಳಿದ್ದಾರೆ.

ತುಂಬಾ ವರ್ಷಗಳಿಂದ ಇಬ್ಬರು ಒಟ್ಟಿಗೆ ಆಡುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ. ಜೊತೆಗೆ ವೃತ್ತಿ ಜೀವನವೂ ಜೊತೆಯಾಗಿ ಮುನ್ನಡೆಯುತ್ತಿದೆ. ಮೈದಾನದಲ್ಲಿ, ಹೊರಗೆ ನಾವು ಹಂಚಿಕೊಂಡ ಹಲವು ನೆನಪುಗಳ ಬಗ್ಗೆ ಕೃತಜ್ಞನಾಗಿದ್ದೇನೆ. ಎಲ್ಲ ಮೂಮೆಂಟ್ಸ್​, ನೆನಪುಗಳಿಂದ ಫುಲ್ ಹ್ಯಾಪಿ ಇದೆ. ಈಗಲೂ ಹಾಗೆಯೇ ಮುಂದುವರೆಯುತ್ತೇವೆ ಎಂದು ರೋಹಿತ್ ಶರ್ಮಾ ಕುರಿತು ಕೊಹ್ಲಿ ತಮ್ಮ ಮನದಾಳವನ್ನು ಬಿಚ್ಚಿ ಮಾತನಾಡಿದ್ದಾರೆ.


">April 6, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment