newsfirstkannada.com

IND vs ENG; ಕೊಹ್ಲಿ ತಂಡದಿಂದ ದೂರ ಉಳಿದಿರುವುದರ ಹಿಂದಿದೆ ನೋವಿನ ಸಂಗತಿ.. ತಾಯಿಗೆ ಅನಾರೋಗ್ಯ? ​

Share :

Published January 31, 2024 at 9:14am

  ತಾಯಿಯ ಆಶೀರ್ವಾದದ ಫಲವೇ ಇಂದು ಕೊಹ್ಲಿ ಕ್ರಿಕೆಟ್​ಗೆ​ ಲೆಜೆಂಡ್

  ಇಬ್ಬರು ಮಹಿಳೆಯರ ಮೇಲೆ ವಿರಾಟ್​​ ಕೊಹ್ಲಿಗಿದೆ ಸಿಕ್ಕಾಪಟ್ಟೆ ಗೌರವ

  ವಿರಾಟ್ ಕೊಹ್ಲಿ ತಾಯಿ ನಿಜವಾಗ್ಲೂ ಅನಾರೋಗ್ಯಕ್ಕೆ ತುತ್ತಾಗಿದ್ದಾರಾ?

ಇಂಡೋ- ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಸೋಲು ಟೀಮ್​ ಇಂಡಿಯಾ ಅಭಿಮಾನಿಗಳನ್ನ ಬಿಡದೇ ಕಾಡ್ತಿದೆ. ಹೈದ್ರಾಬಾದ್​ನಲ್ಲಿ ಆಂಗ್ಲರು ಅಟ್ಟಾಹಾಸ ಮೆರೆದ ರೀತಿ ಫ್ಯಾನ್ಸ್​ ನಿದ್ದೆಗೆಡಿಸಿದೆ. ವಿರಾಟ್​ ಕೊಹ್ಲಿ ಇದ್ದಿದ್ರೆ, ಹೀಗೆ ಆಗ್ತಿರಲಿಲ್ಲ ಅನ್ನೋದು ಎಲ್ಲರ ಮನದಮಾತು. ಅಷ್ಟಕ್ಕೂ ಟೆಸ್ಟ್​ ಸರಣಿಗೆ ಸೆಲೆಕ್ಟ್​ ಆಗಿದ್ದ ಕೊಹ್ಲಿ ಇದ್ದಕ್ಕಿದ್ದಂತೆ ಹಿಂದೆ ಸರಿದಿದ್ಯಾಕೆ, ನಿಜವಾದ ಕಾರಣ ಏನು?

ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯ ಮೊದಲ 2 ಪಂದ್ಯದಿಂದ ವಿರಾಟ್​ ಕೊಹ್ಲಿ ಇದ್ದಕ್ಕಿದ್ದಂತೆ ಹಿಂದೆ ಸರಿದಿದ್ದು ಯಾಕೆ ಎನ್ನುವುದು ಕ್ರಿಕೆಟ್​ ಅಭಿಮಾನಿಗಳನ್ನ ಕಾಡ್ತಿರುವ ಮಿಲಿಯನ್​ ಡಾಲರ್​ ಪ್ರಶ್ನೆಯಿದು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಿಸಿಸಿಐ ಈ ಬಗ್ಗೆ ತುಟಿಪಿಟಕ್​​​ ಅನ್ನದೇ ಇದ್ರೂ, ಕೊಹ್ಲಿ ಆಪ್ತ ಮೂಲಗಳಿಂದ ಸುದ್ದಿ ಹೊರಬಿದ್ದಿದೆ.

ರಿವೀಲ್​ ಆಯ್ತು ಕಿಂಗ್​ ಕೊಹ್ಲಿಯ ‘ವೈಯಕ್ತಿಕ’ ಕಾರಣ.!

ಟೆಸ್ಟ್​ ಕ್ರಿಕೆಟ್​ ಅಂದ್ರೆ ವಿರಾಟ್​ ಕೊಹ್ಲಿ ಇನ್ನಿಲ್ಲದ ಪ್ರೀತಿ. ಕ್ರಿಕೆಟ್​ ಪ್ಯೂರೆಸ್ಟ್​ ಫಾರ್ಮೆಟ್​​ನಲ್ಲಿ ಆಡೋದು, ಚಾಲೆಂಜಸ್​​ ಎದುರಿಸೋದನ್ನ ಕೊಹ್ಲಿ ತುಂಬಾ ಇಷ್ಟ ಪಡ್ತಾರೆ. ಇಂತಾ ಕೊಹ್ಲಿ ಇದ್ದಕ್ಕಿಂದ್ದಂತೆ, ಇಂಗ್ಲೆಂಡ್​​ ಸರಣಿ ಆರಂಭಕ್ಕೂ ಮುನ್ನ ಶಾಕ್​ ನೀಡಿದ್ರು. ತಂಡಕ್ಕೆ ಸೆಲೆಕ್ಟ್​ ಆದ ಬಳಿಕ ಟ್ರೈನಿಂಗ್​ ಕ್ಯಾಂಪ್​ಗೂ ಬಂದಿದ್ದ ಕೊಹ್ಲಿ ಇದ್ದಕ್ಕಿಂದ್ದಂತೆ ಮೊದಲ 2 ಟೆಸ್ಟ್​ನಿಂದ ಹೊರಗುಳಿಯೋ ನಿರ್ಧಾರ ಮಾಡಿದ್ರು. ಇದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ನೀಡಿತ್ತು. ಆದ್ರೆ ಕಾರಣ ಮಾತ್ರ ಗೌಪ್ಯವಾಗಿತ್ತು. ಇದೀಗ ವೈಯಕ್ತಿಕ ಕಾರಣ ರಿವೀಲ್​ ಆಗಿದೆ.

ವಿರಾಟ್​ ಕೊಹ್ಲಿಯ ತಾಯಿಗೆ ಅನಾರೋಗ್ಯ.?

ಬಿಸಿಸಿಐ ವೈಯಕ್ತಿಕ ಕಾರಣ ನೀಡಿ ವಿರಾಟ್​ ಕೊಹ್ಲಿ, ಟೆಸ್ಟ್​​ ಸರಣಿಯಿಂದ ಹೊರ ಬಿದ್ದ ಬಳಿಕ ಕಾರಣದ ಹುಡುಕಾಟ ಜೋರಾಗಿ ನಡೆದಿತ್ತು. ಆದ್ರೆ, ಉತ್ತರ ಸಿಕ್ಕಿರಲಿಲ್ಲ. ಇದೀಗ ಕೊಹ್ಲಿ ಆಪ್ತ ಮೂಲಗಳಿಂದ ಹೊಸ ಸುದ್ದಿ ಹೊರಬಿದ್ದಿದೆ. ವಿರಾಟ್​ ಕೊಹ್ಲಿಯ ತಾಯಿ ಸರೋಜ್​ ಕೊಹ್ಲಿಯ ಆರೋಗ್ಯದಲ್ಲಿ ಏರುಪೇರಾಗಿದ್ಯಂತೆ. ಹೀಗಾಗಿ ಕೊಹ್ಲಿ ಇದ್ದಕ್ಕಿದ್ದಂತೆ ತಂಡ ತೊರೆದಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ.

ಸೋಷಿಯಲ್​ ಮೀಡಿಯಾದಿಂದಲೂ ದೂರ.. ದೂರ!

ಕ್ರಿಕೆಟ್​ ಫೀಲ್ಡ್​ನಿಂದ ದೂರ ಇದ್ರೂ ಸೋಷಿಯಲ್​ ಮೀಡಿಯಾಗಳಲ್ಲಿ ಕೊಹ್ಲಿ ಆ್ಯಕ್ಟಿವ್ ಆಗಿ​ ಇರ್ತಾ ಇದ್ರು. ಕಮರ್ಷಿಯಲ್​ ಪೋಸ್ಟ್​​ಗಳನ್ನಾದ್ರೂ ಹಾಕ್ತಿದ್ರು. ಆದ್ರೆ, ಕೆಲ ದಿನಗಳಿಂದ ಎಲ್ಲದರಿಂದ ಕೊಹ್ಲಿ ದೂರ ಉಳಿದಿದ್ದಾರೆ. ಇದಕ್ಕೆಲ್ಲ ತಾಯಿಯ ಅನಾರೋಗ್ಯ ಕಾರಣ ಎಂಬ ಸುದ್ದಿ ಸದ್ಯ ಹೊರಬಿದ್ದಿದೆ. ಆದ್ರೆ, ಕೊಹ್ಲಿ ಫ್ಯಾಮಿಲಿ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನ ಬಿಟ್ಟು ಕೊಟ್ಟಿಲ್ಲ..

ತಾಯಿಯ ಪ್ರೀತಿಗೆ ಕರಗಿ ಹೋಗ್ತಾರೆ ಕೊಹ್ಲಿ.!

ಕ್ರಿಕೆಟ್​​​ನ ಹೊರತಾಗಿ ಕುಟುಂಬ ಅನ್ನೋದು ಕೊಹ್ಲಿಯ ಇನ್ನೊಂದು ಪ್ರಪಂಚ. ಅದ್ರಲ್ಲೂ ತಾಯಿಯ ಮಮತೆಯ ಮುಂದೆ ಕೊಹ್ಲಿ ಕರಗಿಹೋಗ್ತಾರೆ. ದೆಹಲಿ ತಂಡದಲ್ಲಿ ಅವಕಾಶ ಸಿಕ್ಕ ಬೆನ್ನಲ್ಲೇ ತಂದೆಯ ಸಾವು ಬರಸಿಡಿಲಿನಂತೆ ಅಪ್ಪಳಿಸಿತ್ತು. ಆ ಸಾವಿನ ದುಖಃದ ನಡುವೆ ಕೊಹ್ಲಿ ತಂಡಕ್ಕಾಗಿ ಆಡಿದ್ರು. ಈ ಕಥೆ ಎಲ್ಲರಿಗೂ ಗೊತ್ತು. ಕೊಹ್ಲಿ ಒಬ್ಬ ಸೂಪರ್ ಸ್ಟಾರ್​ ಆಗಿ ರೂಪುಗೊಂಡಿದ್ರ ಹಿಂದೆ ತಾಯಿಯ ಪ್ರೀತಿಯ ಬೆಂಬಲ ಎಷ್ಟಿತ್ತು ಅನ್ನೋದನ್ನ ಬಹುತೇಕರು ನೆನೆಸಿಕೊಳ್ಳೋದೆ ಇಲ್ಲ.

ಕ್ರಿಕೆಟ್​​ ಲೋಕಕ್ಕೆ ಕಿಂಗ್,​ ತಾಯಿ ಮುಂದೆ ಇನ್ನೂ ಮಗು..!

ತಂದೆಯನ್ನ ಕಳೆದುಕೊಂಡ ದುಖಃ ಕೊಹ್ಲಿಗೆಷ್ಟಿತ್ತೋ.. ಅಷ್ಟೇ ಪತಿಯನ್ನ ಕಳೆದುಕೊಂಡ ನೋವು ವಿರಾಟ್​ ತಾಯಿ ಸರೋಜ್​ಗೂ ಇತ್ತು. ಮನೆ ಯಜಮಾನನಿಲ್ಲದೆ ಕುಟುಂಬವೂ ಗೊಂದಲಕ್ಕೊಳಗಾಗಿತ್ತು. ಅಂತಾ ದುಖಃದಲ್ಲಿ ತಾಯಿ ಮಗನನ್ನ ತಡೆಯಲಿಲ್ಲ. ಸಾಧಿಸಬೇಕು ಎಂದು ಹೊರಟ ವಿರಾಟನ ಬೆನ್ನಿಗೆ ನಿಂತರು. ತಾಯಿಯ ಬೆಂಬಲ, ಆಶೀರ್ವಾದದ ಫಲವೇ ಕೊಹ್ಲಿ ಇಂದು ಕ್ರಿಕೆಟ್​ ಲೋಕದ ಲೆಜೆಂಡ್​ ಆಗಿ ನಿಂತಿದ್ದಾರೆ. ಆದ್ರೆ, ತಾಯಿಗೆ ಮಾತ್ರ ಕೊಹ್ಲಿ ಇಂದಿಗೂ ಪುಟ್ಟ ಕಂದನೆ.

ಆ ಆಶೀರ್ವಾದದಿಂದಲೇ ಇಂದು ವಿರಾಟ್​​ ವಿಶ್ವ ಗೆದ್ದಿದ್ದು

ಕ್ರಿಕೆಟ್​ ಅನ್ನೋ ಕನಸನ್ನ ಬೆನ್ನತ್ತಿ ಹೊರಟ ಕೊಹ್ಲಿಗೆ ಆರಂಭದಲ್ಲಿ ತಂದೆಯ ಕೃಪಾಕಟಾಕ್ಷ ಇತ್ತು. ತಂದೆಯ ಸಾವಿನ ಬಳಿಕ ಕೊಹ್ಲಿ ಏಕಾಂಗಿಯಾಗಿ ಹೋರಾಡಿದ್ರೂ, ಜೊತೆಗೊಂದು ಅದಮ್ಯ ಶಕ್ತಿ ಇತ್ತು. ಅದೇ ತಾಯಿಯ ಆಶೀರ್ವಾದ. ಆ ಆಶೀರ್ವಾದದಿಂದಲೇ ಇಂದು ವಿರಾಟ್​​ ವಿಶ್ವ ಗೆದ್ದಿದ್ದು. ಅದಾದ ಬಳಿಕ ಇದ್ದಕ್ಕಿಂದ್ದಂತೆ ಕಳಪೆ ಫಾರ್ಮ್​ ಸುಳಿಗೆ ಸಿಲುಕಿದಾಗ ಸಂತೈಸಿ, ಪ್ರೋತ್ಸಾಹಿಸಿ ಬೆಂಬಲಕ್ಕೆ ನಿಂತಿದ್ದು ಪತ್ನಿ ಅನುಷ್ಕಾ ಶರ್ಮಾ. ಆರಂಭದಲ್ಲಿ ತಾಯಿ ಕೊಹ್ಲಿಯನ್ನ ತಿದ್ದಿ ತೀಡಿ ಬೆಳೆಸಿದ್ರು. ಆ ಬಳಿಕ ಹಲ ಬದಲಾವಣೆ ಕಂಡಿದ್ದು ಅನುಷ್ಕಾ ಜೀವನಕ್ಕೆ ಬಂದ ಮೇಲೆ.

ಅದೇನೆ ಇರಲಿ.. ಸದ್ಯ ಕೊಹ್ಲಿ ತಾಯಿಗೆ ನಿಜವಾಗಲೂ ಅನಾರೋಗ್ಯಕ್ಕೆ ತುತ್ತಾಗಿದ್ದಾರೋ.? ಅಥವಾ ಹಬ್ಬಿರೋದು ಗಾಳಿ ಸುದ್ದಿಯೋ.? ಅನ್ನೋದು ಇನ್ನೂ ಕನ್​ಫರ್ಮ್​ ಆಗಿಲ್ಲ. ಒಂದು ವೇಳೆ ಅದೇ ನಿಜವಾಗಿದ್ರೆ, ಕೊಹ್ಲಿ ತಾಯಿ ಶೀಘ್ರವೇ ಗುಣಮುಖರಾಗಲಿ ಅನ್ನೋದು ಎಲ್ಲರ ಪ್ರಾರ್ಥನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs ENG; ಕೊಹ್ಲಿ ತಂಡದಿಂದ ದೂರ ಉಳಿದಿರುವುದರ ಹಿಂದಿದೆ ನೋವಿನ ಸಂಗತಿ.. ತಾಯಿಗೆ ಅನಾರೋಗ್ಯ? ​

https://newsfirstlive.com/wp-content/uploads/2024/01/VIRAT_KOHLI_MOTHER.jpg

Load More