Advertisment

IND vs AUS; ಭಾರತಕ್ಕೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ.. ನಿರೀಕ್ಷೆ ಹುಸಿಗೊಳಿಸಿದ ಕಿಂಗ್

author-image
Bheemappa
Updated On
ವಿರಾಟ್​ ಕೊಹ್ಲಿ ವಿರುದ್ಧ ಚಿತ್ರ ವಿಚಿತ್ರವಾಗಿ ವರ್ತನೆ ಮಾಡಿದ ಆಸ್ಟ್ರೇಲಿಯಾದ ಜನ.. ಹೀಗೆ ಮಾಡೋದಾ?
Advertisment
  • ಪ್ರ್ರಮುಖ ವಿಕೆಟ್​ಗಳನ್ನ ಕಳೆದುಕೊಂಡಿರುವ ಟೀಮ್ ಇಂಡಿಯಾ
  • 4ನೇ ಪಂದ್ಯದಲ್ಲೂ ವಿಫಲ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ
  • ಟೀಮ್ ಇಂಡಿಯಾದಲ್ಲಿ ಈಗ ಯಾರು ಯಾರು ಔಟ್ ಆಗಿದ್ದಾರೆ?

4ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಬೀಸುತ್ತಿರುವ ಭಾರತ ಸಂಕಷ್ಟಕ್ಕೆ ಸಿಲುಕುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ. ಏಕೆಂದರೆ ಆಸಿಸ್​ ನೆಲದಲ್ಲಿ ಬ್ಯಾಟಿಂಗ್ ಮಾಡಲು ತಿಣುಕಾಡುತ್ತಿರುವ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ಸ್ ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ವಿರಾಟ್ ಕೊಹ್ಲಿ ಈ ಸಲನೂ ವಿಫಲ ಬ್ಯಾಟಿಂಗ್ ಪ್ರದರ್ಶಿಸಿ ಫ್ಯಾನ್ಸ್​ಗೆ ಬೇಡರ ಮೂಡಿಸಿದ್ದಾರೆ.

Advertisment

ಇಂದು ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ವಿರಾಟ್ ಕೊಹ್ಲಿ ಕೆಲ ಸಮಯ ಆಸ್ಟ್ರೇಲಿಯಾ ಬೌಲರ್​ಗಳನ್ನು ಕಾಡಿದರು. ಚೆನ್ನಾಗಿ ಬ್ಯಾಟಿಂಗ್ ಮಾಡುವ ಎಲ್ಲ ನಿರೀಕ್ಷೆಯನ್ನು ಮೂಡಿಸಿದ್ದರು. ಹೀಗಾಗಿ ತಂಡ ಲಯ ಕಂಡುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ 86 ಎಸೆತಗಳಲ್ಲಿ 4 ಬೌಂಡರಿ ಸಮೇತ 36 ರನ್​ಗಳಿಂದ ಆಡುವಾಗ ವಿಕೆಟ್​ ಕೀಪರ್ ಅಲೆಕ್ಸ್​ ಕ್ಯಾರಿಗೆ ಕ್ಯಾಚ್ ಕೊಟ್ಟು ಹೊರ ನಡೆದರು.

ಇದನ್ನೂ ಓದಿ: IND vs AUS; ಟೀಮ್ ಇಂಡಿಯಾಕ್ಕೆ ಕೈಕೊಟ್ಟ KL ರಾಹುಲ್.. ಕನ್ನಡಿಗ ಕ್ಲೀನ್ ಬೋಲ್ಡ್

publive-image

ಸದ್ಯ ವಿರಾಟ್​ ಕೊಹ್ಲಿ ಔಟ್ ಆಗಿರುವುದು ಭಾರತ ತಂಡಕ್ಕೆ ಭಾರೀ ನಿರಾಸೆ ಮೂಡಿಸಿದೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಹೋಗಲು ಈ 4ನೇ ಪಂದ್ಯ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇದೇ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ಗಳು ಬ್ಯಾಕ್​ ಟು ಬ್ಯಾಕ್​ ಕ್ರೀಸ್ ಖಾಲಿ ಮಾಡಿದ್ದಾರೆ. ಮೊದಲು ರೋಹಿತ್ ಶರ್ಮಾ 3 ರನ್​ಗೆ ಔಟ್ ಆದರೆ ಕೆ.ಎಲ್ ರಾಹುಲ್ ಅವರು 24 ರನ್​ಗೆ ಕ್ಲೀನ್ ಬೋಲ್ಡ್ ಆದರು. ಆಕಾಶ ದೀಪ್ ಡಕೌಟ್ ಆಗಿ ನಿರಾಸೆ ಮೂಡಿಸಿದರು.

Advertisment

ಓಪನರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧ ಶತಕ ಸಿಡಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. 11 ಬೌಂಡರಿ, 1 ಸಿಕ್ಸರ್ ಸಮೇತ 82 ರನ್​ಗಳಿಂದ ಆಡುವಾಗ ಸಿಂಗಲ್ ರನ್​ಗಾಗಿ ಜೈಸ್ವಾಲ್ ಓಡಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ವಿರಾಟ್​ ಕೊಹ್ಲಿ ಅವರು ಓಡದೇ ಕ್ರೀಸ್​ನಲ್ಲಿ ನಿಂತು ಬಿಟ್ಟರು. ಆಗ ಆಸಿಸ್​ ನಾಯಕ ಪ್ಯಾಟ್ ಕಮಿನ್ಸ್ ಬಾಲ್ ಅನ್ನು ಕೀಪರ್ ಅಲೆಕ್ಸ್​ ಕ್ಯಾರಿಗೆ ನೇರ ಎಸೆದರು. ಜೈಸ್ವಾಲ್ ಕ್ರೀಸ್​​ನ ಅರ್ಧ ಭಾಗಕ್ಕೆ ಬಂದಿದ್ದರಿಂದ ವಾಪಸ್ ಓಡಲು ಆಗಲಿಲ್ಲ. ಹೀಗಾಗಿ ಅಲೆಕ್ಸ್​ ಕ್ಯಾರಿ ಬಾಲ್ ಅನ್ನು ಸ್ಟಂಪ್​ಗೆ ಮುಟ್ಟಿಸಿ ಔಟ್ ಮಾಡಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment