/newsfirstlive-kannada/media/post_attachments/wp-content/uploads/2025/01/VIRAT_KOHLI-13.jpg)
ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಇಂಡೋ-ಪಾಕ್​ ಪಂದ್ಯ ಅಲ್ಲ. ಐಪಿಎಲ್​ ಪಂದ್ಯನೂ ಅಲ್ಲ. ರಣಜಿ ಪಂದ್ಯ. ಈ ರಣಜಿ ಪಂದ್ಯ ಇಡೀ ಕ್ರಿಕೆಟ್​​ ಲೋಕದ ಗಮನ ಸೆಳೆದಿದೆ. ಸಾಗರೋಪಾದಿಯಲ್ಲಿ ಫ್ಯಾನ್ಸ್​ ಸ್ಟೇಡಿಯಂಗೆ ಎಂಟ್ರಿ ಕೊಟ್ಟಿದ್ದಾರೆ. ಪೋಲಿಸರು ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದರಲ್ಲಿ​ ಬೆಸ್ತು ಬಿದ್ದಿದ್ದಾರೆ. ಇದಕ್ಕೆಲ್ಲಾ ಕಾರಣ ಯಾರು ಗೊತ್ತಾ..? ಕ್ರಿಕೆಟ್​ ಲೋಕದ ಸುಲ್ತಾನ್ ವಿರಾಟ್​ ಕೊಹ್ಲಿ!
ಇಡೀ ಕ್ರಿಕೆಟ್​ ಲೋಕದ ಚಿತ್ತ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನತ್ತ ನೆಟ್ಟಿತ್ತು. ಅಲ್ಲಿ ನಡೆದಿದ್ದು ದೆಹಲಿ VS ರೈಲ್ವೇಸ್​​ ನಡುವಿನ ರಣಜಿ ಪಂದ್ಯ. ಈ ಲೀಗ್​ ಹಂತದ ಪಂದ್ಯದ ಕೊನೆಯ ಪಂದ್ಯದಲ್ಲಿ ಯಾರೂ ಗೆದ್ರೂ, ಯಾರೂ ಸೋತ್ರೂ ಏನು ಲಾಭವಿಲ್ಲ. ಆದ್ರೂ, ಇಡೀ ಭಾರತೀಯ ಕ್ರಿಕೆಟ್​ ಲೋಕದ ಗಮನ ಆ ಪಂದ್ಯದ ಮೇಲಿತ್ತು.. ಇದಕ್ಕೆ ಕಾರಣ ಒಬ್ಬ ವ್ಯಕ್ತಿ.
/newsfirstlive-kannada/media/post_attachments/wp-content/uploads/2025/01/VIRAT_KOHLI_2.jpg)
13 ವರ್ಷಗಳ ಬಳಿಕ ರಣಜಿ ಅಖಾಡಕ್ಕೆ ಕಿಂಗ್​ ಕೊಹ್ಲಿ.!
ಅರುಣ್​ ಜೇಟ್ಲಿ ಸ್ಟೇಡಿಯಂ ಅಟ್ಮಾಸ್ಪಿಯರ್​ ಬೇರೆಯದ್ದೇ ಲೆವೆಲ್​ಲ್ಲಿಗಿದೆ. ನೋಡಿದವರಿಗೆ ಯಾರಿಗೂ ಇಲ್ಲಿ ನಡಿತೀರೋದು ರಣಜಿ ಪಂದ್ಯನಾ, ಇಂಟರ್​​ನ್ಯಾಷನಲ್​​​ ಪಂದ್ಯನಾ ಅನ್ನೋ ಅನುಮಾನ ಕಾಡದೆ ಇರಲ್ಲ. ಹಂಗಿದೆ ಕಿಂಗ್​ ಕೊಹ್ಲಿ ಮೇನಿಯಾ..!
ಮೊಳಗಿತು ಕೊಹ್ಲಿ.. ಕೊಹ್ಲಿ ಝೇಂಕಾರ.!
13 ವರ್ಷಗಳ ಬಳಿಕ ರಣಜಿ ಟೂರ್ನಿಗೆ ವಿರಾಟ್​ ಕೊಹ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಹೋಮ್​​ಗ್ರೌಂಡ್​​ನಲ್ಲಿ ನಡೀತಿರೋ ಪಂದ್ಯದಲ್ಲಿ ತವರು ಡೆಲ್ಲಿ ಪರ ವಿರಾಟ್​ ಕಣಕ್ಕಿಳಿದಿದ್ದಾರೆ. ಕಿಂಗ್​ಡಮ್​ಗೆ ಕಮ್​ಬ್ಯಾಕ್​ ಮಾಡಿದ ಕಿಂಗ್​ ಕೊಹ್ಲಿಯನ್ನ ಕಣ್ತುಂಬಿಕೊಳ್ಳಲು ಸಾವಿರ ಸಾವಿರ ಸಂಖ್ಯೆಯಲ್ಲಿ ಫ್ಯಾನ್ಸ್​ ಜಮಾಯಿಸಿದ್ರು. ಕೊಹ್ಲಿ... ಕೊಹ್ಲಿ ಎಂಬ ಝೇಂಕಾರ ಸ್ಟೇಡಿಯಂನಲ್ಲಿ ಮಾರ್ದನಿಸಿತು.
ಕೊಹ್ಲಿ.. ಕೊಹ್ಲಿ.. ಎಂಬ ಚಾಂಟ್​ ಮಾತ್ರವಲ್ಲ, ಆರ್​​ಸಿಬಿ.. ಆರ್​​ಸಿಬಿ ಅನ್ನೋ ಕೂಗೂ ಜೋರಾಗಿತ್ತು. ಸ್ಟೇಡಿಯಂ ಮಾತ್ರವಲ್ಲ. ಡೆಲ್ಲಿ ಮೆಟ್ರೋ ಸ್ಟೇಷನ್​ನಲ್ಲೂ ಇದೇ ಸದ್ದು.
ಬೆಳಗ್ಗೆ 6 ಗಂಟೆಯಿಂದಲೂ ಕ್ಯೂನಲ್ಲಿ ನಿಂತಿದ್ದ ಫ್ಯಾನ್ಸ್​.!
ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೆಜ್​ ಪಂದ್ಯಕ್ಕಿರುತ್ತಲ್ವಾ ಅಂತದ್ದೇ ಕ್ರೇಜ್​ ಸ್ಟೇಡಿಯಂ ಸುತ್ತ ನಿರ್ಮಾಣವಾಗಿತ್ತು. ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​ ಸುದ್ದಿ ಕೇಳಿ ಥ್ರಿಲ್​​ ಆಗಿದ್ದ ಫ್ಯಾನ್ಸ್ ದೆಹಲಿಯಲ್ಲಿರೋ ಕೊರೆವ ಚಳಿಯನ್ನೂ ಲೆಕ್ಕಿಸದೇ ಸ್ಟೇಡಿಯಂಗೆ ದೌಡಾಯಿಸಿದ್ರು. ಎಂಟ್ರಿ ಗೇಟ್​ನಿಂದ ಸುಮಾರು 2 ಕಿಲೋ ಮೀಟರ್​​ ಹೆಚ್ಚು ಉದ್ದದ ಕ್ಯೂ ನಿರ್ಮಾಣವಾಗಿದೆ. ಪರಿಣಾಮ ಆರಂಭದಲ್ಲಿ 1 ಗೇಟ್​ನಲ್ಲಿ ಅಭಿಮಾನಿಗಳ ಎಂಟ್ರಿಗೆ ಅವಕಾಶ ಮಾಡಿಕೊಟ್ಟಿದ್ದ ಡಿಡಿಸಿಎ, 2 ಗೇಟ್​ಗಳನ್ನ ಓಪನ್​ ಮಾಡಬೇಕಾಗಿ ಬಂತು.
ಸ್ಟೇಡಿಯಂ ಎಂಟ್ರಿ ಕೊಟ್ಟು ಕೊಹ್ಲಿ ಕಾಲಿಗೆ ಬಿದ್ದ ಫ್ಯಾನ್.!
ಸ್ಟೇಡಿಯಂಗೆ ಬಂದ ಫ್ಯಾನ್ಸ್​ ಮನೆ ಮಗ ಕೊಹ್ಲಿಯ ಆಟವನ್ನ ಎಂಜಾಯ್​ ಮಾಡ್ತಿದ್ರು. ಇದ್ರ ನಡುವೆ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಕೊಹ್ಲಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡು. ಬಳಿಕ ಸೆಕ್ಯೂರಿಟಿಗಳು ವಶಕ್ಕೆ ಪಡೆದ್ರು. ಸೆಕ್ಯೂರಿಟಿಗಳು ಎಳೆದೊಯ್ಯೋ ಸಮಯದಲ್ಲಿ ಆತನಿಗೆ ಹೊಡಿಬೇಡಿ ಎಂದು ಮನವಿ ಮಾಡಿ ಕೊಹ್ಲಿ ಫ್ಯಾನ್ಸ್​ ಮನ ಗೆದ್ರು.
ಬೇರೆ ಬೇರೆ ರಾಜ್ಯಗಳಿಂದ ಬಂದ ಅಭಿಮಾನಿಗಳು.!
ಅಂದ್ಹಾಗೆ ಕೊಹ್ಲಿಯನ್ನ ನೋಡಲು, ಆಟವನ್ನ ಕಣ್ತುಂಬಿಕೊಳ್ಳಲು ಡೆಲ್ಲಿಯ ಫ್ಯಾನ್ಸ್​ ಮಾತ್ರ ಅಲ್ಲಿ ಸೇರಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದಲೂ ಅಭಿಮಾನಿಗಳ ದಂಡು ದೆಹಲಿಗೆ ಹರಿದು ಬಂದಿತ್ತು.
ಬೆಳಗ್ಗೆ 7.30ಕ್ಕೆ ಬಂದೆ. 3 ದಿನ ಆಯ್ತು ಡೆಲ್ಲಿಗೆ ಬಂದು. ಉತ್ತರ ಪ್ರದೇಶದಿಂದ ಬಂದಿದ್ದೇನೆ. ಗೆಳೆಯರ ಜೊತೆಗಿದ್ದೆ. ಕೇವಲ ಪಂದ್ಯ ನೋಡೋದಕ್ಕಾಗಿ ಬಂದಿದ್ದೇನೆ. ವಿರಾಟ್ ಕೊಹ್ಲಿಗಾಗಿ ಇವ್ರೆಲ್ಲಾ ಬಂದಿರೋದು. ಈ ಮೈದಾನದಲ್ಲಿ ಈ ಹಿಂದೆಯೂ ರಣಜಿ ಪಂದ್ಯಗಳು ನಡೆದಿವೆ. ಇಷ್ಟು ಕ್ರೇಜ್ ಇರಲಿಲ್ಲ. ಇಷ್ಟು ಜನ ಬಂದಿರಲಿಲ್ಲ.
ವಿರಾಟ್ ಕೊಹ್ಲಿ ಅಭಿಮಾನಿ
/newsfirstlive-kannada/media/post_attachments/wp-content/uploads/2025/01/VIRAT_KOHLI_1-1.jpg)
ಇದನ್ನೂ ಓದಿ: ಸ್ಟಾರ್​ ಡೈರೆಕ್ಟರ್​ SS ರಾಜಮೌಳಿ ಸ್ಟ್ರಾಟಜಿ ಬಳಸಿದ ರಾಮ್ ಚರಣ್.. ಏನ್ ಮಾಡಿದ್ರು ಗೊತ್ತಾ?
ಇಷ್ಟೇ ಅಲ್ಲ.. ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಕೊಹ್ಲಿ ಪೋಸ್ಟರ್​​ಗಳು, ಫೋಟೋಗಳೇ ರಾರಾಜಿಸುತ್ತಿವೆ. ಕೆಲವೇ ಸ್ಟ್ಯಾಂಡ್​ಗಳಲ್ಲಿ ಮಾತ್ರ ಫ್ಯಾನ್ಸ್​ ಎಂಟ್ರಿಗೆ ಅವಕಾಶವಿತ್ತು. ಹಾಗಿದ್ರೂ, ಸುಮಾರು 16 ಸಾವಿರ ಕ್ರಿಕೆಟ್​ ಫ್ಯಾನ್ಸ್​ ಸ್ಟೇಡಿಯಂನಲ್ಲಿ ಜಮಾಯಿಸಿದರು. ರಣಜಿ ಟ್ರೋಫಿ ಪಂದ್ಯಕ್ಕೆ ಅರುಣ್​ ಜೇಟ್ಲಿ ಸ್ಟೇಡಿಯಂ ಹೌಸ್​ಫುಲ್​ ಆಗಿದ್ದು ಇತಿಹಾಸದಲ್ಲೇ ಇದೇ ಮೊದಲು ಅನ್ಸುತ್ತೆ.
ಅಂದ್ಹಾಗೆ, ಮೊದಲ ದಿನ ಸ್ಟೇಡಿಯಂಗೆ ಬಂದ ಫ್ಯಾನ್ಸ್​ ನಿರಾಸೆಯೊಂದಿಗೆ ಹಿಂದಿರುಗಿರೋದು ಸುಳ್ಳಲ್ಲ. ಮೊದಲ ದಿನದಲ್ಲಿ ಫೀಲ್ಡಿಂಗ್​ ಮಾಡಿದ ಕೊಹ್ಲಿ ಬ್ಯಾಟಿಂಗ್​​ಗೆ ಬಂದಿಲ್ಲ. ಆದ್ರೆ, ಇಂದಿನ 2ನೇ ದಿನದಾಟದಲ್ಲಿ ಡೆಲ್ಲಿ ಬ್ಯಾಟಿಂಗ್ ಮಾಡಿದ್ದು 15 ಎಸೆತಗಳಲ್ಲಿ 6 ರನ್​ ಗಳಿಸಿ ಔಟ್ ಆಗಿದ್ದಾರೆ. ಇದರಿಂದ ನಿರಾಸೆಗೊಂಡ ಕೆಲ ಫ್ಯಾನ್ಸ್ ಸ್ಟೇಡಿಯಂನಿಂದ ಹೊರ ನಡೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us