newsfirstkannada.com

ಟೀಂ ಇಂಡಿಯಾ ಫ್ಯಾನ್ಸ್​ಗೆ ಆಘಾತ! ಮೊದಲ 2 ಟೆಸ್ಟ್​ನಿಂದ ಕೊಹ್ಲಿ ಔಟ್! ವಿರಾಟ್​ಗೆ​ ಕಾಡುತ್ತಿರೋ ಸಮಸ್ಯೆಯೇನು?

Share :

Published January 23, 2024 at 11:00am

    ಅಭಿಮಾನಿಗಳಿಗೆ ಶಾಕ್ ಕೊಟ್ಟ ಕಿಂಗ್​ ವಿರಾಟ್​ ಕೊಹ್ಲಿ​.!

    ಸರಣಿ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಹಿನ್ನಡೆ.!

    ಗಂಭೀರ ಸಮಸ್ಯೆಯ ಸುಳಿಗೆ ಸಿಲುಕಿದ್ದಾರಾ ವಿರಾಟ್​ ಕೊಹ್ಲಿ..?

ಇಂಡೋ – ಇಂಗ್ಲೆಂಡ್​ ಸರಣಿ ಆರಂಭಕ್ಕೂ ಮನ್ನವೇ ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಬಿಗ್​ ಶಾಕ್​ ಎದುರಾಗಿದೆ. 12 ವರ್ಷದಿಂದ ತವರಿನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡ್ತಿರುವ ಟೀಮ್​ ಇಂಡಿಯಾ, ಈ ಬಾರಿಯೋ ಗೆಲ್ಲೋ ಹುಮ್ಮಸ್ಸಿನಲ್ಲಿತ್ತು. ಆ ಹುಮ್ಮಸ್ಸು, ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದಕ್ಕೆಲ್ಲಾ ಕಾರಣ ವಿರಾಟ್​ ಕೊಹ್ಲಿ..!

ಇಂಡೋ – ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು, 1 ದಿನ ಮಾತ್ರ ಬಾಕಿ. ಕ್ರಿಕೆಟ್​ ಲೋಕದ ಮದಗಜಗಳ ನಡುವಿನ ಕಾದಾಟ ನೋಡಲು ವಿಶ್ವವೇ ಕಾದು ಕುಳಿತಿದೆ. ಆದ್ರೆ, ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಕಾದಿದ್ದ ಫ್ಯಾನ್ಸ್​ಗೆ ಇದೀಗ ನಿರಾಸೆಯಾಗಿದೆ. ಟೀಮ್​ ಇಂಡಿಯಾ ಅಭಿಮಾನಿಗಳ ಪಾಲಿಗಂತೂ ಇದು ಶಾಕಿಂಗ್​ ಸುದ್ದಿ..!

ಅಭಿಮಾನಿಗಳಿಗೆ ಶಾಕ್ ಕೊಟ್ಟ ಕಿಂಗ್​ ವಿರಾಟ್​ ಕೊಹ್ಲಿ​..!

ಕಳೆದ 12 ವರ್ಷದಲ್ಲಿ ತವರಿನಂಗಳದ ಟೆಸ್ಟ್​ ಸರಣಿಗಳಲ್ಲಿ ಸೋಲಿಲ್ಲದ ಸರದಾರನಾಗಿ ಮರೆದಾಡ್ತಿರುವ ಟೀಮ್​ ಇಂಡಿಯಾ, ಈ ಬಾರಿಯೂ ಆಂಗ್ಲ ಪಡೆ ಹೆಡೆಮುರಿಕಟ್ಟೋ ಅಭೇಧ್ಯ ಆತ್ಮವಿಶ್ವಾಸದಲ್ಲಿದೆ. ಅದಕ್ಕಾಗಿ ಭರ್ಜರಿ ತಯಾರಿ ಆರಂಭಿಸಿದೆ. ಆದರೀಗ, ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದ್ದು, ವಿರಾಟ್​ ಕೊಹ್ಲಿ ಶಾಕ್​ ಕೊಟ್ಟಿದೆ. ಸರಣಿಯ ಮೊದಲ 2 ಪಂದ್ಯದಿಂದ ವಿರಾಟ್​ ಕೊಹ್ಲಿ ಹೊರಗುಳಿದಿದ್ದಾರೆ.

‘ವೈಯಕ್ತಿಕ ಸಮಸ್ಯೆ’ ಮೊದಲ 2 ಟೆಸ್ಟ್​ನಿಂದ ಕೊಹ್ಲಿ ಔಟ್​.!

ಮೊದಲ ಟೆಸ್ಟ್​ ಪಂದ್ಯ ನಡೆಯೋ ಹೈದ್ರಾಬಾದ್​ಗೆ ಕೊಹ್ಲಿ ಭಾನುವಾರವೇ ತಲುಪಿದ್ರು. ಅಭ್ಯಾಸ ಆರಂಭಿಸೋದೊಂದೆ ಬಾಕಿ ಉಳಿದಿತ್ತು. ಆದ್ರೆ, ಪಂದ್ಯಕ್ಕೆ ಆರಂಭಕ್ಕೆ ಇನ್ನೊಂದು ದಿನ ಉಳಿದಿರೋವಾಗ ವಿರಾಟ್​​ ಕೊಹ್ಲಿ ಮೊದಲ 2 ಪಂದ್ಯದಿಂದ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ. ಬಿಸಿಸಿಐ ಕೂಡ ಇದಕ್ಕೆ ಸಮ್ಮತಿಸಿದೆ. ಕ್ಯಾಪ್ಟನ್​, ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಟರ್ಸ್​ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

‘BCCI ಕೊಹ್ಲಿ ನಿರ್ಧಾರವನ್ನ ಗೌರವಿಸುತ್ತದೆ’

‘ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಮೊದಲ 2 ಟೆಸ್ಟ್​ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ದೇಶವನ್ನ ಪ್ರತಿನಿಧಿಸುವುದು ನನ್ನ ಮೊದಲ ಆದ್ಯತೆ ಎಂದು ವಿರಾಟ್​ ಕೊಹ್ಲಿ, ನಾಯಕ ರೋಹಿತ್​ ಶರ್ಮಾ, ಟೀಮ್ ಮ್ಯಾನೇಜ್​ಮೆಂಟ್​​, ಸೆಲೆಕ್ಟರ್ಸ್​ಗೆ ತಿಳಿಸಿದ್ದಾರೆ. ಆದ್ರೆ, ಕೆಲ ವೈಯಕ್ತಿಕ ಸಂದರ್ಭಗಳು ಅವರ ಅಗತ್ಯತೆ ಬಯಸುತ್ತಿವೆ. ಬಿಸಿಸಿಐ ಕೊಹ್ಲಿ ನಿರ್ಧಾರವನ್ನ ಗೌರವಿಸುತ್ತದೆ. ಬೋರ್ಡ್​ ಮತ್ತು ಟೀಮ್​ ಮ್ಯಾನೇಜ್​ಮೆಂಟ್​​ ಅವರ ಬೆಂಬಲಕ್ಕಿದೆ’

ಜಯ್​ ಶಾ, ಬಿಸಿಸಿಐ ಕಾರ್ಯದರ್ಶಿ

ಅನುಭವಿ ಅಲಭ್ಯ, ಟೀಮ್​ ಇಂಡಿಯಾಗೆ ಹಿನ್ನಡೆ.!

ವಿರಾಟ್​ ಕೊಹ್ಲಿ ಅಲಭ್ಯತೆ ಟೀಮ್​ ಇಂಡಿಯಾಗೆ ತೀವ್ರ ಹಿನ್ನಡೆಯಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲಿಗೆ ಕೊಹ್ಲಿ ಸ್ಥಾನದಲ್ಲಿ ಆಡೋದ್ಯಾರು ಅನ್ನೋ ಪ್ರಶ್ನೆ ಹುಟ್ಟಿದೆ. ಅದ್ರ ಜೊತೆ ಅನುಭವಿ ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ಬಲವಾಗಿದ್ರು. ಎದುರಾಳಿ ಇಂಗ್ಲೆಂಡ್​ ತಂಡದಲ್ಲಿ ವಿರಾಟ್​ ಕೊಹ್ಲಿ ಭಯ ಆವರಿಸಿತ್ತು. ಫೀಲ್ಡ್​ ಕೊಹ್ಲಿ ಇದ್ರೆ ಸಾಕು ಟೀಮ್​ ಇಂಡಿಯಾ ಎನರ್ಜಿ ನೆಕ್ಸ್ಟ್​ ಲೆವೆಲ್​ ಇರುತ್ತೆ. ಬ್ಯಾಟಿಂಗ್​ ಮಾತ್ರವಲ್ಲ.. ಬೌಲಿಂಗ್​ ವೇಳೆ ಬೌಲರ್​​ ಜೋಷ್​ ತುಂಬ್ತಾ, ನಾಯಕನಿಗೆ ಸಲಹೆಗಳನ್ನ ನೀಡ್ತಾ ತಂಡದ ಬಲವಾಗಿರ್ತಾ ಇದ್ರು. ಈ ಎಲ್ಲಾ ವಿಚಾರದಲ್ಲೂ ತಂಡಕ್ಕೆ ಹಿನ್ನಡೆಯಾಗಲಿದೆ.

ಕೊಹ್ಲಿಗೆ ಕಾಡ್ತಿರೋ ‘ವೈಯಕ್ತಿಕ ಸಮಸ್ಯೆ’ಯಾದ್ರೂ ಏನು.?

ಸದ್ಯ ಟೀಮ್​ ಇಂಡಿಯಾ ಅಭಿಮಾನಿಗಳನ್ನ ಕಾಡ್ತಿರುವ ಬಿಲಿಯನ್​ ಡಾಲರ್​ ಪ್ರಶ್ನೆಯಿದು. ಕಳೆದ ವರ್ಷದ ಅಂತ್ಯದಲ್ಲಿ ಸೌತ್​​ ಆಫ್ರಿಕಾ ವಿರುದ್ಧದ ವೈಟ್​​ ಬಾಲ್​ ಟೂರ್ನಿಯಿಂದ ಕೊಹ್ಲಿ ಹೊರಗುಳಿದಿದ್ರು. ಆ ಬಳಿಕ ಕಮ್​ಬ್ಯಾಕ್​ ಮಾಡಿದ ಅಪ್ಘಾನಿಸ್ತಾನ ಎದುರಿನ ಟಿ20 ಸರಣಿಯ ಮೊದಲ ಪಂದ್ಯಕ್ಕೂ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ರು. ಅದಾದ ಬಳಿಕ ಕೊಹ್ಲಿ ಆಡಿರೋದು 2 ಟಿ20 ಪಂದ್ಯವನ್ನಷ್ಟೇ ಅದಾಗಲೇ ಮತ್ತೊಮ್ಮೆ ತಂಡದಿಂದ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ.

ಗಂಭೀರ ಸಮಸ್ಯೆಯ ಸುಳಿಗೆ ಸಿಲುಕಿದ್ದಾರಾ ಕೊಹ್ಲಿ.?

ಹೌದು.. ಈ ಬಾರಿ ಬಿಸಿಸಿಐ ತುಂಬಾ ಡಿಟೈಲ್ಡ್​ ಆಗಿ ಕೊಹ್ಲಿ ತಂಡದಿಂದ ಹೊರಗುಳಿದ ಬಗ್ಗೆ ಪ್ರಕಟಣೆ ಹೊರಡಿಸಿದೆ. ಕೊಹ್ಲಿ ಪ್ರೈವಸಿಯನ್ನೂ ಕಾಪಾಡಿ ಎಂದು ಮನವಿ ಮಾಡಿದೆ. ಇದ್ರ ಬೆನ್ನಲ್ಲೇ ಹಲವು ಗಾಸಿಪ್​ಗಳು ಹುಟ್ಟಿಕೊಂಡಿದ್ದು, ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದ್ರ ಜೊತೆಗೆ ಆಪ್ತರೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದ ಸುದ್ದಿಯೂ ಇದೆ. ಆದ್ರೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಎಲ್ಲ ಸಮಸ್ಯೆಗಳನ್ನ ಬಗೆ ಹರಿಸಿಕೊಂಡು ತಂಡಕ್ಕೆ ವಾಪಾಸ್ಸಾಗಲಿ ಅನ್ನೋದು ಎಲ್ಲರ ಹಾರೈಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾ ಫ್ಯಾನ್ಸ್​ಗೆ ಆಘಾತ! ಮೊದಲ 2 ಟೆಸ್ಟ್​ನಿಂದ ಕೊಹ್ಲಿ ಔಟ್! ವಿರಾಟ್​ಗೆ​ ಕಾಡುತ್ತಿರೋ ಸಮಸ್ಯೆಯೇನು?

https://newsfirstlive.com/wp-content/uploads/2023/11/VIRAT-19.jpg

Load More