ವಿರಾಟ್ ಕೊಹ್ಲಿ ಪೆವಿಲಿಯನ್​ ಇರೋದು ಎಲ್ಲಿ.. ಸ್ಟಾರ್​ ಕ್ರಿಕೆಟರ್​ನ ಹೆಸರು ನಾಮಕರಣ ಮಾಡಿದ್ದು ಯಾವಾಗ?

author-image
Bheemappa
Updated On
ವಿರಾಟ್ ಕೊಹ್ಲಿ ಪೆವಿಲಿಯನ್​ ಇರೋದು ಎಲ್ಲಿ.. ಸ್ಟಾರ್​ ಕ್ರಿಕೆಟರ್​ನ ಹೆಸರು ನಾಮಕರಣ ಮಾಡಿದ್ದು ಯಾವಾಗ?
Advertisment
  • ಟೀಮ್ ಇಂಡಿಯಾದಲ್ಲಿ ಮಹತ್ತರ ಸಾಧನೆ ಮಾಡಿರುವ ಕೊಹ್ಲಿ
  • ಸಚಿನ್ ಹೆಸರು ಇರುವಂತೆ ಕಿಂಗ್​ ಕೊಹ್ಲಿ ಹೆಸರು ಕೂಡ ಇದೆ
  • ವಿರಾಟ್ ಕೊಹ್ಲಿ ಹೆಸರಿರುವ ಕ್ರಿಕೆಟ್​ ಪೆವಿಲಿಯನ್ ಎಲ್ಲಿ ಇದೆ?​

ಟೀಮ್ ಇಂಡಿಯಾ ಪರ ಆಡಿ ಸಾಕಷ್ಟು ಸಾಧನೆ ಮಾಡಿರುವ ವಿರಾಟ್​ ಕೊಹ್ಲಿ ಅವರು ಕ್ರಿಕೆಟ್​​ನಲ್ಲಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ ಒಂದೊಂದು ರನ್​​ ಕೂಡ ಇವತ್ತು ದಾಖಲೆಯ ಪಟ್ಟಿಗೆ ಸೇರುತ್ತಿದೆ. ಕ್ರಿಕೆಟ್​ ಲೋಕದಲ್ಲಿ ಎಲ್ಲ ದಾಖಲೆಗಳ ಸರ್ದಾರ ಎಂದ್ರೆ ಅದು ಕೊಹ್ಲಿ ಎನ್ನುವ ಹೆಸರು ಮಂಚೂಣಿಗೆ ಬರುತ್ತದೆ. ಈ ಎಲ್ಲ ಮಹತ್ತರ ಸಾಧನೆಗಳಿಂದ ಪೆವಿಲಿಯನ್​ವೊಂದಕ್ಕೆ ವಿರಾಟ್​ ಕೊಹ್ಲಿ ಹೆಸರನ್ನು ಈ ಹಿಂದೆಯೇ ನಾಮಕರಣ ಮಾಡಲಾಗಿದೆ.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಮಾತ್ರವಲ್ಲ ಐಪಿಎಲ್​​ನಲ್ಲೂ ಸಾಕಷ್ಟು ಸಾಧನೆ, ರೆಕಾರ್ಡ್ಸ್​, ಮಹತ್ವದ ಸ್ಥಾನಗಳನ್ನು ಗಳಿಸಿದ್ದಾರೆ. 18 ವರ್ಷಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ನಿರಂತರವಾಗಿ ಆಡುತ್ತಿದ್ದು ಬ್ಯಾಟಿಂಗ್​ ಫಾರ್ಮ್​ ಕೂಡ ಅತ್ಯುನ್ನತವಾಗಿದೆ. ಸದ್ಯ ಇಂದು ಆರ್​​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ಸಂಜೆ 7:30ಕ್ಕೆ ನಡೆಯಲಿದೆ. ವಿಶೇಷ ಎಂದರೆ ವಿರಾಟ್ ಕೊಹ್ಲಿ ತನ್ನ ಹೆಸರಿನ ಪೆವಿಲಿಯನ್​ ಮುಂದೆ ಬ್ಯಾಟ್​ ಬೀಸಲಿದ್ದಾರೆ.

ಇದನ್ನೂ ಓದಿ:ಇಂದಿನ ಪಂದ್ಯದಲ್ಲಿ RCBಗೆ ಮಾಜಿ ನಾಯಕನೇ ಕಂಟಕ ಆಗ್ತಾರಾ.. ಯಾಕೆ ಗೊತ್ತಾ?

publive-image

ದೆಹಲಿ ಅರುಣ್​ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್​​ವೊಂದಕ್ಕೆ ವಿರಾಟ್ ಕೊಹ್ಲಿ ಪೆವಿಲಿಯನ್​ ಎಂದು 24 ಆಗಸ್ಟ್​ 2019 ರಂದು ನಾಮಕರಣ ಮಾಡಲಾಗಿತ್ತು. ಇದೇ ಪೆವಿಲಿಯನ್​ ಮುಂದೆ ಇವತ್ತು ವಿರಾಟ್​ ಕೊಹ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಅರುಣ್​ ಜೇಟ್ಲಿ ಸ್ಟೇಡಿಯಂ ಅನ್ನು ಈ ಮೊದಲು ಫಿರೋಜ್​ ಶಾ ಕೋಟ್ಲಾ ಸ್ಟೇಡಿಯಂ ಎಂದು ಕರೆಯುತ್ತಿದ್ದರು. ಆದ್ರೆ 24 ಆಗಸ್ಟ್​ 2019 ರಿಂದ ಹೆಸರನ್ನು ಬದಲಾವಣೆ ಮಾಡಲಾಗಿದೆ. ಜೊತೆಗೆ ಸ್ಟೇಡಿಯಂನ ಸ್ಟ್ಯಾಂಡ್​​ವೊಂದಕ್ಕೆ ವಿರಾಟ್ ಕೊಹ್ಲಿ ಪೆವಿಲಿಯನ್ ಎಂದು ಕೂಡ ಹೆಸರಿಡಲಾಗಿದೆ.

ಇನ್ನು ವಿರಾಟ್ ಕೊಹ್ಲಿ ಅವರು ಮೂಲತಹ ದೆಹಲಿಯವರು ಆಗಿದ್ದರೂ ಐಪಿಎಲ್​ನಲ್ಲಿ ಆರ್​ಸಿಬಿ ತಂಡದಿಂದಲೇ ಸ್ಟಾರ್​ಗಿರಿ ಇದೆ. ತವರಿನ ಮೈದಾನದಲ್ಲಿ ಆರ್​ಸಿಬಿ ಮತ್ತು ಡೆಲ್ಲಿಯ ಹೈವೋಲ್ಟೇಜ್​ ಮ್ಯಾಚ್ ನಡೆಯುತ್ತಿದ್ದು ವಿರಾಟ್​ ಕೊಹ್ಲಿ ಅವರ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಇದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment