newsfirstkannada.com

ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಸೂಪರ್​​ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?

Share :

Published June 17, 2024 at 4:11pm

Update June 17, 2024 at 4:12pm

  ಅಫ್ಘಾನ್​, ಬಾಂಗ್ಲಾದೇಶ, ಆಸಿಸ್​ ಟಾರ್ಗೆಟ್​ ಮಾತ್ರ ವಿರಾಟ್ ಕೊಹ್ಲಿ!

  ಆಸಿಸ್ ವಿರುದ್ಧ ಬ್ಯಾಟಿಂಗ್ ಮಾಡೋದು ಎಂದ್ರೆ ವಿರಾಟ್​ ಕೊಹ್ಲಿಗೆ ಇಷ್ಟ

  ಒಂದು ಸಲ ಕೊಹ್ಲಿ ರಿಧಮ್​ ಕಂಡುಕೊಂಡ್ರೆ ಕಟ್ಟಿ ಹಾಕೋದು ಅಸಾಧ್ಯ

ಟಿ20 ವಿಶ್ವಕಪ್​ ಟೂರ್ನಿ ಮಹತ್ವದ ಘಟ್ಟ ತಲುಪಿದೆ. ಲೀಗ್​ ಸ್ಟೇಜ್​ ಮುಕ್ತಾಯದ ಹಂತ ತಲುಪಿದ್ದು, ಸೂಪರ್-​ 8 ಕದನಗಳಿಗೆ ವೇದಿಕೆ ಸಜ್ಜಾಗಿದೆ. ಬಲಾಢ್ಯರ ನಡುವಿನ ಜಿದ್ದಾ-ಜಿದ್ದಿನ ಹೋರಾಟವನ್ನ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಲೋಕ​ ಏಕ್ಸೈಟ್​​ ಆಗಿದೆ. ಹಾಗಿದ್ರೂ, ಕಿಂಗ್​ ಕೊಹ್ಲಿಯ ಆಟ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಲೀಗ್​ ಸ್ಟೇಜ್​ನಲ್ಲಿ ನಿರೀಕ್ಷೆ ಹುಸಿಯಾಗಿದೆ ನಿಜ. ಆದ್ರೆ, ಸೂಪರ್​​ 8 ಸ್ಟೇಜ್​ನಲ್ಲಿ ವಿರಾಟರೂಪ ದರ್ಶನ ಪಕ್ಕಾ.

ಪ್ರತಿ ಬಾರಿ ಟಿ20 ವಿಶ್ವಕಪ್​ ಬಂದಾಗಲೂ ಟೀಮ್​ ಇಂಡಿಯಾ ಪರ ಕಿಂಗ್​ ಕೊಹ್ಲಿ ಘರ್ಜಿಸ್ತಿದ್ರು. ತನ್ನ ಟೆರರ್​ ಬ್ಯಾಟಿಂಗ್​ನಿಂದ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸ್ತಿದ್ರು. ಹೀಗಾಗಿಯೇ ಕೊಹ್ಲಿಯನ್ನ ಚುಟುಕು ವಿಶ್ವಕಪ್​ನ ರಾಜ ಅಂತಾ ಕರೆಯೋದು. ಆದ್ರೆ, ಈ ಬಾರಿ ರಾಜನ​ ಬ್ಯಾಟ್​ ಸೈಲೆಂಟ್​ ಆಗಿದೆ. ಆಡಿದ 3 ಪಂದ್ಯಗಳಲ್ಲಿ ಸಿಂಗಲ್​ ಡಿಜಿಟ್​ ಕ್ರಾಸ್​ ಮಾಡೋಕಾಗದೇ ಕಿಂಗ್​ ಪರದಾಡಿದ್ದಾರೆ. ಮುಂಬರೋ ಸೂಪರ್​ 8 ಕದನಗಳಿಗೂ ಮುನ್ನ ಕೊಹ್ಲಿಯ ಫಾರ್ಮ್ ಟೀಮ್​ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.

ಇದನ್ನೂ ಓದಿ: ಮಾನವೀಯತೆ ಮೆರೆದ ಡಾ.CN ಮಂಜುನಾಥ್.. ನೂತನ ಸಂಸದರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ವೆಸ್ಟ್​ ಇಂಡೀಸ್​ನಲ್ಲಿ ವಿರಾಟ್​ ವೀರಾವೇಶ ಪಕ್ಕಾ.!

ವಿರಾಟ್​ ಫಾರ್ಮ್​​​​ ಬಗ್ಗೆ ಚರ್ಚೆಗಳು ಜೋರಾಗಿದೆ. ಫ್ಯಾನ್ಸ್​​ ವಲಯದಲ್ಲಿ ಆತಂಕವೂ ಸೃಷ್ಟಿಯಾಗಿದೆ. ಆದ್ರೆ, ತುಂಬಾ ಟೆನ್ಶನ್ ಆಗೋ​ ಅಗತ್ಯವಿಲ್ಲ. ಕಿಂಗ್​ ಕೊಹ್ಲಿ ಬಿಗ್​​ ಮ್ಯಾಚ್​​ ಪ್ಲೇಯರ್​. ಸೂಪರ್​- 8 ಹಂತದಲ್ಲಿ ಕಿಂಗ್​ ಬ್ಯಾಟ್​ ಸಖತ್​ ಸೌಂಡ್​ ಮಾಡೋದು ಪಕ್ಕಾ. ಸದ್ಯ ಕೊಹ್ಲಿ ಔಟ್​ ಆಫ್​ ಫಾರ್ಮ್​ ಆಗಿದ್ರೂ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ ಈ 3 ತಂಡಗಳಿಗೂ ಕೊಹ್ಲಿಯೇ ಮೇನ್​ ಟಾರ್ಗೆಟ್​​. ಇತಿಹಾಸ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ.

ಅಫ್ಘಾನ್​​ ಎದುರು ವಿರಾಟ ರೂಪ​ ದರ್ಶನ.!

ಸೂಪರ್​ 8ನಲ್ಲಿ ಟೀಮ್​ ಇಂಡಿಯಾದ ಮೊದಲ ಎದುರಾಳಿಯೇ ಅಫ್ಘಾನಿಸ್ತಾನ. ಈ ಹಿಂದೆ 3 ವರ್ಷಗಳ ಕಾಲ ಔಟ್​ ಆಫ್​​ ಒದ್ದಾಡಿದ್ದ ಕೊಹ್ಲಿ ಕಮ್​​ಬ್ಯಾಕ್​ ಮಾಡಿದ್ದು ಕೂಡ ಇದೇ ಅಫ್ಘಾನ್​​ ಎದುರು. ಸದ್ಯ ರನ್​​ಗಳಿಕೆಗೆ ಪರದಾಡ್ತಿರೋ ಕೊಹ್ಲಿ, ಗುರುವಾರದ ಕದನದಲ್ಲಿ ಅಫ್ಘಾನ್​​ ಪಡೆಯನ್ನ ಎದುರಿಸಲಿದ್ದಾರೆ. ಈ ತಂಡದ ಎದುರು ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದು ಅಫ್ಘಾನ್​ಗೆ ಪಾಳಯದಲ್ಲಿ ಟೆನ್ಷನ್​ ಶುರುವಾಗಿದೆ.

T20ಯಲ್ಲಿ ಅಫ್ಘನ್​​​ ಎದುರು​ ಕೊಹ್ಲಿ

ಅಫ್ಘಾನಿಸ್ತಾನದ ಎದುರು 4 ಟಿ20 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಕೊಹ್ಲಿ 201 ರನ್​ ಸಿಡಿಸಿದ್ದಾರೆ. 1 ಶತಕ, 1 ಅರ್ಧಶತಕ ಪೂರೈಸಿದ್ದು, 171.79ರ ಸ್ಟ್ರೈಕ್​ರೇಟ್​​ನಲ್ಲಿ ಘರ್ಜಿಸಿದ್ದಾರೆ.

ಬಾಂಗ್ಲಾ ಟೈಗರ್ಸ್​ಗೆ ಕಿಂಗ್​​ ಕೊಹ್ಲಿಯದ್ದೇ ಭಯ.!

ಅಫ್ಘಾನಿಸ್ತಾನ ಮಾತ್ರವಲ್ಲ.. ಬಾಂಗ್ಲಾದೇಶ ತಂಡಕ್ಕೂ ಕಿಂಗ್​​ ಕೊಹ್ಲಿಯ ಭಯ ಶುರುವಾಗಿದೆ. ಈ ಹಿಂದೆ ಬಾಂಗ್ಲಾ ಸವಾಲು ಎದುರಾದಾಗೆಲ್ಲ, ವಿರಾಟರೂಪ ದರ್ಶನ ಮಾಡಿದ್ದಾರೆ. ಬಾಂಗ್ಲಾ ಟೈಗರ್ಸ್​ ಎದುರು ಬರೋಬ್ಬರಿ 96.50ಯ ರನ್​ಗಳಿಕೆಯ ಸರಾಸರಿ ಹೊಂದಿದ್ದಾರೆ.

T20ಯಲ್ಲಿ ಬಾಂಗ್ಲಾ​ ಎದುರು​ ಕೊಹ್ಲಿ

ಬಾಂಗ್ಲಾದೇಶದ ಎದುರು 5 ಇನ್ನಿಂಗ್ಸ್​ಗಳನ್ನಾಡಿರುವ ವಿರಾಟ್​ ಕೊಹ್ಲಿ, 193 ರನ್​ಗಳಿಸಿದ್ದಾರೆ. 2 ಅರ್ಧಶತಕ ಸಿಡಿಸಿರೋ ಕೊಹ್ಲಿ, ಬರೋಬ್ಬರಿ 96.50ರ ರನ್​​ಗಳಿಕೆಯ ಸರಾಸರಿ ಹೊಂದಿದ್ದಾರೆ.

ಇದನ್ನೂ ಓದಿ: ಭೀಕರ ರೈಲು ದುರಂತದಲ್ಲಿ ಉಸಿರು ಚೆಲ್ಲಿದ 5 ಪ್ರಯಾಣಿಕರು.. 25 ಮಂದಿ ಗಂಭೀರ; ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ

ಆಸ್ಟ್ರೇಲಿಯಾ ಎದುರು ತೊಡೆ ತಟ್ಟಲು ಕೊಹ್ಲಿ ಕಾತರ.!

ವಿರಾಟ್​​ ಕೊಹ್ಲಿಗೆ ಆಸಿಸ್​​ ವಿರುದ್ಧ ತೊಡೆ ತಟ್ಟೋದಂದ್ರೆ ಸಿಕ್ಕಾಪಟ್ಟೆ ಇಷ್ಟ. ಅದ್ರಲ್ಲೂ, ಬಿಗ್​ ಸ್ಟೇಜ್​, ಬಿಗ್​ ಇವೆಂಟ್​ಗಳಲ್ಲಿ ಆಸಿಸ್​ ಪಡೆಗೆ ಕಿಂಗ್​ ಕೊಹ್ಲಿ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದಾರೆ. ಆಸಿಸ್​ ಪಡೆಯ ಬೌಲರ್​ಗಳ ಮೇಲೆ ಸವಾರಿ ಮಾಡಿ ಕಾಂಗರೂಗಳ ಬೇಟೆಯಾಡಿದ್ದಾರೆ. ಟಿ20 ಫಾರ್ಮೆಟ್​ನಲ್ಲಂತೂ ಸಿಂಹಸ್ವಪ್ನದಂತೆ ಆಸಿಸ್​ ಬೌಲರ್ಸ್​ನ ಕಾಡಿದ್ದಾರೆ.

T20ಯಲ್ಲಿ ಆಸಿಸ್​ ಎದುರು​ ಕೊಹ್ಲಿ

ಟಿ20 ಕ್ರಿಕೆಟ್​ನಲ್ಲಿ ಆಸಿಸ್​ ಎದುರು 21 ಇನ್ನಿಂಗ್ಸ್​ಗಳನ್ನಾಡಿರುವ ವಿರಾಟ್​ ಕೊಹ್ಲಿ, 794 ರನ್​ಗಳಿಸಿದ್ದಾರೆ. ಬರೋಬ್ಬರಿ 52.93ರ ಸರಾಸರಿಯಲ್ಲಿ 8 ಅರ್ಧಶತಕ ಸಿಡಿಸಿರುವ ಕೊಹ್ಲಿ, 143.84 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ದಾರೆ. ವಿರಾಟ್​ ಲೀಗ್ ​ಸ್ಟೇಜ್​​ನಲ್ಲಿ ನಿರೀಕ್ಷೆ ಹುಸಿಗೊಳಿಸಿರಬಹುದು. ಅಷ್ಟಕ್ಕೆ, ಕೊಹ್ಲಿ ಆಟ ಇಷ್ಟೇ ಅಂತಾ ತಿರ್ಮಾನ ಮಾಡುವಂತಿಲ್ಲ. ಕಿಂಗ್​ ಕೊಹ್ಲಿಯ ತಾಕತ್ತು ಇಡೀ ವಿಶ್ವಕ್ಕೆ ಗೊತ್ತು. ಬಿಗ್​ಸ್ಟೇಜ್​ನಲ್ಲಿ, ಪ್ರೆಷರ್​ ಗೇಮ್​ಗಳಲ್ಲಿ ಪರ್ಫಾಮ್​​ ಮಾಡೋದಕ್ಕೆ ಕೊಹ್ಲಿ ಇಂದು ಕಿಂಗ್​ ಆಗಿರೋದು. ಒಂದು ಸಲ ಕೊಹ್ಲಿ ರಿಧಮ್​ ಕಂಡುಕೊಂಡ್ರೆ ಕಟ್ಟಿ ಹಾಕೋದು ಅಸಾಧ್ಯದ ಮಾತಾಗಲಿದೆ. ಈ ಕಾರಣದಿಂದಲೇ ಅಫ್ಘಾನ್​, ಬಾಂಗ್ಲಾ, ಆಸಿಸ್​ ತಂಡಗಳಲ್ಲಿ ಟೆನ್ಶನ್​ ಶುರುವಾಗಿದೆ. ಇತ್ತ ಟೀಮ್​ ಇಂಡಿಯಾದಲ್ಲಿ ನಿರೀಕ್ಷೆ ಹೆಚ್ಚಾಗಿದೆ. ನಿರೀಕ್ಷೆಯನ್ನ ಕೊಹ್ಲಿ ಹುಸಿಗೊಳಿಸದಿರಲಿ ಅನ್ನೋದು ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಸೂಪರ್​​ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?

https://newsfirstlive.com/wp-content/uploads/2024/06/VIRAT_KOHLI-14.jpg

Load More