ಕಿವೀಸ್ ಸಂಹಾರಕ್ಕೆ ಕಿಂಗ್ ಕೊಹ್ಲಿ ರೆಡಿ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್​ನಲ್ಲಿ ವಿರಾಟ್!

author-image
Bheemappa
Updated On
4,4,4,4,4,4,4,4,4,4,4,4,4,4,4,4,4,4,4,4,4,4,4,4; ಬಾಂಗ್ಲಾ ವಿರುದ್ಧ ಸ್ಫೋಟಕ ದ್ವಿಶತಕ ಸಿಡಿಸಿದ್ದ ಕೊಹ್ಲಿ!
Advertisment
  • ಎದುರಾಗಿರುವ ಶತಕದ ಬರವನ್ನೂ ತೀರಿಸಿಕೊಳ್ತಾರಾ ಕೊಹ್ಲಿ..?
  • ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ತಂಡದ ಸಮರಾಭ್ಯಾಸ ಶುರು
  • ವಿರಾಟ್ ಕೊಹ್ಲಿ ಬಂದಾಯಿತು, ಕಿವೀಸ್​ಗೆ ಕಾದಿದೆ ಮಾರಿಹಬ್ಬ!

ಇಂಡೋ -ಕಿವೀಸ್ ಟೆಸ್ಟ್​ ಸಿರೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. ಕಿವೀಸ್ ಕಿವಿ ಹಿಂಡಲು ಕಿಂಗ್ ಕೊಹ್ಲಿಯು ಬಂದಾಗಿದೆ. ಇವತ್ತಿನಿಂದ ಸಮರಾಭ್ಯಾಸ ನಡೆಸಲಿರುವ ವಿರಾಟ್​, ಫಸ್ಟ್ ಮ್ಯಾಚ್​​ನಲ್ಲೇ ವಿರಾಟ ರೂಪ ದರ್ಶನಕ್ಕೆ ಸಜ್ಜಾಗಿದ್ದಾರೆ. ಟೆಸ್ಟ್​ ಶತಕದ ಬರಕ್ಕೆ 2ನೇ ತವರಿನಲ್ಲಿ ಫುಲ್​ ಸ್ಟಾಫ್​ ಇಡೋ ಲೆಕ್ಕಾಚಾರದಲ್ಲಿ ಕೊಹ್ಲಿ ಇದ್ದಾರೆ.

ಇಂದಿನಿಂದ ಟೀಮ್ ಇಂಡಿಯಾ ಸಮರಾಭ್ಯಾಸ ಶುರು

ಇಂಡೋ-ಕಿವೀಸ್ ಟೆಸ್ಟ್​ ಸಿರೀಸ್​ಗೆ ಕೌಂಟ್​​ಡೌನ್ ಶುರುವಾಗಿದೆ. ಅಕ್ಟೋಬರ್​ 16ರಿಂದ ಬೆಂಗಳೂರಿನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಈ ಸರಣಿಗೆ ಇಂದಿನಿಂದ ಟೀಮ್​ ಇಂಡಿಯಾ ಸಮರಾಭ್ಯಾಸ ನಡೆಸಲಿದೆ. ಬಾಂಗ್ಲಾ ಸರಣಿ ಬಳಿಕ ವಿದೇಶಕ್ಕೆ ಹಾರಿದ್ದ ವಿರಾಟ್​ ಕೊಹ್ಲಿ ಕೂಡ ನ್ಯೂಜಿಲೆಂಡ್​ ಸರಣಿಗಾಗಿ ಲಂಡನ್​​ನಿಂದ ವಾಪಸ್​ ಆಗಿದ್ದು, ಕಿವೀಸ್ ಸಂಹಾರಕ್ಕೆ ಸನ್ನದ್ಧರಾಗಿದ್ದಾರೆ.

ಇದನ್ನೂ ಓದಿ: RCB ಸ್ಟಾರ್​ ವೇಗಿಗೆ ಸರ್ಕಾರಿ ಕೆಲಸ; ಮೊಹಮ್ಮದ್​ ಸಿರಾಜ್​ ಈಗ ಪೊಲೀಸ್​ ಅಧಿಕಾರಿ; ಸಂಬಳ ಎಷ್ಟು?

publive-image

ಹಿಂದಿನ ಬಾಂಗ್ಲಾ ಎದುರಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ವಿರಾಟ್, ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲೇ ಉಗ್ರಾವತಾರ ಪ್ರದರ್ಶಿಸೋ ಲೆಕ್ಕಾಚಾರದಲ್ಲಿದ್ದಾರೆ. ಕಮ್​ಬ್ಯಾಕ್ ಕನವರಿಕೆಯಲ್ಲಿರುವ ವಿರಾಟ್,​ ತಮ್ಮ ಫೇವರಿಟ್ ಗ್ರೌಂಡ್​​ನಲ್ಲಿ ನ್ಯೂಜಿಲೆಂಡ್​ಗೆ ವಿರಾಟರೂಪ ದರ್ಶನದ ಕನವರಿಕೆಯಲ್ಲಿದ್ದಾರೆ.

ಫೇವರಿಟ್​ ಸ್ಟೇಡಿಯಂನಲ್ಲಿ 12 ವರ್ಷದಿಂದ ನಡೆದಿಲ್ಲ ಆಟ.!

ವಿರಾಟ್​ ಕೊಹ್ಲಿ ದೆಹಲಿ ಮೂಲದವ್ರೇ ಆಗಿದ್ರೂ, ಬೆಂಗಳೂರು 2ನೇ ತವರು ಮನೆ. 17 ವರ್ಷಗಳಿಂದ ಬೆಂಗಳೂರಿನ ಭಾಗವಾಗಿರುವ ವಿರಾಟ್​​ಗೆ, ಚಿನ್ನಸ್ವಾಮಿ ಅಂಗಳ ಫೇವರಿಟ್ ಸ್ಟ್ರೇಡಿಯಂ. ಆದ್ರೆ, ಈ ಫೇವರಿಟ್​ ಸ್ಟೇಡಿಯಂನಲ್ಲಿ ಕಳೆದ 12 ವರ್ಷಗಳಿಂದ ಟೆಸ್ಟ್​ನಲ್ಲಿ ರನ್​ಗಳಿಸಲು ಕೊಹ್ಲಿ ಪರದಾಡಿದ್ದಾರೆ.

2012 ಆಗಸ್ಟ್​ 31. ನ್ಯೂಜಿಲೆಂಡ್ ಎದುರಿನ ಕೊನೆ ಟೆಸ್ಟ್​ ಪಂದ್ಯ. ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ ವಿರಾಟ್​, 2ನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದ್ದರು. ಆ​ ಬಳಿಕ ವಿರಾಟ್​, ಚಿನ್ನಸ್ವಾಮಿಯಲ್ಲಿ ಆಡಿರುವ 3 ಟೆಸ್ಟ್​ಗಳಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ.

ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್!

ವಿರಾಟ್, 12 ವರ್ಷಗಳ ಮತ್ತದೇ ನ್ಯೂಜಿಲೆಂಡ್​ ಎದುರು ಚಿನ್ನಸ್ವಾಮಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ರನ್ ಪ್ರವಾಹ ನಡೆಸುವ ಹಠದಲ್ಲಿರುವ ಕೊಹ್ಲಿ, ಚಿನ್ನಸ್ವಾಮಿಯ ಶತಕದ ಬರ ನೀಗಿಸಿಕೊಳ್ಳಲು ಪಣತೊಟ್ಟಿದ್ದಾರೆ. ಜೊತೆಗೆ ಟೆಸ್ಟ್​ ವೃತ್ತಿ ಜೀವನದಲ್ಲಿ 1 ವರ್ಷ 2 ತಿಂಗಳಿಂದ ಎದುರಾಗಿರುವ ಶತಕದ ಬರವನ್ನೂ ತೀರಿಸಿಕೊಳ್ಳಲು ಹಂಬಲಿಸ್ತಿದ್ದಾರೆ.

ರನ್ ಪ್ರಹಾರ ಫಿಕ್ಸ್​.. ನೀಗಲಿದೆ ಮೂರಂಕಿಯ ಬರ..!

ವಿರಾಟ್​ ಕೊಹ್ಲಿಗೆ ಚಿನ್ನಸ್ವಾಮಿ ಅಂಗಳ ಮಾತ್ರವೇ ಫೇವರಿಟ್ ಗ್ರೌಂಡ್ ಆಗಿಲ್ಲ. ನ್ಯೂಜಿಲೆಂಡ್ ಕೂಡ ಫೇವರಿಟ್ ಎದುರಾಳಿ ತಂಡವಾಗಿದೆ. ಕಿವೀಸ್​ ವಿರುದ್ಧ ರನ್​ ಕೊಳ್ಳೆ ಹೊಡೆದಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​​ ಸರಣಿ; ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​

publive-image

ಟೆಸ್ಟ್​ನಲ್ಲಿ ​ಕಿವೀಸ್ ಎದುರು ಕೊಹ್ಲಿ

ನ್ಯೂಜಿಲೆಂಡ್ ಎದುರು 11 ಟೆಸ್ಟ್​ ಪಂದ್ಯಗಳನ್ನಾಡಿರುವ ವಿರಾಟ್, 866 ರನ್ ಗಳಿಸಿದ್ದಾರೆ. 45.57ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್ ಗಳಿಸಿರುವ ಕೊಹ್ಲಿ 3 ಶತಕ, 3 ಅರ್ಧಶತಕ ಸಿಡಿಸಿದ್ದಾರೆ.

ಚಿನ್ನಸ್ವಾಮಿ ಮೈದಾನದ ಕಂಡೀಷನ್ಸ್​ ಬಗ್ಗೆ ಕೊಹ್ಲಿಗೆ ಚೆನ್ನಾಗಿ ಅರಿವಿದೆ. ಇದೇ ಸ್ಟೇಡಿಯಂನಲ್ಲಿ ರನ್ ಸುನಾಮಿಯಲ್ಲೇ ಸೃಷ್ಟಿಸಿದ ಹಲವು ಉದಾಹರಣೆಗಳಿವೆ. ಇದೀಗ ಸ್ಮಾಲ್ ಬ್ರೇಕ್​ನ ಬಳಿಕ 2ನೇ ತವರಿಗೆ ಬಂದಿರುವ ವಿರಾಟ್, ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment