newsfirstkannada.com

VIDEO: ಡಿಕೆ ಸಿಕ್ಸರ್​ ಸಿಡಿಸಿದಾಗ ಕುಣಿದು ಕುಪ್ಪಳಿಸಿದ ಕೊಹ್ಲಿ; ಹೇಗಿತ್ತು ವಿರಾಟ್​​ ರಿಯಾಕ್ಷನ್..​​?

Share :

Published March 26, 2024 at 8:06pm

Update March 26, 2024 at 8:07pm

    ಪಂಜಾಬ್​​ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು

    ಪಂದ್ಯದಲ್ಲಿ ಆರ್​​​ಸಿಬಿ ಫಿನಿಶರ್​ ದಿನೇಶ್​ ಕಾರ್ತಿಕ್​​ ಅದ್ಭುತ ಬ್ಯಾಟಿಂಗ್​..!​​

    ದಿನೇಶ್​ ಕಾರ್ತಿಕ್​​ ಸಿಕ್ಸರ್​ ಸಿಡಿಸಿದಾಗ ಕುಣಿದು ಕುಪ್ಪಳಿಸಿದ ಕಿಂಗ್​ ಕೊಹ್ಲಿ

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ 6ನೇ ಪಂದ್ಯದಲ್ಲಿ ಪಂಜಾಬ್​​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಟಾಸ್ ಸೋತರೂ ಫಸ್ಟ್​ ಬ್ಯಾಟಿಂಗ್​​​ ಮಾಡಿದ ಪಂಜಾಬ್​​​ 176 ರನ್​ ಗಳಿಸಿ ಬಿಗ್​ ಟಾರ್ಗೆಟ್​​ ನೀಡಿತ್ತು. ಈ ರನ್​ ಚೇಸ್​ ಮಾಡಿದ ಆರ್​​​ಸಿಬಿ ನಿಗದಿತ 19.2 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್​ ಗಳಿಸಿ ಗೆದ್ದು ಬೀಗಿದೆ.

ಇನ್ನು, ಈ ಪಂದ್ಯದ ಗೆಲುವಿನ ಪ್ರಮುಖ ರುವಾರಿಗಳು ವಿರಾಟ್​​ ಕೊಹ್ಲಿ ಮತ್ತು ದಿನೇಶ್​ ಕಾರ್ತಿಕ್​​. ಬ್ಯಾಟ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡೂ ಸಂಕಷ್ಟದಲ್ಲಿದ್ದ ಆರ್​​ಸಿಬಿ ಕೈ ಹಿಡಿದ ಕೊಹ್ಲಿ 2 ಸಿಕ್ಸರ್​​, 11 ಫೋರ್​ ಸಿಡಿಸಿ 77 ರನ್​ ಪೇರಿಸಿದ್ರು. ಕೊಹ್ಲಿ ವಿಕೆಟ್ ಪತವಾಗುತ್ತಿದ್ದಂತೆ ಪಂದ್ಯ ಪಂಜಾಬ್​ ಕಡೆ ವಾಲಿತ್ತು. ಆಗ ಬಂದ ದಿನೇಶ್​ ಕಾರ್ತಿಕ್​​​ ಪಂದ್ಯದ ದಿಕ್ಕನ್ನೇ ಬದಲಿಸಿದ್ರು.

ತಾನು ಎದುರಿಸಿದ ಕೇವಲ 10 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​​ 2 ಸಿಕ್ಸರ್​​, 3 ಫೋರ್​ ಸಮೇತ 28 ರನ್​​ ಸಿಡಿಸಿ ಬೆಂಗಳೂರನ್ನು ಗೆಲ್ಲಿಸಿದ್ರು. ಕೊನೆ ಓವರ್​​ನಲ್ಲಿ ದಿನೇಶ್​ ಕಾರ್ತಿಕ್​​ ಸಿಕ್ಸರ್​ ಸಿಡಿಸಿದಾಗ ವಿರಾಟ್​ ಕೊಹ್ಲಿ ಡಗೌಟ್​​ನಲ್ಲಿ ಕೂತು ಪ್ರೈಸ್​ಲೆಸ್​ ರಿಯಾಕ್ಷನ್​ ಕೊಟ್ಟರು. ಯಾವಾಗ ದಿನೇಶ್​ ಫೋರ್​ ಬಾರಿಸಿ ತಂಡವನ್ನು ಗೆಲ್ಲಿಸಿದ್ರೂ ಆಗ ಕೊಹ್ಲಿ ಕುಣಿದು ಕುಪ್ಪಳಿಸಿದ್ರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇದನ್ನೂ ಓದಿ: VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಡಿಕೆ ಸಿಕ್ಸರ್​ ಸಿಡಿಸಿದಾಗ ಕುಣಿದು ಕುಪ್ಪಳಿಸಿದ ಕೊಹ್ಲಿ; ಹೇಗಿತ್ತು ವಿರಾಟ್​​ ರಿಯಾಕ್ಷನ್..​​?

https://newsfirstlive.com/wp-content/uploads/2024/03/Kohli_DK.jpg

Load More