ಒಂದು ಇನ್ನಿಂಗ್ಸ್.. ಹಲವು ಪ್ರಶ್ನೆಗಳಿಗೆ ಉತ್ತರ
ಇದು ವಿಶ್ವ ಸಾಮ್ರಾಟನ ನಯಾ ವರ್ಷನ್ ಎಂದ ಫ್ಯಾನ್ಸ್
ಟಿ-20 ವಿಶ್ವಕಪ್ ಪ್ರಶ್ನೆಗೆ ಕೊಹ್ಲಿ ಖಡಕ್ ಮೆಸೇಜ್ ಕೊಟ್ಟಿದ್ದಾರೆ
ಒಂದೇ ಒಂದು ಇನ್ನಿಂಗ್ಸ್, ವಿರಾಟ್ ಕೊಹ್ಲಿ ಬಗೆಗಿನ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಭವಿಷ್ಯದ ಬಗೆಗಿನ ಪ್ರಶ್ನೆಗೂ ಪಂಜಾಬ್ ಎದುರಿನ ಪವರ್ ಫುಲ್ ಬ್ಯಾಟಿಂಗ್ ಅನ್ಸರ್ ಆಗಿದೆ. ಎದುರಾಳಿಗಳಿಗೆ ಎಚ್ಚರಿಕೆ ನೀಡಿದ ಕೊಹ್ಲಿ ಜೊತೆಗೆ ಫ್ಯಾನ್ಸ್ಗೆ ಪ್ರಾಮೀಸ್ ಮಾಡಿದ್ದಾರೆ. ಏನು ಆ ಪ್ರಾಮೀಸ್..?
ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡ್ತಾರಾ? ಕೊಹ್ಲಿ ಅಗತ್ಯತೆ, ಟಿ20 ವಿಶ್ವಕಪ್‌ನಲ್ಲಿ ಇದೆಯಾ..? ಉತ್ತಮ ಸ್ಟ್ರೈಕ್ರೇಟ್ ಹೊಂದಿರದ ವಿರಾಟ್, ಟಿ20 ಫಾರ್ಮೆಟ್‌ಗೆ ಸೂಕ್ತಾನಾ..? ಇಂಥ ಪ್ರಶ್ನೆಗಳು ಒಂದಲ್ಲ.. ಎರಡಲ್ಲ.. ಹತ್ತು ಹಲವು. ಆದ್ರೀಗ ಇದೆಲ್ಲಕ್ಕೂ ಕಿಂಗ್ ಕೊಹ್ಲಿ, ಒಂದೇ ಇನ್ನಿಂಗ್ಸ್ನಲ್ಲಿ ಉತ್ತರ ನೀಡಿದ್ದಾರೆ.
ಪಂಜಾಬ್ ಕಿಂಗ್ಸ್ ಎದುರು ಅದ್ಭುತ ಬ್ಯಾಟಿಂಗ್ ನಡೆಸಿದ ವಿರಾಟ್, ಬೌಲರ್ಗಳ ಮೇಲೆ ನಡೆಸಿದ್ದು ಅಕ್ಷರಶಃ ದಂಡಯಾತ್ರೆ. ಬರೋಬ್ಬರಿ 49 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಒಳಗೊಂಡ 77 ರನ್ ಸಿಡಿಸಿ, ಮ್ಯಾಚ್ ವಿನ್ನರ್ ಎನಿಸಿದ್ರು. ಈ ಪರ್ಫಾಮೆನ್ಸ್ ಹಲವು ಪ್ರಶ್ನೆಗಳಿಗೆ ವಿರಾಟ್ ನೀಡಿದ ಉತ್ತರವಾಗಿತ್ತು.
ಇದು ವಿಶ್ವ ಸಾಮ್ರಾಟನ ಹೊಸ ಅವತಾರ
ಚಿನ್ನಸ್ವಾಮಿಯಲ್ಲಿ ವಿರಾಟ್, ಜಸ್ಟ್ ಬ್ಯಾಟಿಂಗ್ ನಡೆಸಿ ಪಂದ್ಯವನ್ನಷ್ಟೇ ಗೆಲ್ಲಿಸಲಿಲ್ಲ. ತಮ್ಮ ಸಾಮರ್ಥ್ಯದ ಪ್ರಶ್ನೆಗೆ ನೀಡಿದ ಖಡಕ್ ಅನ್ಸರ್ ಆಗಿತ್ತು. ಅದರಲ್ಲೂ ವಿರಾಟ್ ತೋರಿದ ಅಗ್ರೆಸ್ಸಿವ್ ಅಪ್ರೋಚ್. 157.14ರ ಸ್ಟ್ರೇಕ್ರೇಟ್ ಬ್ಯಾಟಿಂಗ್. ಕೊಹ್ಲಿ ಬಾರಿಸಿದ ಒಂದೊಂದು ಶಾಟ್, ನಯಾ ವರ್ಷನ್ ಕೊಹ್ಲಿ ಅನ್ನೋದನ್ನ ಬಿಂಬಿಸ್ತಿತ್ತು.
ಟಿ20 ವಿಶ್ವಕಪ್ ಪ್ರಶ್ನೆಗೆ ಕೊಹ್ಲಿ ಖಡಕ್ ಮೆಸೇಜ್..!
ವಿರಾಟ್, ಟಿ20 ಫಾರ್ಮೆಟ್‌ಗೆ ಸೂಟ್ ಆಗಲ್ಲ, ಸ್ಟ್ರೈಕ್ರೇಟ್ ಇಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ವಿರಾಟ್, ವೀರಾವೇಶದ ಬ್ಯಾಟಿಂಗ್, ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಯನ್ನ ಸೇರಿಸಿಕೊಳ್ಳಬೇಕಾ ಎಂಬ ಚಿಂತೆಯಲ್ಲಿದ್ದ ಸೆಲೆಕ್ಷನ್ ಕಮಿಟಿಗೂ ನೀಡಿದ ಮೆಸೇಜ್ ಆಗಿತ್ತು.
ನಾನು ನನ್ನ ಆಟವನ್ನ ಫ್ರೂವ್ ಮಾಡಿಕೊಳ್ಳಬೇಕಿತ್ತು. ನನ್ನ ಹೆಸರು ವಿಶ್ವದ ಹಲವೆಡೆ ಟಿ20 ವಿಶ್ವಕಪ್ ಪ್ರಚಾರದಲ್ಲಿ ಬಳಸಲಾಗ್ತಿದೆ -ವಿರಾಟ್ ಕೊಹ್ಲಿ, ಆರ್ಸಿಬಿ ಆಟಗಾರ
ಟೀಕಕಾರರಿಗೆ ಟಾಂಗ್.. ಫ್ಯಾನ್ಸ್ಗೆ ಕೊಹ್ಲಿ ಪ್ರಾಮೀಸ್..!
ವಿರಾಟ್ ಕೇವಲ ಸೆಲೆಕ್ಷನ್ ಕಮಿಟಿಗೆ ಮಾತ್ರವೇ ಅಲ್ಲ. ಅಂಕಿ-ಅಂಶಗಳ ಬಗ್ಗೆ ಪ್ರಶ್ನಿಸಿ ಟೀಕಿಸುವವರಿಗೂ ಟಾಂಗ್ ನೀಡಿದ್ರು. ಅಷ್ಟೇ ಅಲ್ಲ. ನನ್ನ ಆಟ ಆರೆಂಜ್ ಕ್ಯಾಪ್ಗಾಗಿ ಅಲ್ಲ. ತಂಡದ ಫಲಿತಾಂಶಕ್ಕಾಗಿಯೇ ಎಂದು ಫ್ಯಾನ್ಸ್ ಮುಂದೆ ಪ್ರಾಮೀಸ್ ಮಾಡಿದ್ರು.
ನೀವು ಆಡುವಾಗ ಜನ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಸಾಧನೆ, ಅಂಕಿ-ಅಂಶಗಳು ಬಗ್ಗೆ ಮಾತನಾಡ್ತಾರೆ. ಆದರೆ ಹಿಂತಿರುಗಿ ನೋಡಿದಾಗ ಅದು ನೆನಪುಗಳನ್ನ ಕ್ರಿಯೇಟ್ ಮಾಡುತ್ತೆ. ಡ್ರೆಸ್ಸಿಂಗ್ ರೂಮ್ ವಾತಾವರಣ ಬದಲಿಸಿರುವ ರಾಹುಲ್ ಭಾಯ್, ಇದನ್ನೇ ಹೇಳುತ್ತಾರೆ. ಏಕೆಂದರೆ ನಿಮ್ಮ ಸ್ನೇಹಿತರೊಂದಿಗೆ ಹಾಗೂ ಅಭಿಮಾನಿಗಳ ಮುಂದೆ ಆಡುವ ಈ ಸಮಯ ಕಳೆದುಕೊಳ್ಳುತ್ತೀರಿ. ಹೀಗಾಗಿ ಸಿಕ್ಕ ಅವಕಾಶದಲ್ಲಿ ತಂಡಕ್ಕೆ ಸಹಾಯ ಮಾಡುವುದು ನನ್ನ ಗುರಿ. ಅದು ಟೀಮ್ ಇಂಡಿಯಾ ಆಗಲಿ, ಆರ್ಸಿಬಿಯೇ ಆಗಲಿ. ನಾನು ಈ ಒಂದು ಪ್ರಮಾಣ ಮಾಡಬಲ್ಲೆ-ವಿರಾಟ್ ಕೊಹ್ಲಿ, ಆರ್ಸಿಬಿ ಆಟಗಾರ
ಕೊಹ್ಲಿಯ ಈ ಮಾತು, ಆರ್ಸಿಬಿ ಫ್ಯಾನ್ಸ್ಗೆ ಕಪ್ ಗೆಲ್ಲಿಸುವ ವಿಶ್ವಾಸ ಹೆಚ್ಚಿಸಿದ್ರೆ. ಎದುರಾಳಿ ತಂಡಗಳಿಗೆ ಪರೋಕ್ಷ ವಾರ್ನಿಂಗ್ ನೀಡಿದಂತ್ತಿತ್ತು.
ಇದು ಜಸ್ಟ್ ಟೀಸರ್.. ಮುಂದಿದೆ ಮಾರಿ ಹಬ್ಬ..!
ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬೆರೆದಿರುವ ವಿರಾಟ್, ಮಾಸ್ಟರ್ ಕ್ಲಾಸ್ ಆಟದಿಂದ ಫ್ಯಾನ್ಸ್ ದಿಲ್ ಗೆದ್ದಿದ್ದಾರೆ. ಎದುರಾಳಿ ತಂತ್ರ, ಪ್ರತಿತಂತ್ರಕ್ಕೆ ತಕ್ಕಂತೆ ಬ್ಯಾಟ್ ಬೀಸಿದ ವಿರಾಟ್, ಜಸ್ಟ್ ಬ್ಯಾಟಿಂಗ್ ಟೀಸರ್ ತೋರಿಸಿದ್ದಾರೆ. ತಂಡದ ಗೆಲುವಿಗೆ ಪಣ ತೊಟ್ಟಿರುವ ವಿರಾಟ್, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಧ್ವಂಸ ಸೃಷ್ಟಿಸೋದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್