/newsfirstlive-kannada/media/post_attachments/wp-content/uploads/2025/04/VIRAT_KOHLI_RAJAT.jpg)
ಕಿಂಗ್ ಕೊಹ್ಲಿ ಹಾಗೂ ಕ್ಯಾಪ್ಟನ್​ ರಜತ್ ಪಾಟಿದಾರ್ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಬಿಗ್ ಟಾರ್ಗೆಟ್ ಸೆಟ್ ಮಾಡಿದೆ. ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 222 ರನ್​ಗಳ ಗುರಿಯನ್ನು ಮುಂಬೈ ಇಂಡಿಯನ್ಸ್​ಗೆ ನೀಡಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್​​ಸಿಬಿಯನ್ನ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭವೇನೂ ಪಡೆಯಲಿಲ್ಲ. ಕ್ರೀಸ್​ನಲ್ಲಿ ಸೆಟ್ ಆಗಬೇಕು ಎನ್ನುವಷ್ಟರಲ್ಲಿ ಸಾಲ್ಟ್​ 4 ರನ್​ಗೆ ಟ್ರೆಂಟ್ ಬೋಲ್ಟ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆಗಿ ನಿರಾಸೆ ಮೂಡಿಸಿದರು.
ಬಳಿಕ ಬ್ಯಾಟಿಂಗ್​ಗೆ ಬಂದ ದೇವದತ್ ಪಡಿಕ್ಕಲ್ ವಿರಾಟ್​ ಕೊಹ್ಲಿಗೆ ಒಳ್ಳೆಯ ಸಾಥ್ ಕೊಟ್ಟರು. ಹೀಗಾಗಿ ಕೊಹ್ಲಿ ಮುಂಬೈ ವಿರುದ್ಧ 7ನೇ ಹಾಫ್ ಸೆಂಚುರಿ ಸಿಡಿಸಿದರು. ಪಂದ್ಯದಲ್ಲಿ ಕೇವಲ 29 ಎಸೆತ ಎದುರಿಸಿದ ವಿರಾಟ್ 6 ಬೌಂಡರಿ, 2 ಸಿಕ್ಸರ್​ನಿಂದ ಅರ್ಧಶತಕ ಪೂರೈಸಿದರು. ಈ ಮ್ಯಾಚ್​ನಲ್ಲಿ ವಿರಾಟ್ ಒಟ್ಟು 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್​ನಿಂದ 67 ರನ್​ಗಳನ್ನ ಸಿಡಿಸಿದರು. ಇನ್ನು ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 22 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡಕ್ಕೆ ಕಾಣಿಕೆ ನೀಡಿದರು. ಇದರಲ್ಲಿ 2 ಬೌಂಡರಿ ಇದ್ರೆ 3 ಆಕಾಶದೆತ್ತರವಾದ ಸಿಕ್ಸರ್​ ಇದ್ದವು.
ಪಡಿಕ್ಕಲ್ ಔಟ್ ಬಳಿಕ ಕ್ರೀಸ್​ಗೆ ಬಂದ ಕ್ಯಾಪ್ಟನ್ ರಜತ್ ಪಾಟಿದಾರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಮುಂಬೈ ಬೌಲರ್​ಗಳಿಗೆ ಭಯ ಇಟ್ಟರು. 32 ಬಾಲ್​ಗಳನ್ನು ಆಡಿದ ರಜತ್ 5 ಬೌಂಡರಿ, 4 ಸಿಕ್ಸರ್​ನಿಂದ 64 ರನ್​ ಸಿಡಿಸಿದರು. ವಿಕೆಟ್​ ಕೀಪರ್ ಜಿತೇಶ್ ಶರ್ಮಾ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿ ಕೇವಲ 19 ಎಸೆತಗಳಲ್ಲಿ 2 ಫೋರ್ ಹಾಗೂ 4 ಸಿಕ್ಸರ್​​ಗಳಿಂದ 40 ರನ್​ಗಳನ್ನು ಚಚ್ಚಿದರು. ಆರ್​ಸಿಬಿ ಬ್ಯಾಟ್ಸ್​ಮನ್​ಗಳ ಅದ್ಭುತವಾದ ಬ್ಯಾಟಿಂಗ್​ನಿಂದ 20 ಓವರ್​ಗಳಲ್ಲಿ 5 ವಿಕೆಟ್​ಗೆ 222 ರನ್​ಗಳ ಗುರಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ