/newsfirstlive-kannada/media/post_attachments/wp-content/uploads/2024/11/RCB_KOHLI-1.jpg)
ಮೆಗಾ ಹರಾಜಿನಲ್ಲಿ 22 ಆಟಗಾರರ ಬಲಿಷ್ಠ ಪಡೆಯನ್ನ ಕಟ್ಟಿರುವ ಆರ್ಸಿಬಿ, 2025ರ ಹೊಸ ಆಧ್ಯಾಯ ಆರಂಭಿಸಲು ಸನ್ನದ್ಧವಾಗಿದೆ. ಹರಾಜಿನಲ್ಲಿ ಬಲಿಷ್ಠ ಪಡೆ ಕಟ್ಟಿದ್ರೂ, ಕ್ಯಾಪ್ಟೆನ್ಸಿ ಮೆಟಿರಿಯಲ್ ಕೊರತೆ ತಂಡವನ್ನ ಕಾಡುತ್ತಿದೆ. ಆರ್ಸಿಬಿಗೆ ನಾಯಕ ಯಾರ್ ಆಗ್ತಾರೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ. ಅದಕ್ಕೆ ಉತ್ತರ ವಿರಾಟ್ ಕೊಹ್ಲಿ. ಕೊಹ್ಲಿ ಆರ್ಸಿಬಿ ನಾಯಕ ಆಗ್ತಾರಾ?.
ಇದು ಆರ್ಸಿಬಿ ಹೊಸ ಅಧ್ಯಾಯ. ಈ ಹಿಂದಿನ ಸೀಸನ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಹೇಳಿದ್ದ ಈ ಹೊಸ ಆಧ್ಯಾಯ ಅಸಲಿಯಾಗಿ 2025ರ ಮೆಗಾ ಹರಾಜಿನಿಂದ ಶುರುವಾಗಿದೆ. ಪ್ಲೇ ಬೋಲ್ಡ್ ಎಂಬ ಟ್ಯಾಗ್ಲೈನ್ಗೆ ತಕ್ಕಂತೆ ಹರಾಜಿನಲ್ಲಿ ಬೋಲ್ಡ್ ಡಿಸಿಷನ್ ತೆಗೆದುಕೊಂಡಿರುವ ಆರ್ಸಿಬಿ, ಹೊಸ ಬಲಿಷ್ಠ ತಂಡವನ್ನೇ ಕಟ್ಟಿದೆ. ಆದ್ರೆ, ಕ್ಯಾಪ್ಟನ್ಸಿ ಮೆಟಿರಿಯಲ್ ಖರೀದಿಸದ ಆರ್ಸಿಬಿ, ವಿರಾಟ್ ಕೊಹ್ಲಿಯನ್ನೇ ನಾಯಕನಾಗಿ ನೇಮಿಸುವ ಸಂದೇಶವನ್ನೂ ನೀಡಿದೆ.
ಆರ್ಸಿಬಿಗೆ ಮತ್ತೆ ವಿರಾಟ್ ಕೊಹ್ಲಿಯೇ ನಾಯಕ..!
2021ರಲ್ಲಿ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ, 4 ವರ್ಷಗಳ ಬಳಿಕ ಮತ್ತೆ ನಾಯಕತ್ವದ ಹುದ್ದೆಗೇರುವುದು ಬಹುತೇಕ ಕನ್ಫರ್ಮ್.. ಸೀಸನ್-18ರಿಂದ ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಯುಗ ಪುನಾರಂಭಗೊಳ್ಳಲಿದ್ದು, ಆರ್ಸಿಬಿಯ ಗತ ವೈಭವ ಮರಳಿ ಬರಲಿದೆ. ಕೊಹ್ಲಿ ಮತ್ತೆ ನಾಯಕತ್ವದ ಪಟ್ಟಕ್ಕೇರಲು ನಾನಾ ಕಾರಣಗಳ ಜೊತೆ ಲೆಕ್ಕಾಚಾರಗಳೂ ಅಡಗಿವೆ.
ಬಲಿಷ್ಠ ತಂಡದಲ್ಲಿಲ್ಲ ನಾಯಕತ್ವಕ್ಕೆ ಸಮರ್ಥ ಆಟಗಾರ..!
ಮೆಗಾ ಹರಾಜಿನಲ್ಲಿ ಆರ್ಸಿಬಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಆದ್ರೆ, ಹರಾಜಿನಲ್ಲಿ ಖರೀದಿಸಿರುವ ಹೊಸ 19 ಆಟಗಾರರಾಗಲಿ ಅಥವಾ ರಿಟೈನ್ನಲ್ಲಿ ಉಳಿಸಿಕೊಂಡಿದ್ದ ರಜತ್ ಪಾಟಿದಾರ್, ಯಶ್ ದಯಾಳ್ ಆಗಲಿ ನಾಯಕತ್ವಕ್ಕೆ ಸೂಕ್ತ ಆಟಗಾರರಲ್ಲ. ರಜತ್ ಪಟಿದಾರ್ ದೇಶಿ ಕ್ರಿಕೆಟ್‌ನ ನಾಯಕರಾಗಿದ್ದರು. ಅನುಭವ ಇಲ್ಲ. ಹೀಗಾಗಿ ಕಿಂಗ್ ಕೊಹ್ಲಿ ಮತ್ತೆ ಪಟ್ಟಕ್ಕೆ ಏರುವುದು ಖಚಿತ.!
ಆರ್ಸಿಬಿಯ ಯಶಸ್ವಿ ನಾಯಕ ವಿರಾಟ್ ಕೊಹ್ಲಿ..!
2008ರಿಂದ ಈವರೆಗೆ ಆರ್ಸಿಬಿ ಒಂದಲ್ಲ.. ಎರಡಲ್ಲ ಬರೋಬ್ಬರಿ 7 ನಾಯಕರನ್ನ ಕಂಡಿದೆ. ಆದ್ರೆ, ಈ ಪೈಕಿ ಯಶಸ್ವಿ ನಾಯಕ ಎನಿಸಿಕೊಂಡಿರೋದು ವಿರಾಟ್ ಕೊಹ್ಲಿ ಮಾತ್ರ. ಕಪ್ ಗೆದ್ದಿಲ್ಲ ಎಂಬ ಹಣೆ ಪಟ್ಟಿ ಬಿಟ್ಟರೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡ ಅದ್ಭುತ ಪ್ರದರ್ಶನ ಹೊರಗಾಕಿದೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು.
ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ
ಆರ್ಸಿಬಿ ನಾಯಕನಾಗಿ ವಿರಾಟ್ 143 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದು, ಈ ಪೈಕಿ 66 ಪಂದ್ಯಗಳಲ್ಲಿ ಗೆಲುವಿನ ಗಿಫ್ಟ್ ನೀಡಿದ್ದಾರೆ. 70 ಪಂದ್ಯಗಳಲ್ಲಿ ಸೋಲುಂಡಿದ್ದಾರೆ. 3 ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ರೆ, 4 ಪಂದ್ಯಗಳೂ ಫಲಿತಾಂಶ ಕಾಣದೆ ಅಂತ್ಯವಾಗಿವೆ.
ವಿರಾಟ್ ಅಗ್ರೆಸ್ಸಿವ್ ಆ್ಯಟಿಟ್ಯೂಡ್ ತಂಡಕ್ಕೆ ಎನರ್ಜಿ..!
ವಿರಾಟ್ ಕೊಹ್ಲಿ ಅಗ್ರೆಷನ್, ಆರ್ಸಿಬಿ ತಂಡಕ್ಕೆ ಹೊಸ ಹುರುಪು ನೀಡುತ್ತೆ. ಏಟಿಗೆ ಏಟು ಎಂಬ ಆಕ್ರಮಣಕಾರಿ ಮನೋಭಾವದ ಕೊಹ್ಲಿಯ ನಾಯಕತ್ವದಲ್ಲಿ ಎದುರಾಳಿಗಳಿಗೆ ಅಪಾಯ ಹೆಚ್ಚು. ಇದಕ್ಕೆಲ್ಲ ಮಿಗಿಲಾಗಿ ವಿರಾಟ್ ಕೊಹ್ಲಿ ಒಳಗಿನ ಅಗ್ರೆಸ್ಸಿವ್ನೆಸ್, ಎನರ್ಜಿ, ಗೆಲುವಿನ ಹಸಿವು ಸಹಆಟಗಾರರಲ್ಲಿ ಹೊಸ ಹುಮ್ಮಸ್ಸು ತುಂಬುತ್ತೆ.
ಯುವ ಆಟಗಾರರ ಪಾಲಿಗೆ ಸ್ಪೂರ್ತಿ..!
ಯುವ ಆಟಗಾರರ ಪಾಲಿಗೆ ವಿರಾಟ್ ಕೊಹ್ಲಿ ಒಬ್ಬ ಸ್ಪೂರ್ತಿಯ ಚಿಲುಮೆ. ತಂಡದಲ್ಲಿರುವ ಆಟಗಾರರನ್ನು ತಿದ್ದಿ ತೀಡುವ ಗುರುವಾಗಿ ವಿರಾಟ್, ಯುವ ಆಟಗಾರರಿಂದ ಅತ್ಯುತ್ತಮ ಆಟವನ್ನು ಹೊರತೆಗೆಯಬಲ್ಲ ಬೆಸ್ಟ್ ಮೋಟಿವೇಟರ್..
ಇದನ್ನೂ ಓದಿ:RCB ಟೀಮ್ ಖರೀದಿ ಮಾಡಲು ಫ್ಯಾನ್ಸ್ ಬಿಗ್ ಪ್ಲಾನ್.. ಒಬ್ಬ ಅಭಿಮಾನಿ ಎಷ್ಟು ದುಡ್ಡು ಕೊಡಬೇಕು?
ಫೀಲ್ಡಿಂಗ್ ವೇಳೆ ಸದಾ ಆಕ್ಟೀವ್ ಆಗಿರುವ ವಿರಾಟ್, ಅಗತ್ಯ ಸಲಹೆ ನೀಡುತ್ತಾ ತಂಡದ ಸಕ್ಸಸ್ನಲ್ಲಿ ಮಹತ್ವದ ಪಾತ್ರ ನಿರ್ವಹಿಸ್ತಾರೆ. ಬೌಲರ್ಗಳ ಬೆನ್ನಿಗೆ ನಿಲ್ಲುವ ಕ್ಯಾಪ್ಟನ್ ಕೊಹ್ಲಿ, ಅನ್ಫೀಲ್ಡ್ನಲ್ಲಿ ಮಾಡುವ ಸೆಲೆಬ್ರೇಷನ್ ಹೋರಾಟದ ಕಿಚ್ಚನ್ನು ಹೆಚ್ಚಿಸುತ್ತೆ. ಇನ್ಫ್ಯಾಕ್ಟ್.. ಮುಂದಿನ 3 ವರ್ಷದಲ್ಲಿ ಆರ್ಸಿಬಿ ಕಪ್ ಗೆಲುವು ನನಸು ಮಾಡಿಕೊಳ್ಳಬೇಕಾದ್ರೆ, ಇಂಥಹ ಅಗ್ರೆಸ್ಸಿವ್ ಆ್ಯಂಡ್ ಸಕ್ಸಸ್ ಫುಲ್ ಕ್ಯಾಪ್ಟನ್ ಬೇಕಿದೆ.
ವಿರಾಟ್ ಕೊಹ್ಲಿಗೆ 21 ಕೋಟಿ ಕೊಟ್ಟು ರಿಟೈನ್ ಮಾಡಿಕೊಂಡಿರೋದ್ರ ಹಿಂದಿನ ಸೀಕ್ರೆಟ್ ಕೂಡ ಇದೇ ಆಗಿದೆ. ಇದೇ ಕಾರಣಕ್ಕೆ ಮೆಗಾ ಹರಾಜಿನಲ್ಲಿ ಯಾರನ್ನು ಆರ್ಸಿಬಿ ಟಾರ್ಗೆಟ್ ಮಾಡಲಿಲ್ಲ. 2025ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಈ ಬಾರಿಯಾದ್ರೂ 17 ವರ್ಷಗಳ ಕಪ್ ಗೆಲ್ಲೋ ಕನಸು ಈಡೇರಿಸಲಿದೆಯಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ