336 ರನ್​ಗಳ ಭರ್ಜರಿ ಗೆಲುವು.. ಬೆನ್ನಲ್ಲೇ ಮೂವರು ಆಟಗಾರರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಕೊಹ್ಲಿ..!

author-image
Ganesh
Updated On
336 ರನ್​ಗಳ ಭರ್ಜರಿ ಗೆಲುವು.. ಬೆನ್ನಲ್ಲೇ ಮೂವರು ಆಟಗಾರರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಕೊಹ್ಲಿ..!
Advertisment
  • ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಸರಣಿ
  • ಎರಡನೇ ಟೆಸ್ಟ್ ಗೆದ್ದು ಬೀಗಿದ ಶುಬ್ಮನ್ ಗಿಲ್ ಪಡೆ
  • ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ

58 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಡ್ಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಅನ್ನು ಸೋಲಿಸಿದೆ. ಬೆನ್ನಲ್ಲೇ ಕಿಂಗ್ ವಿರಾಟ್ ಕೊಹ್ಲಿ ದೊಡ್ಡ ಪ್ರತಿಕ್ರಿಯೆ ನೀಡಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ಭಾರತದ ಗೆಲುವನ್ನು ವಿರಾಟ್ ‘ಅದ್ಭುತ’ ಎಂದು ಬಣ್ಣಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ. ತುಂಬಾ ದಿನಗಳ ನಂತರ ಟ್ವೀಟ್ ಮಾಡಿರುವ ವಿರಾಟ್​.. ಭಾರತದ ಗೆಲುವಿಗೆ ಮೂವರು ಆಟಗಾರರ ಹೆಸರನ್ನ ಹೇಳಿದ್ದಾರೆ. ಶುಭ್ಮನ್ ಗಿಲ್ ಬ್ಯಾಟಿಂಗ್ ಮತ್ತು ಮೈದಾನದಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಿದ್ದನ್ನು ಬರೆದುಕೊಂಡಿದ್ದಾರೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡಿದರು. ವಿಶೇಷವಾಗಿ ಸಿರಾಜ್ ಮತ್ತು ಆಕಾಶ್ ಚೆನ್ನಾಗಿ ಬೌಲಿಂಗ್ ಮಾಡಿದರು ಎಂದಿದ್ದಾರೆ. ಭಾರತದ ರಾಷ್ಟ್ರಧ್ವಜ ಹಾಗೂ ಚಪ್ಪಾಳೆ ತಟ್ಟುವ ಎಮೋಜಿಯನ್ನೂ ಕೊಹ್ಲಿ ಹಂಚಿಕೊಂಡಿದ್ದಾರೆ.

ಆರು ದಶಕಗಳ ನಂತರ ಭಾರತಕ್ಕೆ ಗೆಲುವು

ಎರಡನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ, 336 ರನ್​​ಗಳ ಗೆಲುವು ದಾಖಲಿಸಿದೆ. 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಸಮಬಲ ಮಾಡಿಕೊಂಡಿದೆ. 1967ರಿಂದಲೂ ಎಡ್ಜ್​ ಬಾಸ್ಟನ್​ನಲ್ಲಿ ಟೆಸ್ಟ್ ಗೆಲ್ಲದ ಟೀಮ್ ಇಂಡಿಯಾ, ಒಂದು ಡ್ರಾ ಬಿಟ್ರೆ, ಬರೋಬ್ಬರಿ 7 ಪಂದ್ಯಗಳನ್ನು ಸೋತಿತ್ತು.

ಇದೀಗ ಇದೇ ಎಡ್ಜ್​ಬಾಸ್ಟನ್​ನಲ್ಲಿ ಗೆದ್ದು ಬೀಗಿದ ಶುಭ್​ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ, 58 ವರ್ಷಗಳ ಬಳಿಕ ಎಡ್ಜಬಾಸ್ಟನ್​ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು. ಒಟ್ನಲ್ಲಿ, ಲೀಡ್ಸ್​ ಟೆಸ್ಟ್ ಸೋತ ಬೆನ್ನಲ್ಲೇ ಟೀಕಿಸಿದವರಿಗೆ ಪರ್ಫಮೆನ್ಸ್​ನಿಂದಲೇ ಉತ್ತರಿಸಿರುವ ಟೀಮ್ ಇಂಡಿಯಾ, ಇದೇ ಗೆಲುವಿನ ನಾಗಲೋಟ ಮುಂದುವರಿಸಲಿ, ಸರಣಿ ಗೆಲುವಿನತ್ತ ಹೆಜ್ಜೆ ಹಾಕಲಿ ಅನ್ನೋದೆ ಭಾರತೀಯರ ಆಶಯ.

ಇದನ್ನೂ ಓದಿ:336 ರನ್​ಗಳ ಭರ್ಜರಿ ಗೆಲುವು.. 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಟೀಂ ಇಂಡಿಯಾ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment