ಕಿಂಗ್ ಕೊಹ್ಲಿ ಬ್ರ್ಯಾಂಡ್​ ವ್ಯಾಲ್ಯೂ ಮತ್ತಷ್ಟು ದುಬಾರಿ.. ಈ ಏರಿಕೆ ಹಿಂದಿದೆ ಸ್ಪೆಷಲ್ ರೀಸನ್​​!

author-image
Bheemappa
ಇನ್​ಸ್ಟಾದಲ್ಲೂ ಕೊಹ್ಲಿನೇ ಕಿಂಗ್​.. ಒಂದು ಪೋಸ್ಟ್​ಗೆ ಎಷ್ಟು ಕೋಟಿ ಹಣ ಪಡೀತಾರೆ RCB ಸ್ಟಾರ್!
Advertisment
  • ಸ್ಟಾರ್​ ಕ್ರಿಕೆಟರ್​ ಮುಂದೆ ರೋನಾಲ್ಡೋ, ಜಸ್ಟಿನ್‌ ಬೀಬರ್‌ ಏನಲ್ಲ!
  • ​ಕೊಹ್ಲಿಯ ಒಂದು ಪೋಸ್ಟ್​ಗೆ ಎಷ್ಟು ಮಿಲಿಯನ್​ ಲೈಕ್ಸ್​ ಬರುತ್ತವೆ?
  • ಏಕದಿನ ಮತ್ತು ಐಪಿಎಲ್​ನಲ್ಲಿ ಮಾತ್ರ ಆಡಲಿರೋ ವಿರಾಟ್​ ಕೊಹ್ಲಿ

ಮೊದಲು ಟಿ20 ಇಂಟರ್​ನ್ಯಾಷನಲ್​​, ಇದೀಗ ಟೆಸ್ಟ್​ ಕ್ರಿಕೆಟ್​​. ದಿಢೀರ್​​ ನಿವೃತ್ತಿ ಹೇಳಿ ಶಾಕ್​ ಕೊಟ್ಟ ವಿರಾಟ್​​ ಕೊಹ್ಲಿ ಫೀಲ್ಡ್​ನಿಂದ ನಿಧಾನವಾಗಿ ದೂರವಾಗ್ತಿದ್ದಾರೆ. ಇದರ ಬೆನ್ನಲ್ಲೇ ಮಾರ್ಕೆಟ್​ನಲ್ಲಿ ಕೊಹ್ಲಿ ಬ್ರ್ಯಾಂಡ್​​ವ್ಯಾಲ್ಯೂ ಬಗ್ಗೆ ಚರ್ಚೆಯಾಗಿತ್ತು. ಮುಂದೆ ಕೊಹ್ಲಿಯ ಬ್ರ್ಯಾಂಡ್​ ಬಿದ್ದೋಗುತ್ತೆ ಅನ್ನೋದು ಬಹುತೇಕರ ಅಭಿಪ್ರಾಯವೂ ಅಗಿತ್ತು. ಆದ್ರೆ, ಅಸಲಿಗೆ ಆಗೋದೆ ಬೇರೆ. ಈ ಕೊಹ್ಲಿ ಅನ್ನೋದು ಬಿದ್ದೋಗೋ ಬ್ರ್ಯಾಂಡ್​ ಏನ್ರಿ?.

ವಿರಾಟ್ ಕೊಹ್ಲಿ ಮಾಡ್ರನ್ ಕ್ರಿಕೆಟ್​ನ ದೊರೆ ಮಾತ್ರವಲ್ಲ, ಆಫ್​ ದ ಫೀಲ್ಡ್​​ ಜಾಹೀರಾತು ಸಾಮ್ರಾಜ್ಯವನ್ನ ಆಳಿದ ಸಾಮ್ರಾಟ. ವಿಶ್ವದ ಒನ್​ ಆಫ್​ ದ ರಿಚೆಸ್ಟ್​​ ಅಥ್ಲೀಟ್. ಕಿಂಗ್ ಕೊಹ್ಲಿ ಕ್ರಿಕೆಟ್​ನಿಂದ ಎಷ್ಟು ದುಡ್ಡು ಗಳಿಸ್ತಾರೋ, ಅದಕ್ಕಿಂತ ಎರಡು ಪಟ್ಟು ದುಡ್ಡನ್ನ ಆಫ್​ ದಿ ಫೀಲ್ಡ್​​ನಲ್ಲಿ ಗಳಿಸ್ತಾರೆ. ಸೋಷಿಯಲ್ ಮೀಡಿಯಾದಿಂದಲೇ ನೂರಾರು ಕೋಟಿ ರೂಪಾಯಿ ವಿರಾಟ್ ಖಜಾನೆ ಸೇರುತ್ತೆ. ಅದ್ರಲ್ಲೂ ಇನ್​​ಸ್ಟಾಗ್ರಾಮ್​ ಲೋಕಕ್ಕಂತೂ ಕೊಹ್ಲಿಯೇ ಅಧಿಪತಿ.

publive-image

2024ರಲ್ಲಿ ಟಿ20 ಇಂಟರ್​​ನ್ಯಾಷನಲ್​, ಈ ವರ್ಷ ಟೆಸ್ಟ್​​ ಕ್ರಿಕೆಟ್​​ಗೆ ವಿರಾಟ್​​ ಕೊಹ್ಲಿ ಗುಡ್​ ಬೈ ಹೇಳಿದ್ದಾರೆ. ಇನ್ಮುಂದೆ ಕೊಹ್ಲಿ ಆಟ ಏನಿದ್ರೂ ಏಕದಿನ, ಐಪಿಎಲ್​ಗೆ ಮಾತ್ರ ಸೀಮಿತ. ವರ್ಷದಲ್ಲಿ ಕೆಲವೇ ಕೆಲವು ದಿನ ಮಾತ್ರ ಗ್ರೌಂಡ್​​ನಲ್ಲಿ ವಿರಾಟ್​​ ಕೊಹ್ಲಿಯ ದರ್ಶನವಾಗಲಿದೆ. ಹೀಗಾಗಿ ವಿರಾಟ್​ ಕೊಹ್ಲಿಯ ಬ್ರ್ಯಾಂಡ್​ ವ್ಯಾಲ್ಯೂ ಬಿದ್ದೋಗುತ್ತೆ ಅನ್ನೋ ಚರ್ಚೆ ನಡೆದಿತ್ತು. ಆದ್ರೆ, ಅಸಲಿಗೆ ಆಗಿರೋದೆ ಬೇರೆ. ಕುಸಿದು ಹೋಗುತ್ತೆ ಅಂದುಕೊಂಡಿದ್ದ ಬ್ರ್ಯಾಂಡ್​ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ.

1 ಇನ್ಸ್​​​ಸ್ಟಾ ಪೋಸ್ಟ್​ ಬೆಲೆ 12ರಿಂದ 14 ಕೋಟಿಗೆ ಏರಿಕೆ.!

ಇನ್ಸ್​​​ಸ್ಟಾಗ್ರಾಂನಲ್ಲಿ ಕೊಹ್ಲಿ ಮಾಡೋ ಒಂದು ಪೋಸ್ಟ್​ನ ಬೆಲೆ ಬರೋಬ್ಬರಿ 14 ಕೋಟಿ. 2023ರಲ್ಲಿ ಕೊಹ್ಲಿ ಒಂದು ಕಮರ್ಷಿಯಲ್​ ಪೋಸ್ಟ್​ ಮಾಡೋಕೆ 11 ರಿಂದ 12 ಕೋಟಿ ತೆಗೆದುಕೊಳ್ತಾ ಇದ್ದರು. 2025ರಲ್ಲಿ ಈ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ಈಗ ಒಂದು ಕಮರ್ಷಿಯಲ್​ ಪೋಸ್ಟ್​​ ಮಾಡೋಕೆ ಬರೋಬ್ಬರಿ 14 ಕೋಟಿ ಚಾರ್ಜ್​ ಮಾಡ್ತಾರಂತೆ. 2023ರಲ್ಲಿ ಕೊಹ್ಲಿ ಆಲ್​ ​ಫಾರ್ಮೆಟ್​ ಪ್ಲೇಯರ್​​. 2025ರಲ್ಲಿ ಕೊಹ್ಲಿ ಕೇವಲ ಐಪಿಎಲ್​​ ಮತ್ತು ಏಕದಿನಕ್ಕೆ ಮಾತ್ರ ಸೀಮಿತವಾಗಿರೋ ಆಟಗಾರ.

4 ಪೋಸ್ಟ್​​, 20 ಮಿಲಿಯನ್​ ಲೈಕ್ಸ್​, 2 ಕೋಟಿ ಏರಿಕೆ​​.!

ವಿರಾಟ್​​ ಕೊಹ್ಲಿಯ ಇನ್ಸ್​​ಸ್ಟಾ ಗ್ರಾಂ ಪೋಸ್ಟ್​​ ಬೆಲೆ ಏರಿಕೆ ಹಿಂದೆ ಒಂದು ಸ್ಪೆಷಲ್​ ಕತೆಯೇ ಇದೆ. ನೀವು ನಂಬ್ತಿರೋ ಇಲ್ವೋ ಗೊತ್ತಿಲ್ಲ. ಈ 2 ಕೋಟಿ ಬೆಲೆ ಏರಿಕೆಗೆ 4 ಪೋಸ್ಟ್​ಗಳೇ ಮುಖ್ಯ ಕಾರಣವಾಗಿವೆ. ಕೊಹ್ಲಿ ಪೋಸ್ಟ್​ಗೆ ಬಂದಿರೋ 20 ಮಿಲಿಯನ್​​ ಲೈಕ್ಸ್​​​ ಎಲ್ಲರನ್ನ ನಿಬ್ಬೆರಗಾಗಿಸಿವೆ. 2024 ಟಿ20 ವಿಶ್ವಕಪ್​ ಗೆದ್ದ ಬಳಿಕ ವಿರಾಟ್​ ಕೊಹ್ಲಿ ಒಂದು ಪೋಸ್ಟ್​ ಮಾಡಿದ್ರು. ಆ ಪೋಸ್ಟ್​ಗೆ ಬರೋಬ್ಬರಿ 22 ಮಿಲಿಯನ್​ಗೂ ಹೆಚ್ಚು​ ಲೈಕ್ಸ್​ ಈವರೆಗೆ ಬಂದಿವೆ.

ಮೇ 1 ಪ್ರೀತಿಯ ಪತ್ನಿ ಅನುಷ್ಕಾ ಶರ್ಮಾ ಹುಟ್ಟುಹಬ್ಬಕ್ಕೆ ಕೊಹ್ಲಿ ಒಂದು ಪೋಸ್ಟ್​ ಹಾಕಿದ್ರು. ಆ ಪೋಸ್ಟ್​ಗೂ​​ ಕೂಡ 20 ಮಿಲಿಯನ್​​ಗೂ ಅಧಿಕ ಲೈಕ್ಸ್​ ಬಂದಿವೆ. ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ ಪೋಸ್ಟ್​​ ಹಾಗೂ ಆರ್​​ಸಿಬಿ ತಂಡ ಐಪಿಎಲ್​ ಕಪ್​ ಗೆದ್ದ ಬಳಿಕ ಹಾಕಿದ ಪೋಸ್ಟ್​ಗಳ ಲೈಕ್ಸ್​ ಕೂಡ 20 ಮಿಲಿಯನ್​ ಗಡಿ ದಾಟಿದೆ. ಮೇ ತಿಂಗಳೊಂದರಲ್ಲೇ ಕೊಹ್ಲಿ 3 ಪೋಸ್ಟ್​ಗಳು 20 ಮಿಲಿಯನ್​​ಗೂ ಅಧಿಕ ಲೈಕ್ಸ್​​ ಪಡೆದಿರೋದು ಕೊಹ್ಲಿ ಜನಪ್ರೀಯತೆಯನ್ನ ಸಾರಿ ಸಾರಿ ಹೇಳ್ತಿದೆ. ಇದೇ ಕಾರಣಕ್ಕೆ ನೋಡಿ ಕಮರ್ಷಿಯಲ್​​ ಪೋಸ್ಟ್​​ಗಳ ಬೆಲೆ ಏರಿಕೆಯಾಗಿರೋದು.

ಇದನ್ನೂ ಓದಿWTC ಟ್ರೋಫಿ ಗೆಲ್ಲಿಸಿಕೊಟ್ಟ ಆಫ್ರಿಕಾ ಕ್ಯಾಪ್ಟನ್​ಗೆ ಬಿಗ್ ಶಾಕ್​.. ಟೆಸ್ಟ್​ ಸರಣಿಯಿಂದ ಹೊರಕ್ಕೆ

publive-image

ಕೊಹ್ಲಿ ಮುಂದೆ ರೋನಾಲ್ಡೋ, ಜಸ್ಟಿನ್‌ ಬೀಬರ್‌ ಕೂಡ ಏನಿಲ್ಲ.!

ಕೊಹ್ಲಿ ಜನಪ್ರೀಯತೆ ಎಷ್ಟಿದೆ ಅನ್ನೋದಕ್ಕೆ ಇದೊಂದು ಬೆಸ್ಟ್​ ಎಕ್ಸಾಂಪಲ್​. ಫುಟ್ಬಾಲ್​ ದಂತಕತೆ ಕ್ರಿಸ್ಟಿಯಾನೋ ರೋನಾಲ್ಡೋ, ಪಾಪ್​ ಗಾಯಕ ಜಸ್ಟೀನ್​ ಬೀಬರ್​​ಗೆ ಇಡೀ ವಿಶ್ವದಲ್ಲಿ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಆದ್ರೆ, ಇವರಿಬ್ಬರ ಫ್ಯಾನ್​​ ಬೇಸ್​​ಗಿಂತ ಕೊಹ್ಲಿಯ ಅಭಿಮಾನಿಗಳ ಬಳಗವೇ ದೊಡ್ಡದಿದೆ ಅನ್ನೋದು ಇದೀಗ ಮತ್ತೊಮ್ಮೆ ಪ್ರೂವ್​ ಆಗಿದೆ. 2024ರ ಬಳಿಕ ಕೊಹ್ಲಿ ಹಾಕಿದ 4 ಪೋಸ್ಟ್​​ಗಳು 20 ಮಿಲಿಯನ್​ಗೂ ಅಧಿಕ ಲೈಕ್ಸ್​ ಪಡೆದಿವೆ. ಇದೀಗ ರೋನಾಲ್ಡೋ ಹಾಕಿರೋ 2 ಪೋಸ್ಟ್​​ಗಳ ಲೈಕ್ಸ್​ ಮಾತ್ರ 20 ಮಿಲಿಯನ್​, ಜಸ್ಟಿನ್​ ಬೀಬರ್​​ ಹಾಕಿರೋ ಹಲವು ಪೋಸ್ಟ್​ಗಳ ಪೈಕಿ ​​1 ಪೋಸ್ಟ್​ ಮಾತ್ರ 20 ಮಿಲಿಯನ್​​ ಗಡಿ ಕ್ರಾಸ್​ ಮಾಡಿದೆ.

ಅದಕ್ಕೆ ಮೊದಲೇ ಹೇಳಿದ್ದು ವಿರಾಟ್​ ಕೊಹ್ಲಿ ಅನ್ನೋದು ಹೆಸರಿಗಿರೋ ಶಕ್ತಿ ಬೇರೆನೆ. ವಿರಾಟ್​ ಕೊಹ್ಲಿ ಅನ್ನೋ ಹೆಸರೇ ಒಂದು ಬ್ರ್ಯಾಂಡ್​​. ಎಲ್ಲಾ ಫಾರ್ಮೆಟ್​ ಆಡಲಿ ಅಥವಾ ಕೆಲವೇ ಫಾರ್ಮೆಟ್​​ ಆಡಲಿ ಕೊಹ್ಲಿ ಕೊಹ್ಲಿನೇ. ಈ ಇನ್ಸ್​​ಸ್ಟಾಗ್ರಾಂ ಇನ್​ಕಮ್​​ನ ಕಥೆ ಕೊಹ್ಲಿಯ ಗತ್ತನ್ನ ಮತ್ತೊಮ್ಮೆ ಜಗಜ್ಜಾಹೀರು ಮಾಡಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment