/newsfirstlive-kannada/media/post_attachments/wp-content/uploads/2025/04/VIRAT_KOHLI-1.jpg)
18ನೇ ಐಪಿಎಲ್ನ ಹೈವೋಲ್ಟೆಜ್ ಕದನ ಬಂದೇ ಬಿಡ್ತು. ಮುಂಬೈ ಇಂಡಿಯನ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಗೆ ಕೌಂಟ್ಡೌನ್ ಶುರುವಾಗಿದೆ. ಇಂದಿನ ಕದನವನ್ನ ಕೊಹ್ಲಿ ವರ್ಸಸ್ ಮುಂಬೈ ಇಂಡಿಯನ್ಸ್ ಬ್ಯಾಟಲ್ ಅಂತ ಕರೆಯೋದೆ ಬೆಸ್ಟ್. ಇಡೀ ಮುಂಬೈ ತಂಡಕ್ಕಿರೋ ಟೆನ್ಶನ್ನೇ ಈ ವಿರಾಟ್ ಕೊಹ್ಲಿ. ಪ್ರತಿ ಬಾರಿ ಮುಂಬೈ ಎದುರು ಘರ್ಜಿಸಿರೋ ಕೊಹ್ಲಿ, ಇಂದೂ ವಾಂಖೆಡೆಯಲ್ಲಿ ಟೆರರ್ ಇನ್ನಿಂಗ್ಸ್ ಕಟ್ಟಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಸತತ 2 ಗೆಲುವು ಕಂಡು ಒಂದು ಸೋಲುಂಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹುಡುಗ್ರು 4ನೇ ಪಂದ್ಯಕ್ಕೆ ಸಜ್ಜಾಗಿ ನಿಂತಿದ್ದಾರೆ. ಮುಂಬೈ ಇಂಡಿಯನ್ಸ್ ಎದುರು ಗೆಲುವಿನ ಹಳಿಗೆ ಮರಳೋ ಲೆಕ್ಕಾಚಾರ ಆರ್ಸಿಬಿಯದ್ದಾಗಿದೆ. ಅತ್ತ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಎದುರು ಪುಟಿದೇಳುವ ಉತ್ಸಾಹದಲ್ಲಿದೆ. ಗೆಲುವಿನ ಕನವರಿಕೆಯಲ್ಲಿರೋ ಮುಂಬೈ ಕ್ಯಾಂಪ್ನಲ್ಲಿ ಕಿಂಗ್ ಕೊಹ್ಲಿಯ ಚರ್ಚೆ ಜೋರಾಗಿದೆ.
ಮುಂಬೈ ಬೇಟೆಗೆ ವಿರಾಟ್ ಭರ್ಜರಿ ತಾಲೀಮು..!
ಕೊಲ್ಕತ್ತಾ ಎದುರು ಸಿಡಿಲಬ್ಬರದ ಆಟವಾಡಿದ್ದ ವಿರಾಟ್, ನಂತರದ ಎರಡು ಪಂದ್ಯಗಳಿಂದ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇದೀಗ ಹಸಿದ ಹುಲಿಯಂತಾಗಿರುವ ವಿರಾಟ್, ಮುಂಬೈ ಎದುರು ಘರ್ಜಿಸಲು ಸನದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸಿ ಬೆವರು ಹರಿಸಿದ್ದಾರೆ. ಅಭ್ಯಾಸದ ಕಣದಿಂದಲೇ ಎದುರಾಳಿ ಮುಂಬೈಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅಂಬಾನಿ ಬ್ರಿಗೇಡ್ಗೆ ಕಾದಿದೆ ಮಾರಿಹಬ್ಬ..!
ಇವತ್ತು ಮ್ಯಾಚ್ ನಡೀತಿರೋದು ಮುಂಬೈನ ವಾಂಖೆಡೆಯಲ್ಲಿ. ಹೋಮ್ಗ್ರೌಂಡ್ನಲ್ಲಿ ಪಂದ್ಯ ನಡೀತಾ ಇದ್ರೂ ಅಂಬಾನಿ ಬ್ರಿಗೆಡ್ಗೆ ಟೆನ್ಶನ್ ಮಾತ್ರ ತಪ್ಪಿಲ್ಲ. ವಿರಾಟ್ ಕೊಹ್ಲಿಯ ಭಯ ಮುಂಬೈ ಕ್ಯಾಂಪ್ನ ಕಾಡ್ತಿದೆ. ಮುಂಬೈನ ಭದ್ರಕೋಟೆ ವಾಂಖೆಡೆಯನ್ನ ರನ್ ಮಷಿನ್ ಕೊಹ್ಲಿ ಛಿದ್ರ ಛಿದ್ರ ಮಾಡಿರೋ ಇತಿಹಾಸ ಹಾರ್ದಿಕ್ ಪಡೆಯ ಟೆನ್ಶನ್ ಹೆಚ್ಚಿದೆ. ಆ ಟೆರರ್ ಇನ್ನಿಂಗ್ಸ್ಗಳು, ಅತ್ಯದ್ಭುತ ಟ್ರ್ಯಾಕ್ ರೆಕಾರ್ಡ್ ಮುಂಬೈ ಬೌಲರ್ಗಳ ಭಯ ಹೆಚ್ಚಿಸಿದೆ.
ಇದನ್ನೂ ಓದಿ:ಸೋತರೂ ಫ್ಲೈಯಿಂಗ್ ಕಿಸ್.. ಕ್ಯಾಪ್ಟನ್ ಶ್ರೇಯಸ್ಗೆ ಪ್ರೀತಿಯ ಅಪ್ಪುಗೆ ಕೊಟ್ಟ ಬಾಲಿವುಡ್ ಬ್ಯೂಟಿ! -video
ಮುಂಬೈ ಎದುರು ವಾಂಖೆಡೆಯಲ್ಲಿ ಕೊಹ್ಲಿ
ಕೊಹ್ಲಿ ವಾಂಖೆಡೆ ಮೈದಾನದಲ್ಲಿ ಮುಂಬೈ ಎದುರು 18 ಪಂದ್ಯಗಳನ್ನ ಆಡಿದ್ದು, 571 ರನ್ ಗಳಿಸಿದ್ದಾರೆ. 5 ಅರ್ಧಶತಕ ದಾಖಲಿಸಿರುವ ಕೊಹ್ಲಿ, 136.01ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದೇ ಟ್ರ್ಯಾಕ್ ರೆಕಾರ್ಡ್ ಮುಂಬೈ ಇಂಡಿಯನ್ಸ್ ತಂಡದ ನಿದ್ದೆಗೆಡಿಸಿದೆ.
ಹಸಿದ ಹುಲಿಗೆ ಈಗ ರನ್ ಬೇಟೆಯಾಡುವ ತವಕ..!
ಈ ಸೀಸನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೊಲ್ಕತ್ತಾ ಎದುರು ಅಬ್ಬರಿಸಿದ್ದ ವಿರಾಟ್, ನಂತರದ ಚೆನ್ನೈ ಹಾಗೂ ಗುಜರಾತ್ ಎದುರು ಬಿಗ್ ಇನ್ನಿಂಗ್ಸ್ ಕಟ್ಟವಲ್ಲಿ ವಿಫಲರಾಗಿದ್ದಾರೆ. ಇದು ಕೊಹ್ಲಿಯಲ್ಲಿ ರನ್ ಗಳಿಕೆಯ ಹಸಿವನ್ನ ಹೆಚ್ಚಿಸಿದೆ. ಹೀಗಾಗಿ ನೆಟ್ಸ್ನಲ್ಲಿ ಸುದೀರ್ಘ ಕಾಲ ಅಭ್ಯಾಸ ನಡೆಸಿದ್ದಾರೆ. ಬಿಗ್ಸ್ಕೋರ್ ಕಲೆ ಹಾಕದಿದ್ರೂ ಕೊಹ್ಲಿ ಸಾಲಿಡ್ ಟಚ್ನಲ್ಲಂತೂ ಇದ್ದಾರೆ. ಹೀಗಾಗಿ ಇಂದು ಮುಂಬೈ ಎದುರು ಬ್ಲಾಕ್ಬಸ್ಟರ್ ಇನ್ನಿಂಗ್ಸ್ ಕಟ್ತಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ