newsfirstkannada.com

ಕಿಂಗ್ ಕೊಹ್ಲಿ ಭಯದಲ್ಲಿ ಯೆಲ್ಲೋ ಆರ್ಮಿ.. ಸೆನ್ಷೆಷನಲ್ ರೆಕಾಡ್ಸ್​​, ಚೆನ್ನೈಗೆ ಕಾದಿದೆ ಮಾರಿಹಬ್ಬ..!

Share :

Published March 22, 2024 at 1:28pm

  ಇಂದಿನಿಂದ 17ನೇ ಐಪಿಎಲ್​ ಮಹಾಜಾತ್ರೆ

  ಚೆನ್ನೈ-ಆರ್​​ಸಿಬಿ ಬ್ಲಾಕ್​ಬಸ್ಟರ್​ ಪಂದ್ಯಕ್ಕೆ ಕಾತರ

  ಬದ್ಧವೈರಿ ಚೆನ್ನೈ ಬೇಟೆಗೆ ರಣಬೇಟೆಗಾರ ಸನ್ನದ್ಧ

ಐಪಿಎಲ್​ ಅಖಾಡದಲ್ಲಿ ಸೌತ್ ಇಂಡಿಯನ್​ ಡರ್ಬಿಗೆ ಕೌಂಟ್​ಡೌನ್​ ಶುರುವಾಗಿದೆ. ಆನ್​​ಪೇಪರ್​​ ಸ್ಟ್ರಾಂಗ್​ ಅನ್ನಿಸಿದ ಚೆನ್ನೈಗೆ ಆರ್​ಸಿಬಿಯ ಮಾನ್​​ಸ್ಟರ್​ ಭಯ ಕಾಡ್ತಿದೆ. ಚೆಪಾಕ್​​​​​​​​​​​​​​​​​ನಲ್ಲಿ ಈ ಟೆರರ್ ಬ್ಯಾಟ್ಸ್​​​ಮನ್​​​ನನ್ನ ಕಟ್ಟಿಹಾಕೋದೇ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ. ಇಷ್ಟು ವರ್ಷ ಈತನ ವೀರಾವೇಶಕ್ಕೆ ಚೆನ್ನೈ ಕಂಗೆಟ್ಟಿದೆ. ಈ ಬಾರಿಯೂ ಅಂತಹದೇ ಸುನಾಮಿ ಎಬ್ಬಿಸಲು ರಣಬೇಟೆಗಾರ ಸಜ್ಜಾಗಿದ್ದಾನೆ.

17ನೇ ಐಪಿಎಲ್​​​​ನ ಬ್ಲಾಕ್​​​​ಬಸ್ಟರ್​​​​ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ಬದ್ಧವೈರಿ ಆರ್​​ಸಿಬಿ ಹಾಗೂ ಸಿಎಸ್​ಕೆ ತಂಡಗಳು ತೊಡೆ ತಟ್ಟಲಿವೆ. ಯೆಲ್ಲೋ ಆರ್ಮಿ ಹಾಗೂ ರೆಡ್ ಆರ್ಮಿ ಯಾವಾಗ್ಲೇ ಮುಖಾಮುಖಿಯಾಗ್ಲಿ, ACTION, DRAMA ಹಾಗೂ ಸಸ್ಪೆನ್ಸ್​​​​ಗೆ ಬರವಿಲ್ಲ. ಇಂತಹ ಹೈ ಥ್ರಿಲ್ಲಿಂಗ್​ ಗೇಮ್​​ಗಾಗಿ ಎಲ್ಲರೂ ಸಿಕ್ಕಾಪಟ್ಟೆ ಎಕ್ಸೈಟ್​​ ಆಗಿದ್ದಾರೆ. ಹಾಲಿ ಚಾಂಪಿಯನ್​ ಸಿಎಸ್​ಕೆ ಕಿಂಗ್ ಕೊಹ್ಲಿ ಭಯದಲ್ಲಿ ಕಣಕ್ಕಿಳಿಯುತ್ತಿದೆ.

ಚೆಪಾಕ್​ನಲ್ಲಿ ನಡಿತಿರೋದು ಆರ್​ಸಿಬಿ ವರ್ಸಸ್​​ ಸಿಎಸ್​ಕೆ ಕಾಳಗವಲ್ಲ. ಬದಲಿಗೆ ಕಿಂಗ್ ಕೊಹ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಸಮರ ಎಂದೇ ಬಿಂಬಿತವಾಗಿದೆ. ಬರೋಬ್ಬರಿ 2 ತಿಂಗಳ ಬಳಿಕ ಸೆಂಚುರಿ ಸಾಮ್ರಾಟ ಅಂಗಳಕ್ಕಿಳಿಯುತ್ತಿದ್ದು, ಎಲ್ಲರ ಚಿತ್ತ ರಿಯಲ್ ವಾರಿಯರ್ ಕೊಹ್ಲಿ ಮೇಲೆ ನೆಟ್ಟಿದೆ. ಹೇಳಿ ಕೇಳಿ ಇಂದು ಚೆನ್ನೈ ಎದುರಾಳಿ. ಪ್ರತಿ ಬಾರಿ ಎದುರಾದಾಗಲೆ ಲ್ಲಾ ಯೆಲ್ಲೋ ಆರ್ಮಿ ಮೇಲೆ ದಂಡೆತ್ತಿ ಹೋಗಿದ್ದಾರೆ.
ಇಂದು ಕೂಡ ಅದೇ ಫೈರಿ ಆಟವನ್ನಾಡಲು ವಿರಾಟ್​ ಕಾತುರರಾಗಿದ್ದಾರೆ. ಕಿಂಗ್ ಕೊಹ್ಲಿ ದರ್ಬಾರ್​ಗೆ ಬ್ರೇಕ್​​​ ಹಾಕಲು ಕ್ಯಾಪ್ಟನ್ ಚೆನ್ನೈಗೆ ಸಾಧ್ಯವೇ ಇಲ್ಲ. ಯಾಕಂದ್ರೆ ಪಂದ್ಯ ನಡೆಯುತ್ತಿರುವ ಚೆಪಾಕ್​ ಮೈದಾನದಲ್ಲಿ ವಿರಾಟ್​ ಸೆನ್ಷೆಷನಲ್​ ರೆಕಾಡ್ಸ್​ ಹೊಂದಿದ್ದು, ಯೆಲ್ಲೋ ಆರ್ಮಿಗೆ ಪುಕ ಪುಕ ಶುರುವಾಗಿದೆ.

ಚೆಪಾಕ್​ ಮೈದಾನದಲ್ಲಿ ಕೊಹ್ಲಿ
ಚೆಪಾಕ್​ ಮೈದಾನದಲ್ಲಿ ಸಿಎಸ್​ಕೆಗೆ ಚಳ್ಳೆ ಹಣ್ಣು ತಿನ್ನಿಸಿರುವ ಕಿಂಗ್ ಕೊಹ್ಲಿ 12 ಪಂದ್ಯವಾಡಿ 362 ರನ್​ ಕಲೆ ಹಾಕಿದ್ದಾರೆ. 111.38 ಬ್ಯಾಟಿಂಗ್ ಸ್ಟ್ರೈಕ್​ರೇಟ್​​ ಹೊಂದಿದ್ದು, 2 ಹಾಫ್​​ಸೆಂಚುರಿ ಬಾರಿಸಿದ್ದಾರೆ. ಬರೀ ಚೆಪಾಕ್ ಸ್ಟೇಡಿಯಂನಲ್ಲಿ ಮಾತ್ರ ವಿರಾಟ್​ ವಿರಾಜಿಸಿಲ್ಲ. ಐಪಿಎಲ್ ಟೂರ್ನಿಯಲ್ಲಿ ಸಿಎಸ್​ಕೆ ವಿರುದ್ಧ ಆಡಿದ ಪಂದ್ಯಗಳಲ್ಲಿ ಕೊಹ್ಲಿಯ ರೆಕಾರ್ಡ್ಸ್ ಅದ್ಭುತವಾಗಿದೆ. ​ರಾಶಿ ಗಟ್ಟಲೇ ರನ್ ಕಲೆಹಾಕಿ, ಸಿಎಸ್​ಕೆ ಮೈ ಚಳಿ ಬಿಡಿಸಿದ್ದಾರೆ.

ಸಿಎಸ್​ಕೆ ವಿರುದ್ಧ ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ ಸಿಎಸ್​ಕೆ ವಿರುದ್ಧ ಇಲ್ಲಿತನಕ ಒಟ್ಟು 31 ಪಂದ್ಯಗಳನ್ನ ಆಡಿದ್ದಾರೆ. 125.47ರ ಸ್ಟ್ರೈಕ್​ರೇಟ್​ನಲ್ಲಿ ಬರೋಬ್ಬರಿ 985 ರನ್ ಕೊಳ್ಳೆ ಹೊಡೆದಿದ್ದಾರೆ. 9 ಅರ್ಧಶತಕ ಮೂಡಿಬಂದಿದ್ದು, 90 ಬೆಸ್ಟ್​ ಸ್ಕೋರ್ ಆಗಿದೆ. ವಿರಾಟ್​​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಚೆಪಾಕ್​​ನಲ್ಲಿ ಹಸಿದ ಹೆಬ್ಬುಲಿಯನ್ನ ಕಟ್ಟಿಹಾಕೋದು ನಿಜಕ್ಕೂ ಕಷ್ಟ. ಹಾಗಾಗಿ ರನ್ ಮಾಸ್ಟರ್​​ ಬಲಿಷ್ಠ ಯೆಲ್ಲೋ ಆರ್ಮಿ ಕೋಟೆಯನ್ನ ತವರಿನಲ್ಲಿ ಉಡೀಸ್ ಮಾಡಿದ್ರೆ ಅಶ್ವರ್ಯ ಪಡುವಂತದ್ದೇನಿಲ್ಲ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಿಂಗ್ ಕೊಹ್ಲಿ ಭಯದಲ್ಲಿ ಯೆಲ್ಲೋ ಆರ್ಮಿ.. ಸೆನ್ಷೆಷನಲ್ ರೆಕಾಡ್ಸ್​​, ಚೆನ್ನೈಗೆ ಕಾದಿದೆ ಮಾರಿಹಬ್ಬ..!

https://newsfirstlive.com/wp-content/uploads/2024/03/KOHLI-4.jpg

Load More