/newsfirstlive-kannada/media/post_attachments/wp-content/uploads/2025/03/VIRAT_KOHLI_Retirement.jpg)
ಚಾಂಪಿಯನ್ಸ್ ಟ್ರೋಫಿ ಅಂತ್ಯದ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿ ಚರ್ಚೆ ಜೋರಾಗಿ ನಡೆದಿತ್ತು. ಇದೀಗ ನಿವೃತ್ತಿಯ ಬಗ್ಗೆ ವಿರಾಟ್ ಕೊಹ್ಲಿ ಒಂದು ಕ್ಲಾರಿಟಿ ನೀಡಿದ್ದಾರೆ. ಕೊಹ್ಲಿ ಕೊಟ್ಟ ಕ್ಲಾರಿಟಿ ಏನು?
‘ನಾನು ಯಾವುದೇ ಘೋಷಣೆ ಮಾಡ್ತಿಲ್ಲ’
‘ಉದ್ವೇಗಕ್ಕೆ ಒಳಗಾಗಬೇಡಿ. ನಾನು ಯಾವುದೇ ಘೋಷಣೆ ಮಾಡ್ತಿಲ್ಲ. ಸದ್ಯದ ಮಟ್ಟಿಗೆ ಎಲ್ಲವೂ ಚನ್ನಾಗಿದೆ. ನಾನು ಈ ಆಟವನ್ನ ಆಡೋದನ್ನ ಪ್ರೀತಿಸುತ್ತಿದ್ದೇನೆ’-ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಆಟಗಾರ
ಐಪಿಎಲ್ಗಾಗಿ ಬೆಂಗಳೂರಿಗೆ ಬಂದಿರೋ ವಿರಾಟ್ ಕೊಹ್ಲಿ ಆರ್ಸಿಬಿ ಇವೆಂಟ್ನಲ್ಲಿ ಭಾಗಿಯಾಗಿದ್ರು. ಇವೆಂಟ್ನಲ್ಲಿ ನಿವೃತ್ತಿ ಬಗ್ಗೆ ಹಬ್ಬಿರೋ ವಂದಂತಿಯನ್ನ ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಇದೇ ವೇಳೆ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ತೆರೆ ಮೆರೆಗೆ ಸರಿತೇನೆ ಅನ್ನೋದ್ರ ಬಗ್ಗೆ ಪರೋಕ್ಷ ಸುಳಿವನ್ನೂ ನೀಡಿದ್ದಾರೆ.
ಆಸಿಸ್ ಪ್ರವಾಸದಲ್ಲಿ ಕಾಣಿಸದಿರಬಹುದು!
ನಾನು ಮತ್ತೊಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಈ ಹಿಂದಿನ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ನನಗೆ ತೃಪ್ತಿ ಇದೆ. ಹೀಗಾಗಿ ನಾನು ಮತ್ತೆ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಸರಣಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2029ಕ್ಕೆ ಟೀಮ್ ಇಂಡಿಯಾ ಆಸಿಸ್ ಪ್ರವಾಸ
2024-25ರ ಆಸ್ಟ್ರೇಲಿಯಾ ಪ್ರವಾಸ ಮುಗಿಸಿರೋ ಟೀಮ್ ಇಂಡಿಯಾದ ಮುಂದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಬರೋಬ್ಬರಿ 4 ವರ್ಷಗಳ ಅಂತರವಿದೆ. 2026-27ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಭಾರತದಲ್ಲಿ ನಡೆಯಲಿದ್ದು, 2029ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿದೆ. ಈ ವೇಳೆಗೆ ವಿರಾಟ್ ವಯಸ್ಸು 40ರ ಗಡಿ ದಾಟಿರಲಿದೆ. ಹೀಗಾಗಿ ವಿರಾಟ್, ಮುಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡೋದು ಅನುಮಾನವೇ.
ನಿವೃತ್ತಿ ಮುನ್ನ ವಿರಾಟ್ ಕೊಹ್ಲಿಗಿದೆ 2 ಟಾರ್ಗೆಟ್..!
ವೃತ್ತಿ ಜೀವನದಲ್ಲಿ ಕೊಹ್ಲಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಜೊತೆಗೆ ಚಾಂಪಿಯನ್ಸ್ ಟ್ರೋಫಿ ಕಿರೀಟದ ಕನಸು ನನಸಾಗಿಸಿಕೊಂಡಿದ್ದಾರೆ. ಮುಂದೆ 2027ರಲ್ಲಿ ಎರಡು ಐಸಿಸಿ ಟೂರ್ನಿಗಳು ಎದುರಾಗಲಿವೆ. ಈ ಪೈಕಿ ಒಂದು ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್, ಮತ್ತೊಂದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್.
ಈ ಎರಡೂ ಟೂರ್ನಿಗಳನ್ನಾಡುವ ಟಾರ್ಗೆಟ್ ಹೊಂದಿರುವ ವಿರಾಟ್, ಪ್ರತಿಷ್ಟಿತ ಟ್ರೋಫಿಗಳನ್ನ ಗೆಲ್ಲುವ ಕನಸು ಹೊಂದಿದ್ದಾರೆ. ಈ ಟೂರ್ನಿಗಳ ಅಂತ್ಯದ ಬಳಿಕ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿಯೋ ಪ್ಲಾನ್ ರೂಪಿಸಿದ್ದಾರೆ. ಹೀಗಾಗಿಯೇ 2029ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾನು ಕಾಣಿಸಲ್ಲ ಎಂಬ ಮಾತನ್ನಾಡಿರೋದು.
ಇದನ್ನೂ ಓದಿ: ಕೊಹ್ಲಿ ಯಾಕೆ ಮತ್ತೆ ಕ್ಯಾಪ್ಟನ್ ಆಗಲಿಲ್ಲ -RCB ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹೇಳಿದ್ದೇನು..?
ನಿವೃತ್ತಿಗೆ ಪಕ್ಕ ಪ್ಲಾನ್ ರೂಪಿಸಿರೋ ಕೊಹ್ಲಿ
ಮಾಡ್ರನ್ ಡೇ ದಿಗ್ಗಜ ವಿರಾಟ್ ಕೊಹ್ಲಿ, ನಿವೃತ್ತಿಯ ಪಕ್ಕಾ ಪ್ಲಾನ್ ಮಾಡಿದ್ದಾರೆ. 2027ರ ವೇಳೆಗೆ ವಿರಾಟ್, ವಯಸ್ಸು 38ಕ್ಕೂ ಅಧಿಕವಾಗಿರುತ್ತೆ. 38ರ ಗಡಿ ದಾಟಿದ ಬಳಿಕ ಫಿಟ್ನೆಸ್ ಜೊತೆಗೆ ಫಾರ್ಮ್ ಉಳಿಸಿಕೊಳ್ಳುವುದು ನಿಜಕ್ಕೂ ಚಾಲೆಂಜ್. ಹೀಗಾಗಿಯೇ ಮುಂದಿನ 2 ವರ್ಷಗಳ ಕಾಲ ಆಡೋ ಮನಸ್ಸು ಮಾಡಿರೋ ವಿರಾಟ್, ಆ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳೋ ಪ್ಲಾನ್ ರೂಪಿಸಿದ್ದಾರೆ. ಈ ಹಾದಿಯಲ್ಲೂ ಸವಾಲುಗಳಿವೆ.
ಆಫ್ರಿಕಾ ಕಂಡೀಷನ್ಸ್ಗೆ ಬೇಕೆ ಬೇಕು ಕೊಹ್ಲಿ
2027ರ ವಿಶ್ವಕಪ್ ನಡೆಯೋ ಸೌತ್ ಆಫ್ರಿಕಾದಂತ ಟಫ್ ಕಂಡಿಷನ್ಸ್ನಲ್ಲಿ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಅಗತ್ಯತೆ ಹೆಚ್ಚಿದೆ. ಕೊಹ್ಲಿ ಅನುಭವ ಟೀಮ್ ಇಂಡಿಯಾಗೆ ನೆರವಾಗಲಿದೆ. ಕೊಹ್ಲಿ, 2027ರ ತನಕ ಟೀಮ್ ಇಂಡಿಯಾದಲ್ಲಿ ಉಳಿಯಬೇಕಂದ್ರೆ ಹಲವು ಸವಾಲುಗಳನ್ನ ಮೆಟ್ಟಿನಿಲ್ಲಬೇಕಿದೆ. ವಿರಾಟ್ ಕೊಹ್ಲಿಗೆ ಮೇನ್ ವಿಲನ್ ಫಿಟ್ನೆಸ್ ಅಲ್ಲ. ಫಾರ್ಮ್ ಹಾಗೂ ಯುವ ಆಟಗಾರರ ಪೈಪೋಟಿಯಾಗಿದೆ.
ಸ್ಥಾನಕ್ಕಿರೋ ಪೈಪೋಟಿಯ ನಡುವೆ ವಿರಾಟ್ ಕೊಹ್ಲಿ ಫಾರ್ಮ್ ಉಳಿಸಿಕೊಂಡರಷ್ಟೇ ಉಳಿಗಾಲ. ಇಲ್ಲ ಗೇಟ್ ಪಾಸ್ ಪಕ್ಕಾ.
2027ರ ಅಂತ್ಯದ ವೇಳೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿಯಲು ಈಗಾಗಲೇ ಪಕ್ಕಾ ಪ್ಲಾನ್ ರೂಪಿಸಿದ್ದಾರೆ. 2 ಮಹತ್ವದ ಟಾರ್ಗೆಟ್ಗಳನ್ನೂ ಮುಂದೆ ಇರಿಸಿಕೊಂಡಿದ್ದಾರೆ. ಕೊಹ್ಲಿ ಆ ಗುರಿ ತಲುಪಿ ಕನಸು ನನಸಾಗಿಸಿಕೊಳ್ತಾರಾ? ಇಲ್ವಾ? ಗೊತ್ತಿಲ್ಲ. ಆದ್ರೆ, ನಿವೃತ್ತಿಯಾಗೋದಂತೂ ಖಚಿತ.
ಇದನ್ನೂ ಓದಿ: RCB Unbox event: ಯಾರೆಲ್ಲ ಬರ್ತಿದ್ದಾರೆ? ಮನೆಯಲ್ಲೇ ಕೂತು ನೇರ ಪ್ರಸಾರ ವೀಕ್ಷಿಸಬಹುದು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್