newsfirstkannada.com

ಮತ್ತೆ ಬಿರುಗಾಳಿ ಎಬ್ಬಿಸಿದೆ ಕೊಹ್ಲಿ ನಿವೃತ್ತಿ ಸುದ್ದಿ.. ವಿರಾಟ್ ವಿದಾಯಕ್ಕೆ ಇದೆ 2 ಬಲವಾದ ಕಾರಣ..!

Share :

Published May 25, 2024 at 10:31am

    T20 ವಿಶ್ವಕಪ್​ ಬಳಿಕ ವಿರಾಟ್​ ವಿದಾಯ ಹೇಳೋದು ಪಕ್ಕಾನಾ?

    ಕ್ರಿಕೆಟ್ ಕರಿಯರ್​​ಗೆ ಫುಲ್​ ಸ್ಟಾಪ್​ ಇಡ್ತಾರಾ ವಿರಾಟ್ ಕೊಹ್ಲಿ?

    ಐಪಿಎಲ್​ನಲ್ಲಿ ಆರ್​​ಸಿಬಿ ಕಪ್​ ಗೆಲ್ಲಲಿಲ್ಲ, ಕೊಹ್ಲಿ ಸಾಲಿಡ್​ ಬ್ಯಾಟಿಂಗ್​

ಐಪಿಎಲ್​ ಸೀಸನ್​​ ಅಂತ್ಯದ ಬೆನ್ನಲ್ಲೇ ಕಿಂಗ್​ ಕೊಹ್ಲಿಯ ರಿಟೈರ್​​ಮೆಂಟ್​​​ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಮುಂಬರೋ ಟಿ20 ವಿಶ್ವಕಪ್​ ಅಂತ್ಯದ ಬೆನ್ನಲ್ಲೇ, ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿ ಹಲ್​​ಚಲ್​​ ಎಬ್ಬಿಸಿದೆ. ಇದು ನಿಜನಾ.? ಆಶ್ಚರ್ಯಭರಿತ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹುದು. 2 ಬಲವಾದ ಕಾರಣಗಳು ನಿವೃತ್ತಿಯ ಗಾಳಿಸುದ್ದಿಗೆ ಪುಷ್ಟಿ ನೀಡಿವೆ.

ಐಪಿಎಲ್​ನಲ್ಲಿ ಆರ್​​ಸಿಬಿ ಕಪ್​ ಗೆಲ್ಲಲಿಲ್ಲ ನಿಜ. ಆದ್ರೆ, ಕಿಂಗ್​ ಕೊಹ್ಲಿ ಮಾತ್ರ ಸಾಲಿಡ್​ ಬ್ಯಾಟಿಂಗ್​ ನಡೆಸಿದ್ರು. ಎಂಟೆದೆ ಬಂಟನಂತೆ ರನ್​ಭೂಮಿಯಲ್ಲಿ ಹೋರಾಟ ನಡೆಸಿದ್ರು. ಕಿಂಗ್​ ಕೊಹ್ಲಿ ಆರ್ಭಟಕ್ಕೆ ಬೌಲರ್​ಗಳು ಪತರುಗುಟ್ಟಿದ್ರು. ಎದುರಾಳಿ ತಂಡಗಳೆಲ್ಲಾ ಬೆಚ್ಚಿ ಬಿದ್ವು. ಹಸಿದ ಹುಲಿಯಂತೆ ಅಬ್ಬರಿಸಿ 741 ರನ್​​ಗಳಿಸಿದ್ರು. ಈ ಅತ್ಯದ್ಭುತ ಆಟ ಟಿ20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟುಹಾಕಿದೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್

ಬಿರುಗಾಳಿ ಎಬ್ಬಿಸಿದ ಕಿಂಗ್​​ ಕೊಹ್ಲಿ ನಿವೃತ್ತಿ ಸುದ್ದಿ
ಕೆಲವೇ ದಿನಗಳಲ್ಲಿ ವೆಸ್ಟ್​ ಇಂಡೀಸ್​ ಹಾಗೂ ಯುಎಸ್​ಎನಲ್ಲಿ ಟಿ20 ವಿಶ್ವಕಪ್​ ಸಮರ ಆರಂಭವಾಗಲಿದೆ. ರೋಹಿತ್​​ ನೇತೃತ್ವದ ಟೀಮ್​ ಇಂಡಿಯಾ ಶೀಘ್ರದಲ್ಲೇ, ವಿಂಡೀಸ್​ಗೆ ಹಾರಲಿದೆ. ಟಿ20 ವಿಶ್ವಕಪ್​ ಟೂರ್ನಿಗಾಗಿ ಟೀಮ್​ ಇಂಡಿಯಾ ವೆಸ್ಟ್​ ಇಂಡೀಸ್​ ಫ್ಲೈಟ್​ ಹತ್ತಿಲ್ಲ. ಅದಾಗಲೇ ವಿರಾಟ್​ ಕೊಹ್ಲಿಯ ನಿವೃತ್ತಿಯ ಚರ್ಚೆಗಳು ಆರಂಭವಾಗಿವೆ. ಮುಂಬರೋ ಮಹತ್ವದ ಟಿ20 ವಿಶ್ವಕಪ್​ ಬಳಿಕ ಕೊಹ್ಲಿ, ಇಂಟರ್​​ನ್ಯಾಷನಲ್​​​ ಕ್ರಿಕೆಟ್​ಗೆ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ.

ಗಾಳಿ ಸುದ್ದಿಗೆ ಪುಷ್ಠಿ ನೀಡಿದ 2 ಬಲವಾದ ಕಾರಣಗಳು..!
ವಿರಾಟ್​ ಕೊಹ್ಲಿಯ ರಿಟೈರ್​ಮೆಂಟ್​​ ಬಗ್ಗೆ ಮಾತನಾಡಿದ್ರೆ ನಿಮಗೆ ಆಶ್ಚರ್ಯ ಆಗಬಹುದು. ಅದ್ಭುತ ಬ್ಯಾಟಿಂಗ್ ಮಾಡ್ತಿದ್ದಾರೆ. ಸಾಲಿಡ್​ ಫೀಲ್ಡಿಂಗ್ ಮಾಡ್ತಿದ್ದಾರೆ. ಫಿಟ್​ನೆಸ್​​ ವಿರಾಟ್​ ಕೊಹ್ಲಿಯನ್ನ ಮೀರಿಸೋ ಮತ್ತೊಬ್ಬ ಆಟಗಾರ ವಿಶ್ವದಲ್ಲೇ ಇಲ್ಲ ಬಿಡಿ. ಇನ್ನು ಕೊಹ್ಲಿಗೆ ಅಂತಾ ಏನ್​ ಮಹಾನ್​ ವಯಸ್ಸಾಗಿಲ್ಲ. 35 ವರ್ಷದಿಂದ 38ರವರೆಗೆ ಆಡಿದ ಕ್ರಿಕೆಟರ್ಸ್​ ಇದ್ದಾರೆ. 39 ವರ್ಷ ಆಡಿದ ಸಚಿನ್​ ತೆಂಡುಲ್ಕರ್​ ಇದ್ದಾರೆ. ಸದ್ಯ ಇರೋ ಕೊಹ್ಲಿ ಫಾರ್ಮ್​​, ಫಿಟ್​ನೆಸ್​ ನೋಡಿದ್ರೆ, ಇನ್ನೂ 4-5 ವರ್ಷ ಆಡಬಹುದು ಅಂತಾ ನಿಮಗೂ ಅನ್ನಿಸಿರುತ್ತೆ. ಆದ್ರೂ ಕೊಹ್ಲಿಯ ರಿಟೈರ್​ಮೆಂಟ್​ ಚರ್ಚೆ ಶುರುವಾಗಿರೋದಕ್ಕೆ 2 ಬಲವಾದ ಕಾರಣ ಇದೆ.

ಇದನ್ನೂ ಓದಿ:ಕೊಹ್ಲಿಗೆ 10/10, ಮ್ಯಾಕ್ಸಿಗೆ 2/10 ; RCB ರಿಪೋರ್ಟ್ ಕಾರ್ಡ್​.. ಯಾರಿಗೆ ಎಷ್ಟು ಮಾರ್ಕ್ಸ್..

ಕಾರಣ-1: ಮಡದಿ, ಮಕ್ಕಳು ಮತ್ತು ಕುಟುಂಬದ ಮೇಲಿನ ಪ್ರೀತಿ
2021ರ ಭಾರತದ ಆಸ್ಟ್ರೇಲಿಯಾ ಟೂರ್​​​​ ನಿಮಗೆ ನೆನಪಿರಬಹುದು. ನಿರೀಕ್ಷೆಯೂ ಮಾಡದ ರೀತಿಯಲ್ಲಿ ಟೀಮ್​ ಇಂಡಿಯಾ 36 ರನ್​ಗಳಿಗೆ ಆಲೌಟ್​ ಆದ ಹೀನಾಯ ದಾಖಲೆ ಬರೆದು ಮೊದಲ ಟೆಸ್ಟ್​ ಸೋತಿತ್ತು. ಆಗ ವಿರಾಟ್​ ಕೊಹ್ಲಿ ತಂಡದ ಫುಲ್​ ಟೈಮ್​ ಕ್ಯಾಪ್ಟನ್​ ಆಗಿದ್ರು. ನಾಯಕನಾಗಿದ್ದು, ತಂಡ ಹೀನಾಯವಾಗಿ ಸೋತ್ರೂ, ಸರಣಿಯ ಉಳಿದ ಪಂದ್ಯಗಳನ್ನಾಡದೇ ತವರಿಗೆ ವಾಪಾಸ್ಸಾಗಿದ್ರು. ಮಗಳು ವಮಿಕಾ ಹುಟ್ಟಿನ ಕಾರಣಕ್ಕೆ ತವರಿಗೆ ಬಂದಿದ್ರು.

ಈ ವರ್ಷದ ಆರಂಭದಲ್ಲೂ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ಕೊಹ್ಲಿ ಇಂಗ್ಲೆಂಡ್​ ಸರಣಿಯಿಂದಲೇ ಹೊರ ನಡೆದಿದ್ರು. ಪತ್ನಿ ಅನುಷ್ಕಾಗೆ ಹುಷಾರಿಲ್ಲಾ ಅಂದಾಗಲೂ ಕ್ರಿಕೆಟ್​ನಿಂದ ಬ್ರೇಕ್​ ಪಡೆದಿದ್ರು. ಈ ಹಿಂದೆ ತಂದೆಗೆ ಸಾವಿನ ನೋವಲ್ಲೂ ಕ್ರಿಕೆಟ್​ ಆಡಿದ್ದ ಕೊಹ್ಲಿ, ಈಗ ಫ್ಯಾಮಿಲಿ ಫಸ್ಟ್​ ಅಂತಿದ್ದಾರೆ. ಇದನ್ನ ಕೊಹ್ಲಿಯ ತಪ್ಪು ಅನ್ನೋಕಾಗಲ್ಲ. ಯಾಕಂದ್ರೆ, ಟೀಮ್​ ಇಂಡಿಯಾದ ಬ್ಯುಸಿ ಶೆಡ್ಯೂಲ್​ ಹಾಗಿದೆ. ಇಡೀ ವರ್ಷಪೂರ್ತಿ ಕ್ರಿಕೆಟ್​ ಆಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಸತತವಾಗಿ ಆಡ್ತಿರೋ ಕೊಹ್ಲಿ, ಟಿ20 ವಿಶ್ವಕಪ್​ ಮುಗಿದ ಬಳಿಕ ನಿವೃತ್ತಿ​ ಹೇಳಬಹುದು.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?

ಕಾರಣ-2: ವಿರಾಟ್​​ ಕೊಹ್ಲಿಯ ಕಣ್ಣಿನ ದೃಷ್ಟಿ
35ರ ಗಡಿ ದಾಟಿದ್ರೂ ವಿರಾಟ್​ ಕೊಹ್ಲಿ ಅದ್ಭುತವಾದ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಇದ್ರಲ್ಲಿ ಪ್ರಾಬ್ಲಮ್​ ಇಲ್ಲ. ಆದ್ರೆ, ಕೊಹ್ಲಿಗೆ EYE SIGHTನ ಸಮಸ್ಯೆಯಿದೆ. ಆಫ್​ ದ ಫೀಲ್ಡ್​ನಲ್ಲಿ ಕೊಹ್ಲಿ ಹೆಚ್ಚಾಗಿ pointed glasses ಬಳಸ್ತಿರೋದನ್ನು ನೀವು ನೋಡಿರಬಹುದು. ಈ ಹಿಂದೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಕೂಡ ಈ ಬಗ್ಗೆ ಮಾತನಾಡಿದ್ರು. ಸದ್ಯ ಕೊಹ್ಲಿಯ ಬ್ಯಾಟ್​ ಅಂಡ್ ಬಾಲ್​ನ ಕನೆಕ್ಷನ್​ ಚೆನ್ನಾಗಿದೆ. ಪರ್ಫೆಕ್ಟ್​ ಟೈಮಿಂಗ್​ ಹೊಂದಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಈ EYE SIGHTನ ಸಮಸ್ಯೆ ಕೊಹ್ಲಿಯನ್ನ ಕಾಡಬಹುದು. ಹೀಗಾಗಿ ಫುಲ್​ ಫಿಟ್​ ಆಗಿದ್ರೂ ಕೊಹ್ಲಿ ಕ್ರಿಕೆಟ್​ಗೆ ಗುಡ್​ ಬೈ ಹೇಳ್ತಾರೆ ಅನ್ನೋ ಚರ್ಚೆ ನಡೀತಿದೆ.

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ಒಟ್ಟಿನಲ್ಲಿ, ಈ ಎರಡು ಬಲವಾದ ಕಾರಣಗಳು ಕೊಹ್ಲಿ ನಿವೃತ್ತಿಯ ಗಾಳಿಸುದ್ದಿಗೆ ಪುಷ್ಟಿ ನೀಡಿವೆ. ಆದ್ರೆ, ವಿರಾಟ್​ ಕೊಹ್ಲಿ ಸದ್ಯ ಆಡ್ತಿರೋ ರೀತಿಯನ್ನ ನೋಡಿದ್ರೆ, ಸದ್ಯಕ್ಕಂತೂ ಗುಡ್​ ಬೈ ಸೂಚನೆಗಳಿಲ್ಲ. ಮುಂದೆನಾಗುತ್ತೆ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮತ್ತೆ ಬಿರುಗಾಳಿ ಎಬ್ಬಿಸಿದೆ ಕೊಹ್ಲಿ ನಿವೃತ್ತಿ ಸುದ್ದಿ.. ವಿರಾಟ್ ವಿದಾಯಕ್ಕೆ ಇದೆ 2 ಬಲವಾದ ಕಾರಣ..!

https://newsfirstlive.com/wp-content/uploads/2024/05/VIRAT-KOHLI-11.jpg

Load More