ಗೆಲ್ಲೋ ಅವಕಾಶ ಇದ್ರೂ ಜವಾಬ್ದಾರಿ ಮರೆತ ಸೀನಿಯರ್ಸ್.. ಕೊಹ್ಲಿ, ರೋಹಿತ್, ರಾಹುಲ್ ವಿರುದ್ಧ ಆಕ್ರೋಶ..!

author-image
Bheemappa
Updated On
ಗೆಲ್ಲೋ ಅವಕಾಶ ಇದ್ರೂ ಜವಾಬ್ದಾರಿ ಮರೆತ ಸೀನಿಯರ್ಸ್.. ಕೊಹ್ಲಿ, ರೋಹಿತ್, ರಾಹುಲ್ ವಿರುದ್ಧ ಆಕ್ರೋಶ..!
Advertisment
  • ಭಾರತದ ಹಿರಿಯ ಆಟಗಾರರಿಗೆ ಬ್ಯಾಟಿಂಗ್ ಮಾಡಲಾಗ್ತಿಲ್ವಾ?
  • 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವಲ್ಲಿ ಫೇಲ್.. ಫೇಲ್
  • ಟೀಮ್ ಇಂಡಿಯಾಕ್ಕೆ ಈ ಮೂವರ ಬ್ಯಾಟಿಂಗ್ ಬಲ ಇಲ್ಲವೇ ಇಲ್ಲ

4ನೇ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಬೀಸುತ್ತಿರುವ ಟೀಮ್ ಇಂಡಿಯಾ ಮತ್ತೆ ಸಂಕಷ್ಟಕ್ಕೆ ಸಿಲುಕುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ. ಏಕೆಂದರೆ ಭಾರತದ ಪರ ಮೂವರು ಪ್ರಮುಖ ಬ್ಯಾಟ್ಸ್​ಮನ್​ಗಳು ಕೇವಲ 10 ರನ್​ಗಳ ಗಡಿ ದಾಟುವ ಮೊದಲೇ ಔಟ್ ಆಗಿ ನಿರಾಸೆ ಮೂಡಿಸಿದ್ದಾರೆ.

ಆಸಿಸ್​ ನೆಲದಲ್ಲಿ ಬ್ಯಾಟಿಂಗ್ ಮಾಡಲು ತಿಣುಕಾಡುತ್ತಿರುವ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ಸ್ ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್​ ಹಾಗೂ ವಿರಾಟ್ ಕೊಹ್ಲಿ ಈ ಸಲನೂ ಬ್ಯಾಟಿಂಗ್ ಮಾಡುವಲ್ಲಿ ಫೇಲ್ ಆಗಿ, ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಬಾರ್ಡರ್​ ಗವಾಸ್ಕರ್ ಟ್ರೋಫಿ 4 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಸಾಧನೆ ಏನೇನೂ ಇಲ್ಲ ಎಂದು ಹೇಳಬಹುದು.

ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ನಾಯಕ ರೋಹಿತ್ 40 ಬಾಲ್​ಗಳಲ್ಲಿ ಕೇವಲ 9 ರನ್​ ಹೊಡೆದು ಜಾಗ ಖಾಲಿ ಮಾಡಿದರು. ಇವರ ನಂತರ ಬಂದ ಕೆ.ಎಲ್ ರಾಹುಲ್​ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಡಕೌಟ್ ಆಗಿ ಬರಿಗೈಯಲ್ಲಿ ನಡೆದರು. ಬಳಿಕ ಬ್ಯಾಟಿಂಗ್​​ಗೆ ಆಗಮಿಸಿದ ವಿರಾಟ್​ ಕೊಹ್ಲಿ ನಿರೀಕ್ಷೆ ಮೂಡಿಸಿದ್ದರು. ಆದರೆ 29 ಎಸೆತಗಳಲ್ಲಿ ಐದೇ 5 ರನ್​ ಗಳಿಸಿ ಆಡುವಾಗ ಮಿಚೆಲ್ ಸ್ಟಾರ್ಕ್​​ಗೆ ಕ್ಯಾಚ್​ ಕೊಟ್ಟು ಮೈದಾನದಿಂದ ಹೊರಕ್ಕೆ ಹೆಜ್ಜೆ ಹಾಕಿದರು.

publive-image

ಇದನ್ನೂ ಓದಿ:ICC Test Ranking; ಕೊಹ್ಲಿ​, ರೋಹಿತ್, ರಾಹುಲ್ ಸ್ಥಾನ ಯಾವುದು.. ಫಸ್ಟ್​, ಸೆಕೆಂಡ್​ನಲ್ಲಿ ಯಾರಿದ್ದಾರೆ?

ಟೀಮ್ ಇಂಡಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ನಿತೀಶ್​​ಕುಮಾರ್ ರೆಡ್ಡಿ ಕಾಪಾಡಿದ್ದರು. ಸದ್ಯ ಇವರಿಬ್ಬರ ಬ್ಯಾಟಿಂಗ್​ನಿಂದ ತಂಡಕ್ಕೆ ಬಲಬರಬಹುದು ಎಂದು ನಿರೀಕ್ಷೆ ಇದೆ. ಒಂದು ದಿನದಲ್ಲಿ 307 ರನ್​ಗಳನ್ನು ಟೀಮ್ ಇಂಡಿಯಾ ಗಳಿಸಿದರೆ ಗೆಲುವು ಸಿಕ್ಕಂತೆ. ಈ ರನ್​ಗಳನ್ನು ತಲುಪಲಾಗದೇ ಎಲ್ಲರೂ ಬಂದ ಪುಟ್ಟ, ಹೋದ ಪುಟ್ಟ ಎನ್ನುವಂತೆ ಆಡಿದರೆ ಭಾರತಕ್ಕೆ ಸೋಲು ಖಚಿತ ಎನ್ನಬಹುದು.

ಇನ್ನು ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 474 ರನ್​, 2ನೇ ಇನ್ನಿಂಗ್ಸ್​ನಲ್ಲಿ 234 ರನ್​ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 358 ಹಾಗೂ ಈಗ ನಡೆಯುತ್ತಿರುವ 2ನೇ ಇನ್ನಿಂಗ್ಸ್​ನಲ್ಲಿ 33 ರನ್​ಗೆ 3 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟದಲ್ಲಿ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment