/newsfirstlive-kannada/media/post_attachments/wp-content/uploads/2025/03/VIRAT_RCB.jpg)
ಸೀಸನ್​​ 18ರ ಐಪಿಎಲ್​ನಲ್ಲಿ ಆರ್​ಸಿಬಿ ಆಡಿರೋದು ಒಂದೇ ಪಂದ್ಯ. ವಿರಾಟ್​ ಕೊಹ್ಲಿ ಸಿಡಿಸಿರೋದು ಒಂದೇ ಒಂದು ಅರ್ಧಶತಕ. ಈ ಒಂದು ಹಾಫ್​ ಸೆಂಚುರಿ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದೆ. ಐಪಿಎಲ್​ನ ರಿಯಲ್​ ರೂಲರ್​​ ಕಿಂಗ್​ ಕೊಹ್ಲಿಯ ಕನ್ಸಿಸ್ಟೆಂಟ್​​ ಆಟ 9 ಎದುರಾಳಿಗಳನ್ನ ಕಂಗೆಡಿಸಿದೆ.
ರೆಕಾರ್ಡ್​ ಬ್ರೇಕರ್, ಹಿಸ್ಟರಿ ಕ್ರಿಯೇಟರ್​, ವಿಶ್ವ ಕ್ರಿಕೆಟ್​ನ ರೂಲರ್, ಐಪಿಎಲ್​ನ ಬಾದ್ ಶಾ ಈ ಬಿರುದು ಬಾವಲಿಗಳಿಗೆಲ್ಲಾ ಕೇರ್​ ಆಫ್​ ಅಡ್ರೆಸ್​ ಯಾರಂತ ಗೊತ್ತಲ್ಲ. ಒನ್ ಆ್ಯಂಡ್ ಒನ್ಲಿ ಕಿಂಗ್​ ಕೊಹ್ಲಿ. ವಿಶ್ವ ಕ್ರಿಕೆಟ್​ನಲ್ಲಾಗಲಿ, ಫ್ರಾಂಚೈಸಿ ಲೀಗ್​​ನಲ್ಲಾಗಲಿ ವಿರಾಟ್​ ಕೊಹ್ಲಿಯೇ ಕಿಂಗ್. ಬ್ಯಾಟಿಂಗ್​ ವಿಚಾರಕ್ಕೆ ಬಂದ್ರೆ ವಿರಾಟ್ ಕೊಹ್ಲಿಯೇ ಮಾಸ್ಟರ್​. ಈ ಇಂಡಿಯನ್​ ಪ್ರೀಮಿಯರ್​ ಲೀಗ್​ ಇದ್ಯಲ್ಲ ಇದ್ರ ರಿಯಲ್​ ರೂಲರ್.
ಐಪಿಎಲ್​ನಲ್ಲಿ ಕಿಂಗ್​​ ಕೊಹ್ಲಿಯ ರನ್​ಬೇಟೆ..!
ಐಪಿಎಲ್​ನ ದಾಖಲೆಗಳ ಒಡೆಯ.. ರಿಚೆಸ್ಟ್​ ಲೀಗ್​ನ ಗರಿಷ್ಠ ರನ್​​ಗಳ ಸರದಾರ. ಗರಿಷ್ಠ ಸೆಂಚುರಿ, ಹಾಫ್ ಸೆಂಚುರಿಗಳ ಮಾಲೀಕ ಒನ್ ಆ್ಯಂಡ್ ಒನ್ಲಿ ವಿರಾಟ್. ಕಳೆದ 18 ವರ್ಷಗಳಿಂದ ಐಪಿಎಲ್​ನಲ್ಲಿ ಹಿಸ್ಟರಿ ಕ್ರಿಯೇಟ್​ ಮಾಡ್ತಿರೋ ವಿರಾಟ್, ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲೇ ರನ್​ ಬೇಟೆಯಾಡಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿರುವ ವಿರಾಟ್, ಟೂರ್ನಿಯ ಉದ್ದಕ್ಕೂ ರನ್ ಶಿಖರ ಕಟ್ಟುವ ಮುನ್ಸೂಚನೆ ನೀಡಿದ್ದಾರೆ. ಒಂದು ಹಾಫ್​ ಸೆಂಚುರಿ ಇನ್ನಿಂಗ್ಸ್​​ 9 ಎದುರಾಳಿ ತಂಡಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಕನ್ಸಿಸ್ಟೆನ್ಸಿಯ ಅನ್ವರ್ಥ ನಾಮವೇ ವಿರಾಟ್ ಕೊಹ್ಲಿ.!
ಕನ್ಸಿಸ್ಟೆನ್ಸಿ ಅಂದ್ರೆ ಕೊಹ್ಲಿ.. ಕೊಹ್ಲಿ ಅಂದ್ರೆ ಕನ್ಸಿಸ್ಟೆನ್ಸಿ.. ಕನ್ಸಿಸ್ಟೆನ್ಸಿಗೆ ಮತ್ತೊಂದು ಹೆಸರೇ ವಿರಾಟ್ ಕೊಹ್ಲಿ ಅಂದ್ರೆ ತಪ್ಪೇ ಇಲ್ಲ. ಇದು ಸುಖಾಸುಮ್ಮನೆ ಹೇಳ್ತಿರೋ ಮಾತಲ್ಲ. ಐಪಿಎಲ್​ನ ಇತಿಹಾಸವೇ ಘಂಟಾ ಘೋಷವಾಗಿ ಇದನ್ನ ಸಾರಿ ಸಾರಿ ಹೇಳ್ತಿದೆ. ಇದಕ್ಕೆ ಒಂದು ಬೆಸ್ಟ್​​ ಎಕ್ಸಾಂಪಲ್​​ ಅಂದ್ರೆ, ಕಳೆದ 18 ಪಂದ್ಯಗಳ ಆಟ.
18 ಪಂದ್ಯ.. 3 ಶತಕ.. 6 ಅರ್ಧಶತಕ.. ನೋ ಡಕ್..!
18 ಐಪಿಎಲ್ ಪಂದ್ಯಗಳಲ್ಲಿ ವಿರಾಟ್, ಅಕ್ಷರಶಃ ವಿರಾಟ ರೂಪ ತೋರಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್​ ಕೊಳ್ಳೆ ಹೊಡೆದಿರುವ ವಿರಾಟ್, ಕಳೆದ 18 ಪಂದ್ಯಗಳಿಂದ 3 ಶತಕ, 6 ಅರ್ಧಶತಕ ಒಳಗೊಂಡ 1141 ರನ್ ಗಳಿಸಿದ್ದಾರೆ. ಬರೋಬ್ಬರಿ 71.31ರ ಬ್ಯಾಟಿಂಗ್ ಅವರೇಜ್ ಹೊಂದಿರುವ ವಿರಾಟ್​, ಒಂದೇ ಒಂದು ಡಕೌಟ್ ಆಗಿಲ್ಲ. ಇದು ಕೊಹ್ಲಿ ಕನ್ಸಿಸ್ಟೆನ್ಸಿಗೆ ಹಿಡಿದ ಕನ್ನಡಿಯಾಗಿದೆ.
ಐಪಿಎಲ್​​ನಲ್ಲಿ ಕನ್ಸಿಸ್ಟೆಂಟ್​​ ಆಟಕ್ಕೆ ಕೊಹ್ಲಿಯೇ ಸರಿಸಾಟಿ
ಕಳೆದ 18 ಪಂದ್ಯಗಳಿಂದ ಮಾತ್ರವಲ್ಲ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲೂ ಕೊಹ್ಲಿಯ ಕನ್ಸಿಸ್ಟೆನ್ಸಿ ಆಟ ಮೀರಿಸುವವರಿಲ್ಲ. 2008, 2009ರ ಸೀಸನ್​ ಬಿಟ್ರೆ, 2010ರಿಂದ ಸತತ 16 ಸೀಸನ್​​ಗಳಲ್ಲಿ 300+ ರನ್​ ಸಿಡಿಸಿದ್ದಾರೆ.
5 ಸೀಸನ್​​​ಗಳಲ್ಲಿ 300 ಪ್ಲಸ್​ ರನ್ ದಾಖಲಿಸಿರುವ ಕೊಹ್ಲಿ, 3 ಸೀಸನ್​​​ಗಳಲ್ಲಿ 400ಕ್ಕೂ ಅಧಿಕ, 4 ಬಾರಿ ಐನೂರಕ್ಕೂ ಅಧಿಕ ರನ್ ಸಿಡಿಸಿ ಮಿಂಚಿದ್ದಾರೆ. ಇನ್ನು 2 ಸೀಸನ್​ಗಳಲ್ಲಿ ಬಾರಿ 600ಕ್ಕೂ ಅಧಿಕ ರನ್​ಗಳಿಸಿದ್ರೆ, ಒಂದು ಸೀಸನ್​ನಲ್ಲಿ 700 ರನ್​ಗಳ ಗಡಿ ದಾಟಿದ್ದಾರೆ. ಇನ್ನು, 2016ರ ಸೀಸನ್​ನಲ್ಲಿ ಗಳಿಸಿದ್ದ 973 ರನ್ ದಾಖಲೆಯನ್ನ ಮರೆಯೋಕೂ ಆಗಲ್ಲ.. ಮುರಿಯೋಕೂ ಆಗಲ್ಲ ಬಿಡಿ.
ಸದ್ಯ ಈ ಸೀಸನ್​ನ ಮೊದಲ ಪಂದ್ಯದಲ್ಲಿ ಬೊಂಬಾಟ್​ ಅರ್ಧಶತಕ ಸಿಡಿಸಿರೋ ವಿರಾಟ್ ಕೊಹ್ಲಿ ಆಟ ಕನ್ಸಿಸ್ಟೆನ್ಸಿ ಆಟ ಎದುರಾಳಿಗಳ ನಿದ್ದೆ ಗೆಡಿಸಿದೆ. ಕನ್ಸಿಸ್ಟೆನ್ಸಿ ಕಿಂಗ್​ ಅನ್ನಿಸಿಕೊಂಡಿರೋ ಕೊಹ್ಲಿ, ಇದೇ ಆಟ ಮುಂದುವರೆಸಿದ್ರೆ, 2016ರ ವಿರಾಟ ರೂಪ ದರ್ಶನ ಮಾಡಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ