ವಿರಾಟ್ ಕೊಹ್ಲಿ, ಸಚಿನ್, MS ಧೋನಿ.. ಇವರಲ್ಲಿ ಯಾರಿಗೆ ಜಾಹೀರಾತುಗಳಲ್ಲಿ ಹೆಚ್ಚು ಡಿಮ್ಯಾಂಡ್​..?

author-image
Bheemappa
Updated On
ವಿರಾಟ್ ಕೊಹ್ಲಿ, ಸಚಿನ್, MS ಧೋನಿ.. ಇವರಲ್ಲಿ ಯಾರಿಗೆ ಜಾಹೀರಾತುಗಳಲ್ಲಿ ಹೆಚ್ಚು ಡಿಮ್ಯಾಂಡ್​..?
Advertisment
  • ಮಹೇಂದ್ರ ಸಿಂಗ್ ಧೋನಿಗೆ ಈಗಲೂ ಡಿಮ್ಯಾಂಡ್ ಇದೆಯಾ?
  • ಬಾಲಿವುಡ್ ಸ್ಟಾರ್​ಗಳನ್ನೇ ಹಿಂದಿಕ್ಕಿರುವ ಕ್ರಿಕೆಟ್ ಪ್ಲೇಯರ್ಸ್​
  • ಜಾಹಿರಾತು ಲೋಕಕ್ಕೆ ಕಿಂಗ್ ಯಾರು, ಯಾರು ಆ ಬ್ರ್ಯಾಂಡ್..?

ಕ್ರಿಕೆಟ್ ಆಟಗಾರರು ಒಂದು ರೀತಿ ಓಡುವ ಕುದುರೆಗಳು ಇದ್ದಂಗೆ. ಕ್ರಿಕೆಟರ್​ಗಳು ಮುಂದೆ ಹೋಗುತ್ತಿದ್ದರೆ, ಜಾಹೀರಾತು ಕಂಪನಿಗಳು ಕ್ರಿಕೆಟರ್​ಗಳ ಹಿಂದೆ ಓಡುತ್ತವೆ. ನಿಜ ಬಿಡಿ, ತಮ್ಮ ಬ್ರ್ಯಾಂಡ್​ಗಳನ್ನ ಮಾರಾಟ ಮಾಡಲು, ಜಾಹೀರಾತುದಾರರಿಗೆ ಕ್ರಿಕೆಟರ್​ಗಳು ಬೇಕೇ ಬೇಕು. ಆದ್ರೆ ಯಾವ ಕ್ರಿಕೆಟಿಗನ ಹಿಂದೆ ಹೋದ್ರೆ ಬ್ಯುಸಿನೆಸ್ ಮಾಡಬಹುದು ಅಂತ, ಜಾಹಿರಾತುದಾರರಿಗೆ ಚೆನ್ನಾಗೇ ಗೊತ್ತಿರುತ್ತದೆ. ಹಾಗಾದ್ರೆ ಜಾಹೀರಾತುದಾರರ ಬೆಸ್ಟ್ ಚಾಯ್ಸ್​ ಕ್ರಿಕೆಟರ್ ಯಾರು..?

90ರ ದಶಕದಲ್ಲಿ ಸಚಿನ್ ತೆಂಡುಲ್ಕರ್, ಜಾಹೀರಾತು ಲೋಕವನ್ನ ಹಾಳುತ್ತಿದ್ದರು. ತೆಂಡುಲ್ಕರ್ ನಂತರ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿನೇ, ಕಾರ್ಪೊರೇಟ್ ಲೋಕದ ಕಿಂಗ್ ಆಗಿ ಮರೆದರು. ದಶಕದ ಕಾಲ ಧೋನಿ ಮತ್ತು ಕೊಹ್ಲಿ, ಬಿಗ್​​ ಬ್ರ್ಯಾಂಡ್​​ಗಳನ್ನ ರೂಲ್​ ಮಾಡುತ್ತಿದ್ದರು. ಜಾಹಿರಾತುಗಳಿಂದ ಇಬ್ಬರು ಸೂಪರ್​ಸ್ಟಾರ್ ಕ್ರಿಕೆಟಿಗರು, ಕೋಟಿ ಕೋಟಿ ಸಂಪಾದಿಸಿದರು. ಆದ್ರೀಗ ಕಾರ್ಪೊರೇಟ್ ವರ್ಲ್ಡ್​ಗೆ, ಫ್ಯೂಚರ್​​ ಸ್ಟಾರ್ಸ್​ ಅಲ್ಲ. ಹಳೆ ಹುಲಿಗಳೇ ಫೇವರಿಟ್.

publive-image

ಕಿಂಗ್ ಆಫ್ ಬ್ರ್ಯಾಂಡ್ ಧೋನಿ​..!

2023ರಲ್ಲಿ ಎಂ.ಎಸ್.ಧೋನಿ ಕೈಯಲ್ಲಿ 32 ಬ್ರ್ಯಾಂಡ್​​ಗಳಿದ್ದವು. ಆದ್ರೆ ಈ ವರ್ಷ ಧೋನಿ ಕೈಯಲ್ಲಿ 42 ಬ್ರ್ಯಾಂಡ್​ಗಳಿವೆ. ಮಾಜಿ ನಾಯಕ ಸೌರವ್ ಗಂಗೂಲಿ, ಕಳೆದ ವರ್ಷ 27 ಬ್ರ್ಯಾಂಡ್​​​ಗಳಿಗೆ ಅಂಬಾಸಿಡರ್ ಆಗಿದ್ರು. ಆದ್ರೆ ಈ ವರ್ಷ ದಾದಾ, 24 ಬ್ರ್ಯಾಂಡ್​ಗಳ ದಾದಾ ಆಗಿದ್ದಾರೆ. ಆಶ್ಚರ್ಯ ಅಂದ್ರೆ ವಿರಾಟ್ ಕೊಹ್ಲಿ ಕೈಯಲ್ಲಿ ಕಳೆದ ವರ್ಷ 29 ಬ್ರ್ಯಾಂಡ್​ಗಳಿದ್ದವು. ಆದ್ರೆ ಈ ವರ್ಷ ವಿರಾಟ್, 21 ಬ್ರ್ಯಾಂಡ್​​ಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ ಕುಸಿಯುತ್ತಾ ಬಂತಾ..?

ವರ್ಷದಿಂದ ವರ್ಷಕ್ಕೆ ವಿರಾಟ್ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ಕೊಹ್ಲಿಯ ಬ್ಯಾಟಿಂಗ್ ಫಾರ್ಮ್​​. ಕೊಹ್ಲಿ, ಒಂದೊಂದು ಶತಕ ಸಿಡಿಲು ಕನಿಷ್ಠ 2 ರಿಂದ 3 ವರ್ಷ ಟೈಮ್ ತೆಗೆದುಕೊಳ್ಳುತ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಇದ್ದ ಚಾರ್ಮ್​​ ಅನ್ನ, ಕೊಹ್ಲಿ ಕಳೆದುಕೊಂಡಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ ಕೂಡ, ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ನಿವೃತ್ತಿಯಾಗಿ 5 ವರ್ಷ ಆದ್ರೂ ಧೋನಿಗೆ ಡಿಮ್ಯಾಂಡ್..?

ಟೀಮ್ ಇಂಡಿಯಾದ ಮೋಸ್ಟ್​ ಸಕ್ಸಸ್​​ಫುಲ್ ಮಾಜಿ ಕ್ಯಾಪ್ಟನ್ ಧೋನಿ, ಈಗಲೂ ಕಾರ್ಪೊರೇಟ್ ವರ್ಲ್ಡ್​ನ ಡಾರ್ಲಿಂಗ್. ಧೋನಿ ಆಡಿದ್ರೂ ಡಿಮ್ಯಾಂಡ್.. ಆಡದೇ ಇದ್ರೂ ಡಿಮ್ಯಾಂಡ್. ಧೋನಿ ಇಂಟರ್​ನ್ಯಾಷನಲ್ ಕ್ರಿಕೆಟ್​​ನಿಂದ ದೂರವಾಗಿ 5 ವರ್ಷ ಕಳೆದ್ರೂ, ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಧೋನಿಗೆ, ಫುಲ್ ಡಿಮ್ಯಾಂಡ್ ಇದೆ.

ಕಾರ್ಪೊರೇಟ್​​​​​​​​​​​​​​​​​​​​​​​​​​​​​​​​​​​​​​​​ ಕಂಪನಿ, ಬ್ರ್ಯಾಂಡ್​​ಗಳಿಗೆ ಬೇಕು ಧೋನಿ!

ಬ್ರ್ಯಾಂಡ್​ಗಳು ಧೋನಿಯನ್ನ ಹುಡುಕಿಕೊಂಡು ಹೋಗೋದಕ್ಕೆ ಕಾರಣ ಇದೆ. ಯಾಕಂದ್ರೆ. ಯಾವುದೇ ಒಂದು ಕಂಪನಿ ತನ್ನ ಬ್ರ್ಯಾಂಡ್​​ಗಳನ್ನ ಮಾರಾಟ ಮಾಡಬೇಕಾದ್ರೆ, ಅದಕ್ಕೆ ತುಂಬಾ ಎಫರ್ಟ್ ಹಾಕುತ್ತೆ. ಆದ್ರೆ ಬ್ರ್ಯಾಂಡ್​ಗಳೇ ಧೋನಿ ಹಿಂದೆ ಹೋದ್ರೆ, ಹೆಚ್ಚು ಶ್ರಮ ಪಡಬೇಕಾಗಿಲ್ಲ. ಮಾರ್ಕೆಟ್​​ನಲ್ಲಿ ಸಲೀಸಾಗಿ ತನ್ನ ಬ್ರ್ಯಾಂಡ್​ಗಳನ್ನ ಮಾರಾಟ ಮಾಡಬಹುದು. ಹಾಗಾಗೇ ಧೋನಿ ಅಂದ್ರೆ ಬ್ರ್ಯಾಂಡ್.. ಬ್ರ್ಯಾಂಡ್ ಅಂದ್ರೆ ಧೋನಿ ಅಂತಾಗಿದೆ.

ಇದನ್ನೂ ಓದಿ:5 ಟ್ರೋಫಿ, 11 ಫೈನಲ್​ ಆಡಿದ ಏಕೈಕ ಪ್ಲೇಯರ್ MS ಧೋನಿ.. ಆದ್ರೆ ಆ ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಆಗಲಿಲ್ಲ!

publive-image

ಬಾಲಿವುಡ್​​ ಸೂಪರ್​ಸ್ಟಾರ್​​ಗಳೆಲ್ಲಾ ಧೋನಿ ಮುಂದೆ ಸೈಡ್​ಲೈನ್..!

ಭಾರತದಲ್ಲಿ ನಟ-ನಟಿಯರಿಗಿಂತ ಹೆಚ್ಚು ಕ್ರಿಕೆಟಿಗರನ್ನೇ ಆರಾಧಿಸೋದು ಮತ್ತು ಫಾಲೋ ಮಾಡೋದು. ಆದ್ರೆ ವರ್ಷಾನೂಗಟ್ಟಲೇ ನಟನೆಯಲ್ಲಿ ಮುಳುಗಿ ಸ್ಟಾರ್​ಡಮ್​​​​​​​​​​​​​​ ಪಡೆದುಕೊಂಡಿರೋ ಅಮಿತಾಬ್​ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್​ರಂತಹ ನಟರನ್ನೇ, ಮಹೇಂದ್ರ ಸಿಂಗ್ ಧೋನಿ ಸೈಡ್​ಲೈನ್ ಮಾಡಿ ನಂ.1 ಪಟ್ಟದಲ್ಲಿದ್ದಾರೆ.

ಧೋನಿ ಒಬ್ಬ ಐಕಾನ್. ಧೋನಿ ಒಬ್ಬ ರೋಲ್ ಮಾಡಲ್, ಧೋನಿ ಒಬ್ಬ ಗ್ರೇಟ್ ಕ್ಯಾಪ್ಟನ್. ಧೋನಿ ಕ್ರಿಕೆಟ್​ಗೇ ಬ್ರ್ಯಾಂಡ್​ ಅಂಬಾಸಿಡರ್. ಇವಷ್ಟೇ ಅಲ್ಲ, ತನ್ನ ಸ್ಟೈಲಿಶ್ ಲುಕ್ಸ್​, ಌಕ್ಟಿಂಗ್ ಸ್ಕಿಲ್ಸ್​​ನಿಂದ ಗಮನ ಸೆಳೆದಿರುವ ಧೋನಿ, ಜಾಹಿರಾತು ಲೋಕಕ್ಕೆ ಕಂಪ್ಲೀಟ್ ಪ್ಯಾಕೇಜ್ ಅಂದ್ರೂ ತಪ್ಪಾಗೊಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment