/newsfirstlive-kannada/media/post_attachments/wp-content/uploads/2024/11/KOHLI_VIRAT.jpg)
ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾ ಸತತ ಹಿನ್ನಡೆ ಅನುಭವಿಸಿದೆ. ನಾಯಕನ ಅಲಭ್ಯತೆ, ಪ್ರಮುಖ ಆಟಗಾರರ ಇಂಜುರಿ ತಲೆ ನೋವಾಗಿದೆ. ಈ ಹಿನ್ನಡೆಗಳ ನಡುವೆ ಟೀಮ್​ ಇಂಡಿಯಾದಲ್ಲಿ ಪಾಸಿಟಿವ್​ ಅಂದ್ರೆ ಅಂದು ಕಿಂಗ್​ ಕೊಹ್ಲಿ. ಭಾರತ ತಂಡದ ಭರವಸೆ ಆಗಿರುವ ಕೊಹ್ಲಿ, ಎದುರಾಳಿ ಆಸ್ಟ್ರೇಲಿಯಾದ ಪಾಲಿಗೆ ವಿಲನ್​ ಆಗಿದ್ದಾರೆ. ಯಾಕಂದ್ರೆ, ಮೊದಲ ಟೆಸ್ಟ್​ ನಡೆಯುತ್ತಿರುವುದು ಕೊಹ್ಲಿ ಫೇವರಿಟ್​ ಪರ್ತ್​ನಲ್ಲಿ.
ಭಾರತ VS ಆಸ್ಟ್ರೇಲಿಯಾ.. ಬಾರ್ಡರ್​​-ಗವಾಸ್ಕರ್​ ಟ್ರೋಫಿಯ ಫೀವರ್​ ಕ್ರಿಕೆಟ್​ ಲೋಕವನ್ನ ಆವರಿಸಿದೆ. ಪ್ರತಿಷ್ಟಿತ ಸರಣಿಯ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದ್ದು, ಮೊದಲ ಟೆಸ್ಟ್​ ಆಡಲು ಎರಡೂ ತಂಡಗಳು ಪರ್ತ್​​ ತಲುಪಿವೆ. ಫಸ್ಟ್​ ಫೈಟ್​ಗೆ ಭರ್ಜರಿ ತಯಾರಿ ನಡೆಸಿರೋ ತಂಡಗಳು ಸರಣಿಯಲ್ಲಿ ಶುಭಾರಂಭ ಮಾಡಲು ತುದಿಗಾಲಲ್ಲಿ ನಿಂತಿವೆ. ಕಿಂಗ್​ ಕೊಹ್ಲಿಯಂತೂ ಕಾಂಗರೂಗಳ ಬೇಟೆಗೆ ಕೆರಳಿ ನಿಂತಿದ್ದಾರೆ.
/newsfirstlive-kannada/media/post_attachments/wp-content/uploads/2024/09/VIRAT_KOHLI_BNG.jpg)
ಫೇವರಿಟ್​​ ಪರ್ತ್​​ನಲ್ಲಿ ಕಣಕ್ಕಿಳಿಯಲು ಕೊಹ್ಲಿಗೆ ಕಾತರ.!
ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಯ ಫಸ್ಟ್​ ಫೈಟ್​ ನಡೀತಾ ಇರೋದು ಪರ್ತ್​​ ಆಪ್ಟಸ್​ ಸ್ಟೇಡಿಯಂನಲ್ಲಿ. ಈ ಸ್ಟೇಡಿಯಂ ಕಿಂಗ್​ ಕೊಹ್ಲಿಗೆ ವೆರಿ ವೆರಿ ಸ್ಪೆಷಲ್​ ಸ್ಟೇಡಿಯಂ. ಅವರದೇ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನ ಕೊಹ್ಲಿ ಯಾವ ರೇಂಜಿಗೆ ಕಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಅಡಿಲೇಡ್​, ಸಿಡ್ನಿ, ಮೆಲ್ಬರ್ನ್​​ ಎಲ್ಲೆಡೆ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ. ಆದ್ರೆ, ಕಿಂಗ್​ ಕೊಹ್ಲಿ ಫೇವರಿಟ್​ ಶತಕ ಬಂದಿರೋದು ಪರ್ತ್​ನಲ್ಲಿ.!
ಆಸ್ಟ್ರೇಲಿಯಾದಲ್ಲಿ ನನ್ನ ಉತ್ತಮವಾದ ಇನ್ನಿಂಗ್ಸ್ ಅಂದ್ರೆ ಅದು ಖಂಡಿತವಾಗಿ ಪರ್ತ್ ಟೆಸ್ಟ್ನ ಶತಕ. 2018/19ರ ಸರಣಿಯಲ್ಲಿ ಸಿಡಿಸಿದ ಶತಕ. ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್ನಲ್ಲಿ ಆಡಿದ ಕಠಿಣವಾದ ಪಿಚ್ ಅದು. ಆ ಟಫೆಸ್ಟ್ ಪಿಚ್ನಲ್ಲಿ ಶತಕ ಸಿಡಿಸಿದ್ದು ಶ್ರೇಷ್ಠವಾದದ್ದು.
ವಿರಾಟ್ ಕೊಹ್ಲಿ, ಭಾರತ ತಂಡದ ಬ್ಯಾಟ್ಸ್ಮನ್
ಅದೊಂದು ಶ್ರೇಷ್ಠ ಶತಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 326 ರನ್ ​ಗಳಿಸಿ ಆಲೌಟ್​ ಆಗಿತ್ತು. ಆ ಬಳಿಕ ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿತ್ತು. ಮಿಚೆಲ್​ ಸ್ಟಾರ್ಕ್​, ಜೋಶ್​ ಹೇಜಲ್​ವುಡ್​ ಕೊಟ್ಟ ಶಾಕ್​ಗೆ ಇಂಡಿಯನ್​ ಒಪನರ್ಸ್​ ಪೆವಿಲಿಯನ್​ ಸೇರಿದ್ರು. ಆಗ ಕಣಕ್ಕಿಳಿದಿದ್ದೇ ವಿರಾಟ್​ ಕೊಹ್ಲಿ.!
4ನೇ ಕ್ರಮಾಂಕದಲ್ಲಿ ಕೊಹ್ಲಿ ಕಣಕ್ಕಳಿದಾಗ ಬೆಂಕಿ-ಬಿರುಗಾಳಿಯ ಎಸೆತಗಳನ್ನ ಎಸೆದಿದ್ದ ಮಿಚೆಲ್​ ಸ್ಟಾರ್ಕ್​, ಜೋಶ್​ ಹೇಜಲ್​ವುಡ್,​ ಕೊಹ್ಲಿಗೆ ಸವಾಲ್​ ಆಗ್ತಾರೆ ಅಂತಾ ಎಲ್ರೂ ಭಾವಿಸಿದ್ದರು. ಆದ್ರೆ, ಕೊಹ್ಲಿ ಅವರ ಮೇಲೆ ಸವಾರಿ ಮಾಡಿಬಿಟ್ರು. ಅಂದು ಟಫೆಸ್ಟ್​ ಪಿಚ್​ನಲ್ಲಿ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ದ ಕೊಹ್ಲಿ, ಆಸಿಸ್​ ಬೌಲರ್​ಗಳಿಗೆ ನರಕ ದರ್ಶನ ಮಾಡಿಸಿದರು. 2ನೇ ದಿನದಾಟದಲ್ಲಿ ಆರಂಭವಾದ ಕೊಹ್ಲಿ ಆಟ 3ನೇ ದಿನವೂ ಕಂಟಿನ್ಯೂ ಆಗಿತ್ತು. ಆಸಿಸ್​ ಬೌಲರ್​ಗಳು ಕೊಹ್ಲಿ ಆಟಕ್ಕೆ ಕಂಗಾಲ್​ ಆಗಿದ್ದರು.
ಇದನ್ನೂ ಓದಿ: ‘ಮಹಾ’, ಜಾರ್ಖಂಡ್ ವಿಧಾನಸಭಾ ಚುನಾವಣೆ; ಇಂದು ಮತದಾನ.. ಒಟ್ಟು ಎಷ್ಟು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ?
/newsfirstlive-kannada/media/post_attachments/wp-content/uploads/2024/08/Virat-Kohli-Double-Century.jpg)
ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 257 ಎಸೆತಗಳನ್ನ ಎದುರಿಸಿದ್ದ ವಿರಾಟ್​ ಕೊಹ್ಲಿ, 13 ಬೌಂಡರಿ, 1 ಸಿಕ್ಸರ್​ ಸಿಡಿಸಿದರು. ಮಿಚೆಲ್​​ ಸ್ಟಾರ್ಕ್​ ಎಸೆತದಲ್ಲಿ ಬ್ಯೂಟಿಫುಲ್​ ಸ್ಟ್ರೈಟ್​​ ಡ್ರೈವ್​ ಮಾಡಿದ ಕೊಹ್ಲಿ ಬೌಂಡರಿಯೊಂದಿಗೆ ಶತಕ ಪೂರೈಸಿದ್ರು. ಆ ಸೆಂಚುರಿ ಸೆಲಬ್ರೇಷನ್​ ಆಸ್ಟ್ರೇಲಿಯನ್ನರನ್ನ ಇಂದಿಗೂ ಕಾಡುತ್ತಿದೆ. ಕೊಹ್ಲಿ ಆ ಸೆಂಚುರಿ ಆಟ ನೋಡಿ ಅಂದಿನ ಆಸಿಸ್​ ಕೋಚ್​ ತಲೆ ಮೇಲೆ ಕೈ ಹೊತ್ತು ಕೂತಿದ್ರು ಗೊತ್ತಾ.?
ಪರದಾಟಕ್ಕೆ ಫೇವರಿಟ್​​ ಪರ್ತ್​​ನಲ್ಲಿ ಬೀಳುತ್ತಾ ಬ್ರೇಕ್​.?
ಅಂದು ಪ್ರೈಮ್​ ಫಾರ್ಮ್​ನಲ್ಲಿದ್ದ ಕೊಹ್ಲಿ ಇಂದು ರನ್​ಗಳಿಕೆಗೆ ಪರದಾಡ್ತಿದ್ದಾರೆ. ಟೆಸ್ಟ್​ ಕ್ರಿಕೆಟ್​​​ನಲ್ಲಿ ಕಳೆದ 60 ಇನ್ನಿಂಗ್ಸ್​ಗಳಿಂದ ಕೊಹ್ಲಿ ಸಿಡಿಸಿರೋದು ಕೇವಲ 2 ಸೆಂಚುರಿ, 11 ಹಾಫ್​ ಸೆಂಚುರಿ ಅಷ್ಟೇ. ಇನ್ನು ಈ ವರ್ಷವಂತೂ ಆಡಿರೋ 6 ಟೆಸ್ಟ್​​ಗಳಿಂದ 22.72ರ ಹೀನಾಯ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಕಳಪೆ ಫಾರ್ಮ್​​ನ ಸುಳಿಗೆ ಸಿಲುಕಿ ಪರದಾಡ್ತಿರೋ ಕೊಹ್ಲಿ, ಇದೀಗ ಫೇವರಿಟ್​​ ಪರ್ತ್​​ನಲ್ಲಿ ಪವರ್​ ತೋರಿಸ್ತಾರಾ ಎಂದು ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us