/newsfirstlive-kannada/media/post_attachments/wp-content/uploads/2025/04/VIRAT_KOHLI-2-2.jpg)
ಕಿಂಗ್ ಕೊಹ್ಲಿ ಯಾವುದೇ ಕ್ರಿಕೆಟ್ ಪಂದ್ಯವಾಡಲಿ ಒಂದಲ್ಲ, ಒಂದು ದಾಖಲೆ ಮಾಡುತ್ತಿರುತ್ತಾರೆ. ಸದ್ಯ ನಡೆಯುತ್ತಿರುವ 2025ರ ಐಪಿಎಲ್ ಟ್ರೋಫಿಯಲ್ಲಿ ಉತ್ತಮ ಪರ್ಫಾಮೆನ್ಸ್ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಮಹತ್ತರವಾದ ಎರಡು ದಾಖಲೆಗಳ ಹೊಸ್ತಿಲಲ್ಲಿ ಇದ್ದಾರೆ. ಇಂದಿನ ಪಂದ್ಯದಲ್ಲಿ ಕೇವಲ 24 ರನ್ಗಳಿಸಿದರೆ ಒಂದು ದಾಖಲೆ ಉಡೀಸ್ ಆಗಲಿದೆ. ಇನ್ನೊಂದು ಯಾವುದು?.
ಆರ್ಸಿಬಿಯ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ 2008ರಿಂದಲೂ ಆರ್‌ಸಿಬಿ ತಂಡದಲ್ಲಿ ಮಾತ್ರ ಬ್ಯಾಟ್ ಬೀಸಿದ್ದಾರೆ. ಇದುವರೆಗೆ ಐಪಿಎಲ್ನ 18 ಸೀಸನ್ಗಳಲ್ಲಿ 256 ಇನ್ನಿಂಗ್ಸ್ಗಳಲ್ಲಿ ಒಟ್ಟು 8,552 ರನ್ ಬಾರಿಸಿದ್ದಾರೆ. ಇದರ ಜೊತೆಗೆ ಈಗ ಸ್ಥಗಿತವಾಗಿರುವಂತಹ ಚಾಂಪಿಯನ್ಸ್ ಲೀಗ್ (ಸಿಎಲ್) ಟಿ20ಯಲ್ಲಿ 14 ಪಂದ್ಯಗಳಿಂದ 424 ರನ್‌ಗಳು ಗಳಿಸಿದ್ದರು. ಈ ಎಲ್ಲ ಸೇರಿ ಒಟ್ಟು 270 ಇನ್ನಿಂಗ್ಸ್‌ಗಳಿಂದ 8,976 ರನ್ ಗಳಿಸಿದ್ದಾರೆ.
ಇದನ್ನೂ ಓದಿ:RCB ಗೆದ್ದರೇ, Qualifier-1 ಪಂದ್ಯ ಯಾವ ತಂಡದ ವಿರುದ್ಧ ಆಡಲಿದೆ.. ಸೋತರೇ ಏನಾಗಲಿದೆ?
ವಿರಾಟ್ ಕೊಹ್ಲಿ ಅವರು ಇಂದಿನ ಪಂದ್ಯದಲ್ಲಿ ಕೇವಲ ಇನ್ನೂ 24 ರನ್ ಗಳಿಸಿದರೆ, ಒಂದೇ ಐಪಿಎಲ್ ಫ್ರಾಂಚೈಸಿ ಪರವಾಗಿ ಅಂದರೆ ಆರ್‌ಸಿಬಿ ಪರವಾಗಿ ಒಟ್ಟು 9,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇದು ನಿಜಕ್ಕೂ ಐಪಿಎಲ್ ಇತಿಹಾಸದಲ್ಲಿ ದೊಡ್ಡ ಸಾಧನೆ ಆಗಲಿದೆ.
ಇನ್ನೊಂದು ದಾಖಲೆ ಎಂದರೆ, ಈ ಸೀಸನ್ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು (ಫಿಫ್ಟಿ ಪ್ಲಸ್) ಗಳಿಸಿದ ಬ್ಯಾಟರ್ ಎಂದು ಖ್ಯಾತಿ ಪಡೆಯಲು ಕೇವಲ ಒಂದೇ ಒಂದು ಅರ್ಧಶತಕ ಅಗತ್ಯವಿದೆ. ಕೊಹ್ಲಿ ಸದ್ಯಕ್ಕೆ 62 ಬಾರಿ ಫಿಫ್ಟಿ ಪ್ಲಸ್ ರನ್ಗಳನ್ನು ಬಾರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಎಲ್ಎಸ್ಜಿ ವಿರುದ್ಧ ಫಿಫ್ಟಿ ಪ್ಲಸ್ ರನ್ ಬಾರಿಸಿದರೆ ಆಸ್ಟ್ರೇಲಿಯಾದ ಮಾಜಿ ಪ್ಲೇಯರ್ ಡೇವಿಡ್ ವಾರ್ನರ್ ಅವರ ದಾಖಲೆ ಉಡೀಸ್ ಮಾಡಲಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಫಿಫ್ಟಿ ಪ್ಲಸ್ ರನ್ ಗಳಿಸಿದ ಬ್ಯಾಟರ್ಸ್
- ವಿರಾಟ್ ಕೊಹ್ಲಿ- 62
- ಡೇವಿಡ್ ವಾರ್ನರ್- 62
- ಶಿಖರ್ ಧವನ್- 51
- ರೋಹಿತ್ ಶರ್ಮಾ- 46
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ