newsfirstkannada.com

ವಿರಾಟ್ ಕೊಹ್ಲಿಗೆ ಟಿ-20 ವಿಶ್ವಕಪ್​ನ ಡೋರ್ ಕ್ಲೋಸ್ -ಬಿಸಿಸಿಐ ಮೂಲಗಳಿಂದ ಶಾಕಿಂಗ್ ನ್ಯೂಸ್

Share :

Published March 12, 2024 at 12:43pm

    2024 ಜೂನ್​​ನಿಂದ ಟಿ-20 ವಿಶ್ವಕಪ್ ಪಂದ್ಯ ನಡೆಯಲಿದೆ

    ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್​​ಗೆ ಹೊಸ ಟಾಸ್ಕ್​ ಕೊಟ್ಟ ಬಿಸಿಸಿಐ

    ಕೊಹ್ಲಿ ವಿಶ್ವಕಪ್ ಆಡಲು ಇರೋದು ಒಂದೇ ಒಂದು ಮಾರ್ಗ

ವಿರಾಟ್ ಕೊಹ್ಲಿ ಕುರಿತು ಮಹತ್ವದ ಸುದ್ದಿಯೊಂದು ಹೊರ ಬಿದ್ದಿದೆ. ಜೂನ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನಿಂದ ಕೊಹ್ಲಿಗೆ ಕೊಕ್ ನೀಡಲಾಗುತ್ತದೆ ಎಂಬ ವಿಚಾರ ಬಿಸಿಸಿಐ ಮೂಲಗಳಿಂದ ಹೊರಬಿದ್ದಿದೆ. ಇದು ಕಿಂಗ್ ಅಭಿಮಾನಿಗಳು ಸಹಜವಾಗಿಯೇ ಬೇಸರಗೊಂಡಿದ್ದಾರೆ.

2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಭಾರತದ ಪ್ರಮುಖ ಅಸ್ತ್ರವಾಗಿದ್ದರು. 2024ರಲ್ಲಿ ನಡೆಯುವ ಟಿ-20 ವಿಶ್ವಕಪ್, ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ವರದಿಗಳ ಪ್ರಕಾರ, ವೆಸ್ಟ್ ಇಂಡೀಸ್‌ನ ನಿಧಾನಗತಿಯ ಪಿಚ್ ಕೊಹ್ಲಿಗೆ ಆಗಿ ಬರುವುದಿಲ್ಲ ಎಂದು ಬಿಸಿಸಿಐ ನಂಬಿದೆ ಎನ್ನಲಾಗಿದೆ.

ಹೀಗಾಗಿ ಕೊಹ್ಲಿ ಬದಲಿಗೆ ಯುವಕರಿಗೆ ದಾರಿ ಮಾಡಿಕೊಡಲು ಬಿಸಿಸಿಐ ನಿರ್ಧರಿಸಿದೆ. ಯುವಕರಿಗೆ ಅವಕಾಶ ನೀಡುವಂತೆ ವಿರಾಟ್ ಕೊಹ್ಲಿಯನ್ನು ಮನವೊಲಿಸುವ ಜವಾಬ್ದಾರಿಯನ್ನು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​ಗೆ ಬಿಸಿಸಿಐ ವಹಿಸಿದೆ ಎಂದು ಹೇಳಲಾಗಿದೆ.

ಕೊಹ್ಲಿ ಆಡ್ಬೇಕು ಅಂದ್ರೆ ಏನ್ಮಾಡ್ಬೇಕು?
ಐಪಿಎಲ್ ಆಟದ ಮೂಲಕ ಟಿ20 ವಿಶ್ವಕಪ್‌ಗೆ ಪ್ರವೇಶಿಸಲು ಕೊಹ್ಲಿಗೆ ಇರುವ ಏಕೈಕ ಮಾರ್ಗ. ಐಪಿಎಲ್ 2024 ರಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರನ್ನು ವಿಶ್ವಕಪ್‌ ತಂಡಕ್ಕೆ ಸೇರಿಸಿಕೊಳ್ಳಬಹುದು. ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರಂತಹ ಆಟಗಾರರು ತಂಡವನ್ನು ಮುನ್ನಡೆಸಲು ಹೆಚ್ಚು ಸೂಕ್ತರು ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಕೊಹ್ಲಿಗೆ ಟಿ-20 ವಿಶ್ವಕಪ್​ನ ಡೋರ್ ಕ್ಲೋಸ್ -ಬಿಸಿಸಿಐ ಮೂಲಗಳಿಂದ ಶಾಕಿಂಗ್ ನ್ಯೂಸ್

https://newsfirstlive.com/wp-content/uploads/2024/01/KOHLI_BNG.jpg

Load More