ಮತ್ತೆ ಕಿಂಗ್ ಕೊಹ್ಲಿಯೇ ನಾಯಕ..! ಇಂದು ಬಿಗ್​​ ಸ್ಟೇಟ್​ಮೆಂಟ್ ಮಾಡಲಿದೆ ಆರ್​ಸಿಬಿ

author-image
Ganesh
Updated On
RCB: ಪ್ಲೇ ಆಫ್​ಗೆ ಹೋಗಲು ಆರ್​ಸಿಬಿಗಿರುವ ಕಠಿಣ   ಸವಾಲುಗಳಿವು! ಇದರಲ್ಲಿ ಪಾಸ್​ ಆದ್ರೆ ‘ಕಪ್​ ನಮ್ದೇ’
Advertisment
  • ಆರ್​ಸಿಬಿ ಮುಂದೆ ಕೊಹ್ಲಿ ಇಟ್ಟ ಡಿಮ್ಯಾಂಡ್ ಏನು?
  • ತಂಡದಲ್ಲಿ ಆರ್​ಸಿಬಿ ಯಾರನ್ನೆಲ್ಲ ಉಳಿಸಿಕೊಳ್ಳಬಹುದು?
  • ನಾಯಕರಾಗಿ ಕೊಹ್ಲಿ ಮಾಡಿದ ಸಾಧನೆ ಏನು?

ಐಪಿಎಲ್-2025 ಮೆಗಾ ಹರಾಜಿಗೂ ಮುಂಚೆಯೇ ಆರ್‌ಸಿಬಿ ಮ್ಯಾನೇಜ್ಮೆಂಟ್​ ವಿರಾಟ್ ಕೊಹ್ಲಿ ದೊಡ್ಡ ಬೇಡಿಕೆ ಒಂದನ್ನು ಇಟ್ಟಿದ್ದಾರೆ ಎಂಬ ಸುದ್ದಿ ಸಿಕ್ಕಿದೆ. ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಲು ಬಯಸಿದ್ದಾರಂತೆ.

2013 ರಿಂದ 2021 ರವರೆಗೆ ಕೊಹ್ಲಿ ಆರ್‌ಸಿಬಿ ನಾಯಕರಾಗಿದ್ದರು. 2022 ರಿಂದ ದಕ್ಷಿಣ ಆಫ್ರಿಕಾದ ದಂತಕಥೆ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಕೊಹ್ಲಿ ಮತ್ತೆ ಬೆಂಗಳೂರು ತಂಡದ ನಾಯಕರಾಗುವುದು ಬಹುತೇಕ ಖಚಿತ. 2021ರ ಋತುವಿನ ಕೊನೆಯಲ್ಲಿ ಕೊಹ್ಲಿ RCB ನಾಯಕತ್ವವನ್ನು ತೊರೆದಾಗ ಟ್ರೋಫಿ ಗೆಲ್ಲಲು ವಿಫಲರಾಗಿದ್ದರು. ಅದೇ ಕಾರಣಕ್ಕೆ ನಾಯಕತ್ವವನ್ನು ತೊರೆದಿದ್ದರು ಎಂಬ ವದಂತಿ ಇದೆ.

ಇದನ್ನೂ ಓದಿ:ಇದು CSK ಫ್ಯಾನ್ಸ್​ಗೆ ಆಘಾತದ ಸುದ್ದಿ; 14 ವರ್ಷಗಳ ಜರ್ನಿ.. ಚೆನ್ನೈಗೆ ತೊರೆಯಲು ಮುಂದಾದ ಜಡೇಜಾ? 

ಫಾಫ್ ಡು ಪ್ಲೆಸಿಸ್ ಕೈಗೆ ಕ್ಯಾಪ್ಟನ್ಸಿ ಬಂದ ನಂತರವೂ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಡು ಪ್ಲೆಸಿಸ್ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಪ್ಲೇಆಫ್‌ಗೆ ಒಮ್ಮೆ ಮಾತ್ರ ತಲುಪಿದೆ.

ನಾಯಕರಾಗಿ ಕೊಹ್ಲಿ..!
ಕೊಹ್ಲಿ 2011ರಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. 2013ರಲ್ಲಿ ಪೂರ್ಣಾವಧಿಗೆ ನಾಯಕತ್ವವನ್ನು ಪಡೆದರು. ಅವರ ಅಡಿಯಲ್ಲಿ, RCB 143 ಪಂದ್ಯಗಳನ್ನು ಆಡಿದೆ. ಅದರಲ್ಲಿ 66 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 70 ಪಂದ್ಯಗಳಲ್ಲಿ ಸೋತಿದ್ದು 3 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದೆ. ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು RCB ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:ಚೆನ್ನೈ, ಮುಂಬೈ ಸಂಭಾವ್ಯ ರಿಟೆನ್ಯನ್ ಲಿಸ್ಟ್.. 5 ಆಟಗಾರರ ಮೇಲೆ ಆರ್​ಸಿಬಿ ಕಣ್ಣು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment