ಭಾರತ ತಂಡದಲ್ಲಿ ಸ್ಥಾನ ಪಡೆಯಲು ಏನು ಮಾಡ್ಬೇಕು? ಬಾಲಕನ ಪ್ರಶ್ನೆಗೆ ಕೊಹ್ಲಿ ಅದ್ಭುತ ಉತ್ತರ

author-image
Ganesh
Updated On
ಅಚ್ಚರಿ ನಿರ್ಧಾರಕ್ಕೆ ಬಂದ ಬಿಸಿಸಿಐ.. ಕಿಂಗ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಪಟ್ಟ..!
Advertisment
  • 2012ರ ಬಳಿಕ ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ
  • ಕೊಹ್ಲಿ ಆಟ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತುರ
  • ನಾಳೆಯಿಂದ ದೆಹಲಿ ಪರ ವಿರಾಟ್ ಕೊಹ್ಲಿ ದರ್ಬಾರ್

ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕೊಹ್ಲಿ ಸುದ್ದಿಯಲ್ಲಿದ್ದಾರೆ. ಜನವರಿ 30 ರಿಂದ ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಕೊಹ್ಲಿ ದೆಹಲಿ ಪರ ಆಡಲಿದ್ದಾರೆ. ಪಂದ್ಯಕ್ಕೂ ಮುನ್ನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿದ್ದಾರೆ.

ಪ್ರ್ಯಾಕ್ಟಿಸ್ ವೇಳೆ ಮಗುವೊಂದು ಕೊಹ್ಲಿ ಬಳಿ ಬಂದಿದೆ. ಮಗುವಿನ ಜೊತೆ ಕೊಹ್ಲಿ ಮಾತನಾಡಿದ್ದಾರೆ. ಆಗ ಆ ಮಗು, ಭಾರತೀಯ ಕ್ರಿಕೆಟಿಗನಾಗಲು ಏನು ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಕೊಹ್ಲಿ ಅದ್ಭುತ ಉತ್ತರ ನೀಡಿದ್ದಾರೆ. ಈ ಪ್ರಶ್ನೆಯನ್ನು ಕೊಹ್ಲಿಯ ಬಾಲ್ಯದ ಗೆಳೆಯನ ಮಗ ಕೇಳಿದ್ದಾನೆ.

ಇದನ್ನೂ ಓದಿ: IND vs ENG: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ಹಾರ್ದಿಕ್ ಪಾಂಡ್ಯ..?

ಕೊಹ್ಲಿ ಉತ್ತರ ಹೀಗಿತ್ತು..

‘ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು. ಅಪ್ಪಾ ಪ್ರ್ಯಾಕ್ಟೀಸ್ ಮಾಡಿಸಿ, ಕೋಚ್​ ನೀಡಿ ಅಂತಾ ಕೇಳಬಾರದು. ನೀವೇ ಬೆಳಿಗ್ಗೆ ಎದ್ದು ಅಭ್ಯಾಸಕ್ಕೆ ಹೋಗಬೇಕು. ನೀವೇ ತರಬೇತಿಗೆ ಹೋಗಬೇಕು. ಯಾರಾದರೂ ಒಂದು ಗಂಟೆ ಅಭ್ಯಾಸ ಮಾಡಿದರೆ, ನೀವು ಎರಡು ಗಂಟೆ ಅಭ್ಯಾಸ ಮಾಡುತ್ತಿರಿ. ಯಾರಾದರೂ ಫಿಫ್ಟಿ ಮಾಡಿದರೆ, ನೀವು ನೂರು ಮಾಡುತ್ತೀರಿ, ಯಾರಾದರೂ ನೂರು ಮಾಡಿದರೆ, ನೀವು ಡಬಲ್ ಶತಕ ಮಾಡುತ್ತೀರಿ. ಮಾನದಂಡವನ್ನು ಡಬಲ್ ಮಾಡಿ, ನಂತರ ಲೆವೆಲ್ ಅಪ್ ಮಾಡಿ. ಸರಿ? ಕಷ್ಟಪಟ್ಟು ಕೆಲಸ ಮಾಡಿ ಮತ್ತು ಆಟವನ್ನು ಆನಂದಿಸಿ..

ರಣಜಿ ಟ್ರೋಫಿಯಲ್ಲಿ ಕೊಹ್ಲಿ

ನವೆಂಬರ್ 2012ರಲ್ಲಿ ಕೊಹ್ಲಿ ಕೊನೆಯ ಬಾರಿಗೆ ರಣಜಿ ಪಂದ್ಯ ಆಡಿದ್ದರು. 12 ವರ್ಷಗಳ ನಂತರ ಟೂರ್ನಿಯಲ್ಲಿ ಪುನರಾಗಮನ ಮಾಡುತ್ತಿದ್ದಾರೆ. ರಣಜಿ ಪಂದ್ಯದಲ್ಲಿ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಸೂರ್ಯ; ಏನಂದ್ರು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment