ಆಸ್ಟ್ರೇಲಿಯಾ ಬೌಲರ್​ಗಳ ಬೆಂಡೆತ್ತಿದ ವಿರಾಟ್; ಕೊಹ್ಲಿಯಿಂದ ಭರ್ಜರಿ ಬ್ಯಾಟಿಂಗ್​

author-image
Ganesh Nachikethu
Updated On
ಕೊಹ್ಲಿ, ರಾಹುಲ್ ಜವಾಬ್ದಾರಿ ಆಟಕ್ಕೆ ಒಲಿದ ಗೆಲುವು.. ಫೈನಲ್​​ನಲ್ಲಿ ಪ್ರತಿಸ್ಪರ್ಧಿ ಯಾರು..?
Advertisment
  • ಸದ್ಯ ನಡೆಯುತ್ತಿರೋ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್ ಪಂದ್ಯ
  • ಟೀಮ್​ ಇಂಡಿಯಾಗೆ ಆಸ್ಟ್ರೇಲಿಯಾ ತಂಡ 265 ರನ್​ಗಳ ಟಾರ್ಗೆಟ್​
  • ಟೀಮ್​​ ಇಂಡಿಯಾ ಸ್ಟಾರ್​ ಕ್ರಿಕೆಟರ್​​ ವಿರಾಟ್​ ಕೊಹ್ಲಿ ಅಬ್ಬರದ ಬ್ಯಾಟಿಂಗ್​​

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರೋ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಅಬ್ಬರಿಸಿದರು. ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ಟೀಮ್​​ ಇಂಡಿಯಾ ಸ್ಟಾರ್​ ಕ್ರಿಕೆಟರ್​​ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ರು.

ಶುಭ್ಮನ್​ ಗಿಲ್​ ವಿಕೆಟ್​ ಬಿದ್ದ ನಂತರ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿದ್ರು. ಆಸ್ಟ್ರೇಲಿಯಾ ತಂಡದ ಬೌಲರ್​ಗಳನ್ನು ಕಾಡಿ ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದ್ರು. ತಾನು ಎದುರಿಸಿದ 96 ಬಾಲ್​ನಲ್ಲಿ 84 ರನ್​ ಚಚ್ಚಿದ್ರು. ಈ ಪೈಕಿ 5 ಬೌಂಡರಿಗಳು ಸೇರಿವೆ.

ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ರೋಚಕ ಪಂದ್ಯದಲ್ಲೂ ತಾಳ್ಮೆಯ ಬ್ಯಾಟಿಂಗ್​ ಮಾಡಿ ಶತಕ ಸಿಡಿಸಿದ್ರು. ಈ ಮೂಲಕ ಭಾರತ ತಂಡವನ್ನು ಗೆಲ್ಲಿಸಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ 49.3 ಓವರ್​ನಲ್ಲಿ 264 ರನ್​ಗಳಿಗೆ ಆಲೌಟ್​ ಆಗಿದೆ. ಭಾರತ ತಂಡದ ಪರ ಮೊಹಮ್ಮದ್​ ಶಮಿ 3 ವಿಕೆಟ್​ ತೆಗೆದರು. ಹಾಗೆಯೇ ವರುಣ್​ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆದರು. ಹಾರ್ದಿಕ್​​​ ಪಾಂಡ್ಯ, ಅಕ್ಷರ್​ ಪಟೇಲ್​ ತಲಾ 1 ವಿಕೆಟ್​ ಕಿತ್ತರು.

ಇದನ್ನೂ ಓದಿ:ರೋಹಿತ್​​, ಗಂಭೀರ್​ ನಂಬಿಕೆ ಮಣ್ಣುಪಾಲು; ಸುವರ್ಣಾವಕಾಶ ಕೈ ಚೆಲ್ಲಿದ ಶುಭ್ಮನ್​ ಗಿಲ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment