newsfirstkannada.com

ವಿರಾಟ್​ ಕೊಹ್ಲಿ ನನ್ನ ಮೇಲೆ ಉಗುಳಿದ್ದರು.. ಮಾಜಿ ನಾಯಕನಿಂದ ಗಂಭೀರ ಆರೋಪ!

Share :

Published January 30, 2024 at 2:28pm

  ವಿರಾಟ್​ ಕೊಹ್ಲಿ ಉಗುಳಿದ್ದು ನಿಜಾನಾ?

  ಕೊಹ್ಲಿ ಆ ಆಟಗಾರನ ಬಳಿ ಕ್ಷಮೆ ಕೇಳಲು ಕಾರಣ ಯಾರು?

  ಅಂದು ವಿರಾಟ್​​ ಕೊಹ್ಲಿ 3 ಗಂಟೆಯವರೆಗೂ ಕುಡಿದಿದ್ದರಂತೆ!

ಟೀಂ ಇಂಡಿಯಾದ ಸೂಪರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ವಿರುದ್ಧ ಮಾಜಿ ನಾಯಕರರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಟೆಸ್ಟ್​ ಪಂದ್ಯದ ವೇಳೆ ನನ್ನ ಮೇಲೆ ಉಗುಳಿದ್ದರು ಎಂದು ಹೇಳಿದ್ದಾರೆ. ಅಂದಹಾಗೆಯೇ ಈ ಆರೋಪ ಮಾಡಿರುವ ವ್ಯಕ್ತಿ ಯಾರು ಗೊತ್ತಾ?

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್​ ಎಲ್ಗರ್​​ ಈ ಆರೋಪ ಮಾಡಿದ್ದು, ಈ ಘಟನೆ ಯಾವಾಗ ನಡೆಯಿತು ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಇದು 2015ರ ಭಾರತ ಪ್ರವಾಸದ ವೇಳೆ ನಡೆದಿರಬಹುದೆಂದು ಮೂಲಗಳು ತಿಳಿಸಿವೆ.

ಡೀನ್​ ಎಲ್ಗರ್ ಪಾಡ್​ಕಾಸ್ಟ್​ವೊಂದರಲ್ಲಿ ಮಾತನಾಡುತ್ತಾ, ಈ ವಿಚಾರ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್​ ಕ್ರಿಸ್​ ಮೊರೀಸ್​ ಹಾಗೂ ರಗ್ಭಿ ಆಟಗಾರ ಜೀನ್​ ಡಿ ವಿಲಿಯರ್ಸ್​ ಜೊತೆಗೆ ಮಾತನಾಡುತ್ತಿರುವ ವೇಳೆ ಕೊಹ್ಲಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ.

2 ವರ್ಷದ ಬಳಿಕ ಸಾರಿ ಕೇಳಿದ ವಿರಾಟ್​

ಬಳಿಕ ಮಾತನಾಡುತ್ತಾ ಡೀನ್​ ಎಲ್ಗರ್ ಈ ಘಟನೆ ನಡೆದ 2 ವರ್ಷದ ಬಳಿಕ ಕೊಹ್ಲಿ ನನ್ನ ಬಳಿ ಕ್ಷಮೆಯಾಚಿಸಿದ್ದಾರೆ. ಎಬಿ ಡಿ ವಿಲಿಯರ್ಸ್​ ಅವರಿಂದಾಗಿ ಕೊಹ್ಲಿ ನನ್ನ ಬಳಿ ಸಾರಿ ಕೇಳಿದ್ದಾರೆ ಎಂದು ಹೇಳಿದ್ದಾರೆ.

ಎಬಿ ಡಿಗೆ ಈ ವಿಚಾರ ಗೊತ್ತಾಯ್ತು

ನನ್ನ ಮೇಲೆ ಕೊಹ್ಲಿ ಉಗುಳಿದ ವಿಚಾರ ಎಬಿ ಡಿಗೆ ಗೊತ್ತಾಗಿದೆ. ಬಳಿಕ ಐಪಿಎಲ್​ನಲ್ಲಿ ಈ ವಿಚಾರವನ್ನು ಕೊಹ್ಲಿ ಬಳಿ ಕೇಳಿದ್ದಾರೆ. ಬಳಿಕ ದ.ಆಫ್ರಿಕಾದ ಬಂದಾಗ ವಿರಾಟ್​ ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಅಂದು ನಾವು ಬೆಳಗ್ಗಿನ ಜಾವ 3 ಗಂಟೆ ವರೆಗೂ ಕುಡಿದಿದ್ದೆವು ಎಂದು ಹೇಳಿದ್ದಾರೆ.

3 ಗಂಟೆಯವರೆಗೂ ನಾನು ಕೊಹ್ಲಿ ಕುಡಿದಿದ್ದೆವು

ಡೀನ್​ ಎಲ್ಗರ್ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ. ಭಾರತದ ವಿರುದ್ಧವೇ ಇವರು ಕೊನೆಯ ಪಂದ್ಯವನ್ನು ಆಡಿದ್ದರು. ಆದರೆ ಪಂದ್ಯ ಮುಗಿದ ಬಳಿಕ ವಿರಾಟ್​ ತನ್ನ ಜೆರ್ಸಿಯನ್ನು ಡೀನ್​ ಎಲ್ಗರ್​ಗೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿರಾಟ್​ ಕೊಹ್ಲಿ ನನ್ನ ಮೇಲೆ ಉಗುಳಿದ್ದರು.. ಮಾಜಿ ನಾಯಕನಿಂದ ಗಂಭೀರ ಆರೋಪ!

https://newsfirstlive.com/wp-content/uploads/2024/01/KOHLI_BNG.jpg

Load More