/newsfirstlive-kannada/media/post_attachments/wp-content/uploads/2025/02/Virat-Kohli-On-Rcbcaptain-1.jpg)
ಆರ್‌ಸಿಬಿ ನೂತನ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ರಜತ್ ಪಾಟೀದಾರ್‌ಗೆ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಆರ್‌ಸಿಬಿ ಫ್ರಾಂಚೈಸಿಯ ನಿರ್ಧಾರವನ್ನು ವಿರಾಟ್ ಕೊಹ್ಲಿ ಸೇರಿದಂತೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ರಜತ್ ಪಾಟೀದಾರ್ ಕ್ಟಾಪ್ಟನ್ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ವಿಶೇಷ ಸಂದೇಶ ನೀಡಿದ್ದಾರೆ. ಮೊದಲಿಗೆ ರಜತ್ ಪಾಟೀದಾರ್ ಅವರಿಗೆ ಶುಭಾಶಯ ತಿಳಿಸಿದ ಕೊಹ್ಲಿ, ಆರ್‌ಸಿಬಿ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ: Rajat Patidar: ಆರ್ಸಿಬಿಗೆ ರಜತ್ ಪಾಟೀದಾರ್ ನಾಯಕ.. ಈ ಆಯ್ಕೆ ಹಿಂದಿದೆ 7 ಕಾರಣಗಳು..!
ರಜತ್ ಪಾಟೀದಾರ್ ಅದ್ಭುತ ಆಟದ ಮೂಲಕವೇ ಆರ್‌ಸಿಬಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಫ್ರಾಂಚೈಸಿ ಇಟ್ಟಿರುವ ನಂಬಿಕೆಯಿಂದ ನಾಯಕನ ಸ್ಥಾನ ಸಿಕ್ಕಿದೆ.
ನಾನು ಸದಾ ಕ್ಯಾಪ್ಟನ್ ರಜತ್ ಪಾಟೀದಾರ್ ಬೆನ್ನೆಲುಬಾಗಿ ಸದಾ ಇರುತ್ತೇನೆ. ನಾನೊಬ್ಬನೇ ಅಲ್ಲ ಆರ್‌ಸಿಬಿಯ ಇಡೀ ತಂಡದ ಸದಸ್ಯರು ನಿಮ್ಮ ಜೊತೆಗಿರುತ್ತದೆ. ಆರ್‌ಸಿಬಿಯಲ್ಲಿ ನೀವು ತೋರಿದ ಅದ್ಭುತ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದು, ಫ್ರಾಂಚೈಸಿಯ ಬೆಂಬಲದಿಂದ ಬೆಳವಣಿಗೆ ಸಾಧಿಸುತ್ತಿದ್ದೀರಿ ಎಂದಿದ್ದಾರೆ.
ಕೊಹ್ಲಿ ಮಾತಿಗೆ ಮೆಚ್ಚುಗೆ!
ವಿರಾಟ್ ಕೊಹ್ಲಿ ಅವರ ಈ ಮಾತಿಗಳಿಗೆ ಆರ್‌ಸಿಬಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಬ್ಬ ಕಿರಿಯ ಆಟಗಾರನ ಆಯ್ಕೆ ಮತ್ತು ಬೆಂಬಲಿಸಿದ ವಿರಾಟ್ ಕೊಹ್ಲಿಯ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ಬಹಳ ನೇರವಾಗಿ ಕ್ಟಾಪ್ಟನ್ ರಜತ್ ಪಾಟೀದಾರ್ ಬಗ್ಗೆ ಮಾತನಾಡಿರುವುದಕ್ಕೆ ಕೊಹ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ