/newsfirstlive-kannada/media/post_attachments/wp-content/uploads/2024/12/KOHLI-SPITTING.jpg)
ವಿಶ್ವ ಕಂಡ ಅಗ್ರೆಸ್ಸೀವ್ ಕ್ರಿಕೆಟಿಗರಲ್ಲಿ ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇವರ ಈ ಸ್ವಾಭಾವವೇ ಒಮ್ಮೊಮ್ಮೆ ದೊಡ್ಡ ವಿವಾದಕ್ಕೆ ಕಾರಣವಾಗಿ ಬಿಡುತ್ತದೆ. ಸದ್ಯ ಮೆಲ್ಬೊರ್ನೊ ಕ್ರಿಕೆಟ್ ಗ್ರೌಂಡ್​ನಲ್ಲಿ ನಾಲ್ಕನೇ ಟೆಸ್ಟ್​ ಮೊದಲ ದಿನದಾಟದಂದು ಸ್ಯಾಮ್ ಭುಜಕ್ಕೆ ಡಿಕ್ಕಿ ಹೊಡೆದು ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು ಕೊಹ್ಲಿ. ಈಗ ಅದರ ಬೆನ್ನಲ್ಲೇ ಮತ್ತೊಂದು ವಿಡಿಯೊ ವೈರಲ್ ಆಗುತ್ತಿದೆ. ಫಿಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಗಳತ್ತ ಉಗಿಯುವ ವಿಡಿಯೋವೊಂದು ವೈರಲ್ ಆಗುತ್ತಿದ್ದು. ವಿರಾಟ್ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ.
ಫಿಲ್ಡಿಂಗ್ ಮಾಡುತ್ತಿದ್ದ ವೇಳೆ ಮೆಲ್ಬರ್ನೊ ಕ್ರಿಕೆಟ್ ಗ್ರೌಂಡ್​​ನಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳು ವಿರಾಟ್​ನನ್ನು ಕೆಣಕಿದ್ದಾರೆ. ಜೋರಾಗಿ ಕೂಗಿ ಏನೇನೋ ಹೇಳುವ ಮೂಲಕ ಕೊಹ್ಲಿಯ ಸಹನೆಯನ್ನು ಕೆಣಕಿದ್ದಾರೆ. ಸಾಲು ಸಾಲು ವೈಫಲ್ಯಗಳಿಂದ ಮೊದಲೇ ಹತಾಶೆಗೊಂಡಿರುವ ಕ್ರಿಕೆಟಿಗ ತನ್ನ ಸಹನೆಯನ್ನು ಕಳೆದುಕೊಂಡು ಅಭಿಮಾನಿಗಳತ್ತ ಉಗುಳಿದ್ದಾರೆ. ಕೊಹ್ಲಿಯ ಈ ಒಂದು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು. ಹಲವರು ಕೊಹ್ಲಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ರೋಹಿತ್​ ಶರ್ಮಾ; ಜವಾಬ್ದಾರಿ ಮರೆತ ಕ್ಯಾಪ್ಟನ್
ಈಗಾಗಲೇ ಮೆಲ್ಬರ್ನೊದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮೊದಲ ದಿನ ಸ್ಯಾಮ್ ಕಾನ್​​ಸ್ಟಾಸ್​ ಭುಜಕ್ಕೆ ಡಿಕ್ಕಿ ಹೊಡೆದ ಕೊಹ್ಲಿ ವಿರುದ್ಧ, ಮ್ಯಾಚ್​ ಸಂಭಾವನೆಯ ಒಟ್ಟು ಶೇಕಡಾ 20 ರಷ್ಟು ದಂಡವನ್ನು ಹಾಕಲಾಗಿದೆ. ಕೊಹ್ಲಿ ನಡತೆ ಕ್ರೀಡಾಸ್ಪೂರ್ತಿಗೆ ವಿರುದ್ಧವಾಗಿದೆ ಎಂಬ ಆರೋಪದಲ್ಲಿ ಈ ದಂಡವನ್ನು ಹಾಕಲಾಗಿದ್ದು. ಇದರ ಬೆನ್ನಲ್ಲೆ ಈಗ ಮತ್ತೊಂದು ವಿವಾದವನ್ನು ವಿರಾಟ್ ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ:IND vs AUS: ದುಃಖದಲ್ಲಿ ಟೀಂ ಇಂಡಿಯಾ.. ಕಪ್ಪುಪಟ್ಟಿ ಧರಿಸಿ ಮೈದಾನಕ್ಕೆ ಇಳಿದ ಆಟಗಾರರು..
Kohli replies to fans who were booing him near the boundary pic.twitter.com/tDSoH6ndfB
— Div🦁 (@div_yumm)
Kohli replies to fans who were booing him near the boundary pic.twitter.com/tDSoH6ndfB
— Div🦁 (@div_yumm) December 26, 2024
">December 26, 2024
ಫಿಲ್ಡಿಂಗ್ ಮಾಡುವಾಗ ಪೆವಿಲಿನ್​ನಲ್ಲಿ ನೆರೆದಿದ್ದ ಜನರು ತೀರ ಅನಿಸುವ ಮಟ್ಟಕ್ಕೆ ಕೊಹ್ಲಿಯನ್ನು ಕಾಲೆಳೆದ ಕಾರಣ ಈ ಒಂದು ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಕೊಹ್ಲಿ ಮಾತ್ರ ನಾನು ಉಗಿದಿದ್ದು ಚಿವಿಂಗಮ್ ಎಂದು ಸಮರ್ಥನೆ ಕೊಟ್ಟಿದ್ದಾರೆ. ಆದ್ರೆ ವೈರಲ್ ಆದ ವಿಡಿಯೋದಲ್ಲಿ ಕೊಹ್ಲಿ ಫ್ಯಾನ್ಸ್​ಗಳತ್ತ ಉಗಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿದ್ದು, ಟೀಕೆಗಳನ್ನು ಸ್ವೀಕರಿಸುವುದನ್ನು ಕೊಹ್ಲಿ ಕಲಿಯಲಿಲ್ವಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us