/newsfirstlive-kannada/media/post_attachments/wp-content/uploads/2025/06/RCB-11.jpg)
ಕಪ್ ಗೆದ್ದ ಖುಷಿಯಲ್ಲಿ ಮಾತನಾಡಿರುವ ಕಿಂಗ್ ವಿರಾಟ್ ಕೊಹ್ಲಿ.. ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ, ಅಭಿಮಾನಿಗಳಿಗೂ ಅಷ್ಟೇ ಮುಖ್ಯ ಅಂತಾ ಭಾವುಕರಾಗಿದ್ದಾರೆ.
ಈ ದಿನ ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಕೊನೆಯ ಬಾಲ್ ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಎಬಿ ಮಾಡಿದ್ದು ಅದ್ಭುತ. ಪಂದ್ಯಕ್ಕೂ ಮೊದಲು ಅವರಿಗೆ ನಾನು ಇದನ್ನು ಹೇಳಿದ್ದೆ. ಇದರಲ್ಲಿ ನಿಮ್ಮದೂ ಕೊಡುಗೆ ಇದೆ. ಅವರು ನಮ್ಮೊಂದಿಗೆ ಸಂಭ್ರಮಿಸಬೇಕು ಅಂತಾ ಬಯಸಿದ್ದೆ..
ಇದನ್ನೂ ಓದಿ: 18 ವರ್ಷದ ಕನಸು ಕೊನೆಗೂ ನನಸು.. ಟ್ರೋಫಿ ಗೆಲ್ತಿದ್ದಂತೆಯೇ ಕೊಹ್ಲಿ ಕಣ್ಣೀರು.. VIDEO
ಅವರು ನಮ್ಮೊಂದಿಗೆ ವೇದಿಕೆಯಲ್ಲಿರಲು ಅರ್ಹರು. ಈ ತಂಡಕ್ಕೆ ನಿಷ್ಠನಾಗಿ ಉಳಿದಿದ್ದೇನೆ. ಏನೇ ಇರಲಿ. ನಾನು ಈ ತಂಡಕ್ಕೆ ಅಂಟಿಕೊಂಡೆ. ನನ್ನ ಹೃದಯ ಬೆಂಗಳೂರಿನೊಂದಿಗಿದೆ. ನನ್ನ ಆತ್ಮ ಬೆಂಗಳೂರಿನೊಂದಿಗಿದೆ. ನಾನು ಐಪಿಎಲ್ ಆಡುವವರೆಗೂ ಆಡುವ ತಂಡ ಇದು. ಇಂದು ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ. ಈ ಆಟವನ್ನು ಹೆಚ್ಚು ವರ್ಷಗಳ ಕಾಲ ಆಡಲು ಅವಕಾಶ ಇದೆ.
ಹರಾಜಿನ ನಂತರ ಬಹಳಷ್ಟು ಜನ ನಮ್ಮನ್ನ ಪ್ರಶ್ನಿಸಿದರು. ನನ್ನ ಬಗ್ಗೆ ಈಗಾಗಲೇ ಬಹಳಷ್ಟು ಮಾತನಾಡಲಾಗಿದೆ. ಈ ಗೆಲುವು ಬೆಂಗಳೂರಿಗೆ ಸೇರಿದೆ. ಈ ಕ್ಷಣವು ನನ್ನ ವೃತ್ತಿಜೀವನದ ಅತ್ಯುತ್ತಮ ಕ್ಷಣ ಎಂದು ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ.
ಇದನ್ನೂ ಓದಿ: ‘ಈ ಸಲ ಕಪ್ ನಮ್ದೇ ಆಗಿದೆ..’ ಅಭಿಮಾನಿಗಳ ಸಂಭ್ರಮ ಹೇಗಿದೆ..? Photos
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ