/newsfirstlive-kannada/media/post_attachments/wp-content/uploads/2025/02/Virat-kohli.jpg)
ಟೀಂ ಇಂಡಿಯಾ ನಿನ್ನೆ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿತು. ಟಾಸ್ ಗೆದ್ದು ಇಂಗ್ಲೆಂಡ್ ನೀಡಿದ್ದ 249 ರನ್ಗಳ ಗುರಿಯನ್ನು ಭಾರತ ಕೇವಲ 38.4 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಅದು ವಿರಾಟ್ ಕೊಹ್ಲಿಯನ್ನು ಪ್ಲೇಯಿಂಗ್-11ನಿಂದ ಹೊರಗಿಟ್ಟಿರೋದು. ಯಾಕೆ ವಿರಾಟ್ ಕೊಹ್ಲಿ ವಿಚಾರದಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಅಂಥ ನಿರ್ಧಾರ ಯಾಕೆ ಕೈಗೊಳ್ತು ಎಂಬ ಪ್ರಶ್ನೆ ಶುರುವಾಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಇದನ್ನೂ ಓದಿ: Muda Case; ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ.. ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ
ಕ್ಯಾಪ್ಟನ್ ರೋಹಿತ್ ಶರ್ಮಾ ನೀಡಿದ ಮಾಹಿತಿ ಪ್ರಕಾರ.. ವಿರಾಟ್ ಕೊಹ್ಲಿ ಅವರಿಗೆ ಮಂಡಿ ನೋವು ಸಮಸ್ಯೆ ಹೆಚ್ಚಾಗಿದೆ. ಅವರು ಮಂಡಿ ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ಪಂದ್ಯಕ್ಕೂ ಮುನ್ನ ಕೊಹ್ಲಿ ಮಂಡಿಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರು. ಸದ್ಯ ಕೊಹ್ಲಿ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದೆ. ಚಿಕಿತ್ಸೆಗಾಗಿ ಅವರು ಬೆಂಗಳೂರಿಗೆ ಬರಲಿದ್ದಾರಾ? ಅಥವಾ ಎರಡನೇ ಪಂದ್ಯವನ್ನು ಆಡಲು ಕಟಕ್ಗೆ ಹೋಗಲಿದ್ದಾರೆ ಅನ್ನೋದು ಗೊತ್ತಾಗಬೇಕಿದೆ.
ಇದನ್ನೂ ಓದಿ: Sandalwood; ಜೋರು ಮದುವೆ ಸಂಭ್ರಮ.. ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ, ನಟಿಯರು; ಹೇಗಿದೆ ಸಡಗರ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್