VIDEO: ‘ರಾಹುಲ್​​ ಮಾತು ಕೇಳು’- ರೋಹಿತ್​ ಜತೆ ಕೊಹ್ಲಿ ಜಗಳ; ಮೈದಾನದಲ್ಲಿ ಆಗಿದ್ದೇನು?

author-image
Ganesh Nachikethu
Updated On
KL ರಾಹುಲ್​​, ರೋಹಿತ್​ ಮಧ್ಯೆ ಬಿರುಕು; ಇಬ್ಬರ ಮಧ್ಯೆ ಜಗಳ ತಂದಿಟ್ಟ ಸ್ಟಾರ್​ ಕ್ರಿಕೆಟರ್​ ಇವರೇ!
Advertisment
  • ಮೈದಾನದಲ್ಲೇ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮಧ್ಯೆ ಜಗಳ!
  • ಕೆ.ಎಲ್​ ರಾಹುಲ್​ ಮಾತು ಕೇಳು ಎಂದು ರೋಹಿತ್​ಗೆ ಕೊಹ್ಲಿ ತಾಕೀತು
  • ಕೊನೆಗೂ ತನ್ನ ನಿರ್ಧಾರದಿಂದ ಹಿಂದೆ ಸರಿದ ಕ್ಯಾಪ್ಟನ್​ ರೋಹಿತ್​ ಶರ್ಮಾ

ಕೊಲಂಬೋದಾ ಆರ್​​. ಪ್ರೇಮದಾಸ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ, ಶ್ರೀಲಂಕಾ ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಶ್ರೀಲಂಕಾ ಕ್ಯಾಪ್ಟನ್​​ ಚರಿತ್​ ಅಸಲಂಕ ಅವರು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾ ಬೌಲಿಂಗ್​ ಮಾಡುತ್ತಿದೆ.

2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್​ಗಳ ಫಾರ್ಮೇಟ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್​ ಅವರನ್ನು ಬೆಂಚ್​​ ಕಾಯಿಸಿದ್ದು, ಸ್ಟಾರ್​ ವಿಕೆಟ್ ಕೀಪರ್​​ ಕೆ.ಎಲ್​ ರಾಹುಲ್​​ ಕೂಡ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಶ್ರೀಲಂಕಾ ತಂಡವು 13 ಓವರ್​ಗಳಿಗೆ 49 ರನ್​​ ಗಳಿಸಿತ್ತು. ಜತೆಗೆ 2 ವಿಕೆಟ್​ ಕೂಡ ಕಳೆದುಕೊಂಡಿತ್ತು. ಕ್ರೀಸ್​ನಲ್ಲಿ ನಿಸಾಂಗ ಬ್ಯಾಟಿಂಗ್​ ಮಾಡುತ್ತಿದ್ದರು. ಶಿವಂ ದುಬೆ ಎಸೆದ 13ನೇ ಓವರ್​ 2ನೇ ಬಾಲ್​ನಲ್ಲಿ ಎಲ್​ಬಿಡಬ್ಲ್ಯೂ ಆದಂಗೆ ಆಯ್ತು. ಆಗ ರೋಹಿತ್​ ಶರ್ಮಾ ರಿವೀವ್​ ತೆಗೆದುಕೊಳ್ಳಲು ಮುಂದಾದರು.

ಕೆ.ಎಲ್​ ರಾಹುಲ್​​ ವಿಚಾರವಾಗಿ ಕೊಹ್ಲಿ, ರೋಹಿತ್​ ಮಧ್ಯೆ ಜಗಳ..!

ಇನ್ನು, ರಿವೀವ್​ ತೆಗೆದುಕೊಳ್ಳುವುದು ಬೇಡ ಎಂದು ವಿಕೆಟ್​ ಕೀಪರ್​ ಕೆ.ಎಲ್​ ರಾಹುಲ್​​​ ಹೇಳಿದ್ರು. ಅದಕ್ಕೆ ಕ್ಯಾಪ್ಟನ್​ ರೋಹಿತ್​ ಶ್ರೇಯಸ್​ ಅಯ್ಯರ್​​ ಕನ್ವಿನ್ಸ್​ ಆಗಿದ್ದಾರೆ, ಚಾನ್ಸ್​ ಬೇಡ ತೆಗೆದುಕೊಳ್ಳೋಣ ಎಂದರು. ಈ ಸಂದರ್ಭದಲ್ಲಿ ಕೊಹ್ಲಿ ರೋಹಿತ್​​ಗೆ ವಿಕೆಟ್​ ಕೀಪರ್​ ಮಾತು ಕೇಳಬೇಕಾಗುತ್ತದೆ ಎಂದು ರಾಹುಲ್​​​​ಗೆ ಸಪೋರ್ಟ್​ ಮಾಡಿದ್ರು. ನಂತರ ರೋಹಿತ್​​ ಡಿಆರ್​ಎಸ್​ ತೆಗೆದುಕೊಳ್ಳಲಿಲ್ಲ, ಇದರಿಂದ ಟೀಮ್​ ಇಂಡಿಯಾಗೆ ಒಂದು ಡಿಆರ್​ಎಸ್​​ ಉಳಿಯಿತು.

ಇದನ್ನೂ ಓದಿ: ಪಂತ್​ನಿಂದ KL ರಾಹಲ್​​ಗಾಗಿ ಗಂಭೀರ್​, ​ರೋಹಿತ್​ ಮಧ್ಯೆ ಜೋರು ಜಗಳ; ಆಮೇಲೇನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment