ನಿವೃತ್ತಿ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ ವಿರಾಟ್​ ಕೊಹ್ಲಿ; ಈ ಬಗ್ಗೆ ಏನಂದ್ರು?

author-image
Ganesh Nachikethu
Updated On
ಟಿ20 ವಿಶ್ವಕಪ್​​.. ವಿರಾಟ್​ ಕೊಹ್ಲಿಗೆ ಮತ್ತೆ ಶಾಕ್​ ಕೊಟ್ಟ ಬಿಸಿಸಿಐ ಚೀಫ್​​ ಅಜಿತ್​​ ಅಗರ್ಕರ್​​
Advertisment
  • 2025ರ ಚಾಂಪಿಯನ್ಸ್​ ಟ್ರೋಫಿ ಗೆದ್ದ ಟೀಮ್​ ಇಂಡಿಯಾ!
  • ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಭಾರತ ಚಾಂಪಿಯನ್
  • ಭಾರತ ಗೆಲುವಿನಲ್ಲಿ ವಿರಾಟ್​ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ರು

ಇತ್ತೀಚೆಗೆ ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಭಾರತ ತಂಡ ಚಾಂಪಿಯನ್​ ಆಗಿದೆ.

ಟೀಮ್ ಇಂಡಿಯಾದ ಗೆಲುವಿನಲ್ಲಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಪ್ರಮುಖ ಪಾತ್ರವಹಿಸಿದರು. ಪ್ರಶಸ್ತಿ ಗೆಲುವಿನ ನಂತರ ಟೀಮ್ ಇಂಡಿಯಾ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಬೆಂಗಳೂರಿಗೆ ಬಂದಿದ್ದಾರೆ. ಮುಂದಿನ ಭಾನುವಾರ 2025ರ ಐಪಿಎಲ್​ ಸೀಸನ್​ ಶುರುವಾಗಲಿದ್ದು, ಇದಕ್ಕಾಗಿ ಕೊಹ್ಲಿ ಆರ್​​ಸಿಬಿ ಟೀಮ್​ ಸೇರಿಕೊಂಡಿದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಮೌನ ಮುರಿದಿದ್ದಾರೆ.

ಏನಂದ್ರು ಕೊಹ್ಲಿ?

ಇನ್ನು ಕ್ರಿಕೆಟ್‌ ಆನಂದಿಸುತ್ತಿದ್ದೇನೆ. ನಿವೃತ್ತಿಯ ಬಗ್ಗೆ ಯಾವುದೇ ಯೋಚನೆ ಇಲ್ಲ. ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆ ನಾನು ನಿವೃತ್ತಿ ಆಗುತ್ತೇನೆ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ. ನಾನು ಯಾವುದೇ ನಿವೃತ್ತಿ ಘೋಷಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ದಾಖಲೆಗಳು, ಸಾಧನೆಗೆ ಆಡುತ್ತಿಲ್ಲ. ಸ್ಪರ್ಧಾತ್ಮಕ ಮನೋಭಾವ ಆಟಗಾರ ನಾನು. ನನಗೆ ಮೈದಾನದಿಂದ ದೂರ ಉಳಿಯಲು ಆಗುವುದಿಲ್ಲ. ನೀವು ಜೀವನದಲ್ಲಿ ಯಾವ ಹಂತದಲ್ಲಿ ನಿಂತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ಕೆಟ್ಟ ಫಾರ್ಮ್‌ನಲ್ಲಿದ್ದಾಗ ದುಡುಕಿ ನಿರ್ಧಾರ ಕೈಗೊಳ್ಳಬಾರದು ಎಂದರು.

ಇದನ್ನೂ ಓದಿ:2025ರ ಐಪಿಎಲ್​​; ಮುಂಬೈ ಇಂಡಿಯನ್ಸ್​​ಗೆ ಬಿಗ್​ ಶಾಕ್​ ಕೊಟ್ಟ ಬುಮ್ರಾ; ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment