/newsfirstlive-kannada/media/post_attachments/wp-content/uploads/2024/06/VIRAT_KOHLI_1-1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಇಡೀ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಇನ್ನು, ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರೋ ವಿರಾಟ್ ಕೊಹ್ಲಿ ಈ ಬಾರಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದಾರೆ. ಹೀಗಾಗಿ ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ಆರ್‌ಸಿಬಿ ಚಾಂಪಿಯನ್ ಆಗಲು ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಇದರ ಮಧ್ಯೆ ತನ್ನನ್ನು ಕಾಡಬಲ್ಲ ಬೌಲರ್ ಬಗ್ಗೆ ವಿರಾಟ್ ಕೊಹ್ಲಿ ಮಾತಾಡಿದ್ದಾರೆ.
ಈ ಬಗ್ಗೆ ಏನಂದ್ರು ಕೊಹ್ಲಿ?
ಆರ್‌ಸಿಬಿ ಕಾರ್ಯಕ್ರಮದಲ್ಲಿ ಮಾತಾಡಿದ ವಿರಾಟ್ ಕೊಹ್ಲಿ ಅವರು, ಜಸ್ಪ್ರೀತ್ ಬುಮ್ರಾ ಎಲ್ಲಾ ಸ್ವರೂಪಗಳಲ್ಲೂ ವಿಶ್ವದ ಅತ್ಯುತ್ತಮ ಬೌಲರ್. ಇದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಬುಮ್ರಾ ನನ್ನನ್ನು ಹಲವು ಬಾರಿ ಔಟ್ ಮಾಡಿದ್ದು, ಇವರ ವಿರುದ್ಧ ಆಡೋದು ಕಷ್ಟ ಎಂದರು.
ಕೊಹ್ಲಿಗೆ ಬೌಲಿಂಗ್ ಮಾಡಲು ವಿಶ್ವದ ಟಾಪ್ ಬೌಲರ್ಗಳೇ ಹೆದರುತ್ತಾರೆ. ಹೀಗಿರುವಾಗ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸುವುದು ಬಹಳ ಕಷ್ಟ ಎಂದು ಕೊಹ್ಲಿ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನು, ಎಂದಿನಂತೆ ಈ ವರ್ಷವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಭಾರೀ ನಿರೀಕ್ಷೆ ಇದೆ. ಹಾಗಾಗಿ ಈ ಸಲ ಕಪ್ ನಮ್ದೇ ಎಂದು ಫ್ಯಾನ್ಸ್ ಮತ್ತೊಮ್ಮೆ ಹೇಳಲು ಶುರು ಮಾಡಿದ್ದಾರೆ. 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್, ಆರ್‌ಸಿಬಿ ಮುಖಾಮುಖಿ ಆಗಲಿವೆ.
ಇದನ್ನೂ ಓದಿ:ಆರ್‌ಸಿಬಿ, ಕೆಕೆಆರ್ ಮಧ್ಯೆ ಮಹತ್ವದ ಪಂದ್ಯ; ಬಿಗ್ ಶಾಕ್ ಕೊಟ್ಟ ಯಂಗ್ ಪ್ಲೇಯರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ