Mr. IPL​ ಪಟ್ಟವೇರಿದ ಕಿಂಗ್​ ಕೊಹ್ಲಿ.. ಆರ್​​ಸಿಬಿ ಸ್ಟಾರ್ ಪ್ಲೇಯರ್​ಗೆ ಮತ್ತೊಂದು ಗರಿ!

author-image
Bheemappa
Updated On
ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್​ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?
Advertisment
  • ಕೊಹ್ಲಿ ಪಾಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್​​ ಅಧಿಪತಿ ಪಟ್ಟ
  • ವಿರಾಟ್​ ಕೊಹ್ಲಿ 50 ಫ್ಲಸ್ ರನ್​ ಗಳಸಿದ್ರೆ RCBಗೆ ಗೆಲುವು ಪಕ್ಕಾ!
  • ವಿರಾಟ್​ ವೀರಾವೇಷದ ಮುಂದೆ ಸೈಡ್​ಲೈನ್ ಆದ ಚೆನ್ನೈ ಪ್ಲೇಯರ್​

ಮಿಸ್ಟರ್​ ಐಪಿಎಲ್​.. ಈ ಹೆಸರು ಕೇಳಿದಾಕ್ಷಣ ಸುರೇಶ್​ ರೈನಾ ಥಟ್ ಅಂತಾ ನೆನಪಾಗ್ತಾರೆ. ಇನ್ಮೇಲೆ ರೈನಾ ಅಲ್ಲ, ವಿರಾಟ್​ ಕೊಹ್ಲಿನ ಮಿಸ್ಟರ್​ ಐಪಿಎಲ್​ ಅನ್ನಬೇಕು. ವಿರಾಟ್​ ವೀರಾವೇಷದ ಮುಂದೆ ಈಗ ರೈನಾ ಸೈಡ್​ಲೈನ್​ ಆಗಿದ್ದಾರೆ. ಕನ್ಸಿಸ್ಟೆಂಟ್​ ಕಿಂಗ್​​​ ವಿರಾಟ್​​ ಮಿಸ್ಟರ್​​​ ಐಪಿಎಲ್​ ಪಟ್ಟವೇರಿದ್ದಾರೆ.

ರೈನಾ ಮಿಸ್ಟರ್ ಐಪಿಎಲ್ ಅಂತಾನೇ ಫೇಮಸ್​. ರೈನಾ ಅವರ ಕನ್ಸಿಸ್ಟೆಂಟ್ ಆಟಕ್ಕೆ ಸಿಕ್ಕ ಬಿರುದೇ ಮಿಸ್ಟರ್ ಐಪಿಎಲ್. ಇದೀಗ ಈ ಮಿಸ್ಟರ್​ ಐಪಿಎಲ್​ ಪಟ್ಟ, ರೆಕಾರ್ಡ್​ ಬ್ರೇಕರ್​.. ಹಿಸ್ಟರಿ ಕ್ರಿಯೇಟರ್​. ವಿಶ್ವ ಕ್ರಿಕೆಟ್​ನ ರೂಲರ್ ಕಿಂಗ್ ಕೊಹ್ಲಿ ಪಾಲಾಗಿದೆ. ಸದ್ಯ ಫ್ರಾಂಚೈಸಿ ಲೀಗ್​ನಲ್ಲಿ ಅಬ್ಬರಿಸ್ತಿರುವ ವಿರಾಟ್, ಇಂಡಿಯನ್ ಪ್ರೀಮಿಯರ್ ಲೀಗ್​​ನ ಅಧಿಪತಿಯ ಪಟ್ಟವೇರಿದ್ದಾರೆ.

publive-image

ಶ್ರೀಮಂತ ಲೀಗ್​ನಲ್ಲಿ ಕಿಂಗ್​​ ಕೊಹ್ಲಿಯ ದರ್ಬಾರ್.!

ಗರಿಷ್ಠ ರನ್​​​​, ಗರಿಷ್ಠ ಸೆಂಚೂರಿ, ಹಾಫ್ ಸೆಂಚೂರಿ ಲಿಸ್ಟ್​ನ ಟಾಪರ್. ಒಂದೇ ಮಾತಲ್ಲಿ ಹೇಳೋದಾದ್ರೆ ರಿಚೆಸ್ಟ್​ ಲೀಗ್​ನಲ್ಲಿ ದಾಖಲೆಗಳ ವೀರ​!. ಕಳೆದ 18 ವರ್ಷಗಳಿಂದ ಐಪಿಎಲ್​ನಲ್ಲಿ ಹಿಸ್ಟರಿ ಕ್ರಿಯೇಟ್​ ಮಾಡ್ತಿರೋ ವಿರಾಟ್, ಪ್ರಸಕ್ತ ಆವೃತ್ತಿಯಲ್ಲೂ ರನ್​ಬೇಟೆಯಾಡ್ತಿದ್ದಾರೆ. ಎದುರಾಳಿ ಮೇಲೆ ದಂಡೆಯಾತ್ರೆ ನಡೆಸ್ತಿರೋ ಕೊಹ್ಲಿ, ಐಪಿಎಲ್ ಅಖಾಡದಲ್ಲಿ ಯುವ ಆಟಗಾರರೇ ನಾಂಚುವಂತ ಆಟವಾಡ್ತಿದ್ದಾರೆ.

ಪ್ರಸಕ್ತ ಸೀಸನ್​ನಲ್ಲಿ ವಿರಾಟ್ ಕೊಹ್ಲಿ

ಪ್ರಸಕ್ತ ಸೀಸನ್​ನಲ್ಲಿ 11 ಪಂದ್ಯಗಳನ್ನಾಡಿರೋ ವಿರಾಟ್​, ಬರೋಬ್ಬರಿ 63.13ರ ಸರಾಸರಿಯಲ್ಲಿ 505 ರನ್​ ಕೊಳ್ಳೆ ಹೊಡೆದಿದ್ದಾರೆ. 143.46ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. 7 ಬಾರಿ ಹಾಫ್​​ ಸೆಂಚುರಿಯ ಗಡಿ ದಾಟಿದ್ದಾರೆ.

ಕಿಂಗ್​ ಕೊಹ್ಲಿ ಅರ್ಧಶತಕ.. ಆರ್​ಸಿಬಿ ಗೆಲುವು ಪಕ್ಕಾ..!

ಪ್ರಸಕ್ತ ಸೀಸನ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿರುವ ವಿರಾಟ್, ಮೂರೇ 3 ಪಂದ್ಯಗಳಲ್ಲಿ ಬಿಟ್ರೆ, ಉಳಿದೆ 7 ಪಂದ್ಯಗಳಲ್ಲಿ ಅರ್ಧಶತಕದ ಗಡಿದಾಟಿದ್ದಾರೆ. ಇದರೊಂದಿಗೆ ಪ್ರಸಕ್ತ ಸೀಸನ್​​ನಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಏನಂದ್ರೆ, ಕೊಹ್ಲಿ 50 ಪ್ಲಸ್ ಗಳಿಸಿದ್ರೆ ಸಾಕು. ಆರ್​ಸಿಬಿ ಗೆಲುವು ಫಿಕ್ಸ್​ ಎಂಬಂತಾಗಿದೆ. ಕೊಹ್ಲಿ ಅರ್ಧಶತಕ ಹೊಡೆದ ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದು ಬೀಗಿದೆ.

ವಿಶ್ವ ಸಾಮ್ರಾಟ ವಿರಾಟ್​​ ಕೊಹ್ಲಿ ಈಗ ಮಿಸ್ಟರ್ IPL​​..!

ಸೀಸನ್-18ರಲ್ಲಿ ವಿರಾಟ್ ಅದ್ಬುತ ಆಟವಾಡ್ತಿದ್ದಾರೆ. ಆದ್ರೆ, ವಿರಾಟ್​ ಕೊಹ್ಲಿಯ ಈ ಕನ್ಸಿಸ್ಟೆನ್ಸಿ ಆಟ ಜಸ್ಟ್​ ಬೆರಳೆಣಿಕೆಯಷ್ಟು ಸೀಸನ್​ಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಆರಂಭಿಕ 2 ಸೀಸನ್​​​​​​​​​​​​​​ ಬಿಟ್ರೆ, 2010ರಿಂದಲೂ ಕೊಹ್ಲಿ, ಐಪಿಎಲ್ ಅಖಾಡದಲ್ಲಿ ರನ್ ಭರಾಟೆ ನಡೆಸಿದ್ದಾರೆ. 18 ಸೀಸನ್​​ಗಳಿಂದ 5 ಬಾರಿ 300 ಪ್ಲಸ್​ ರನ್, 3 ಸೀಸನ್​​​ಗಳಲ್ಲಿ 400 ಪ್ಲಸ್,​ 5 ಬಾರಿ ಐನೂರಕ್ಕೂ ಅಧಿಕ ರನ್​​​​​​​​, 2 ಬಾರಿ 600ಕ್ಕೂ ಅಧಿಕ ರನ್ ಪೇರಿಸಿರುವ ವಿರಾಟ್, ಒಮ್ಮೆ ದಾಖಲೆಯ 973 ರನ್ ಪೇರಿಸಿದ್ದಾರೆ.

IPL​ನಲ್ಲಿ ಹೆಚ್ಚು 500+ ರನ್​

ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ, 8 ಬಾರಿ 500 ಪ್ಲಸ್ ರನ್ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 7, ಭಾರತದ ಕೆ.ಎಲ್.ರಾಹುಲ್ 6, ಶಿಖರ್ ಧವನ್ 5 ಬಾರಿ ಐನೂರಕ್ಕೂ ಅಧಿಕ ರನ್ ದಾಖಲಿಸಿರುವ ಆಟಗಾರರು ಎನಿಸಿದ್ದಾರೆ.

ಇದನ್ನೂ ಓದಿ:ಕಿಂಗ್​ ಕೊಹ್ಲಿ ಜೊತೆ ಓಪನಿಂಗ್ ಬ್ಯಾಟಿಂಗ್ ಮಾಡೋದು ಯಾರು.. ಸಾಲ್ಟ್, ಬೆಥೆಲ್ ಯಾರಿಗೆ ಚಾನ್ಸ್​?

publive-image

ಕೊಹ್ಲಿ ದಾಖಲೆಯ ಆಟವಾಡಿದ್ರೆ, ಮಿಸ್ಟರ್​ ಐಪಿಎಲ್​ ಎನಿಸಿಕೊಂಡಿದ್ದ ರೈನಾ 12 ಐಪಿಎಲ್​ ಸೀಸನ್​ಗಳಿಂದ 3 ಬಾರಿ ಮಾತ್ರ 500ಕ್ಕೂ ಅಧಿಕ ರನ್​ಗಳಿಸಿದ್ದಾರೆ. 6 ಬಾರಿ 400ಕ್ಕೂ ಅಧಿಕ ರನ್​ಗಳಿಸಿದ್ದಾರೆ. ಈ ಟ್ರ್ಯಾಕ್​ ರೆಕಾರ್ಡ್​ ನೋಡಿದ್ರೆ, ಮಿಸ್ಟರ್​ ಐಪಿಎಲ್ ಪಟ್ಟಕ್ಕೆ ಕೊಹ್ಲಿನೇ ಫರ್ಪೆಕ್ಟ್​ ಚಾಯ್ಸ್​ ಅನ್ನೋದ್ರಲ್ಲಿ ಡೌಟೇ ಇಲ್ಲ..

ಫೀಲ್ಡರ್​ ಆಗಿ ಅತಿ ಹೆಚ್ಚು ವಿಕೆಟ್ ಬೇಟೆಯಾಡಿರುವ ಟ್ರ್ಯಾಕ್ ರೆಕಾರ್ಡ್​ನಲ್ಲೂ ವಿರಾಟ್​ ಕೊಹ್ಲಿ ಅಗ್ರಸ್ಥಾನಿ ಆಗಿದ್ದಾರೆ. ಕೊಹ್ಲಿ, 263 ಪಂದ್ಯಗಳಿಂದ 117 ಕ್ಯಾಚ್​ ಹಿಡಿದಿದ್ರೆ, ಸುರೇಶ್​ ರೈನಾ 109 ಕ್ಯಾಚ್​ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಈ ಅಂಕಿ ಅಂಶಗಳನ್ನೆಲ್ಲಾ ನೋಡಿದ್ಮೇಲೆ, ಮಿಸ್ಟರ್​ ಐಪಿಎಲ್​ ಪಟ್ಟಕ್ಕೆ ವಿರಾಟ್ ಕೊಹ್ಲಿಯೇ ಸೂಕ್ತ ಆಟಗಾರ ಅಂದ್ರೆ ತಪ್ಪೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment