ಚೆನ್ನೈ ಬೌಲರ್​​ಗೆ ವಾರ್ನ್ ಮಾಡಿದ್ರಾ ಕಿಂಗ್ ಕೊಹ್ಲಿ..? ಬಾಲ್​ ಎಸೆದಿದ್ದಕ್ಕೆ ಕೋಪಿಸಿಕೊಂಡ ವಿರಾಟ್

author-image
Bheemappa
Updated On
ಚೆನ್ನೈ ಬೌಲರ್​​ಗೆ ವಾರ್ನ್ ಮಾಡಿದ್ರಾ ಕಿಂಗ್ ಕೊಹ್ಲಿ..? ಬಾಲ್​ ಎಸೆದಿದ್ದಕ್ಕೆ ಕೋಪಿಸಿಕೊಂಡ ವಿರಾಟ್
Advertisment
  • ಸುಲಭ ಕ್ಯಾಚ್ ಹಿಡಿದು ದೊಡ್ಡಮಟ್ಟದಲ್ಲಿ ಸಂಭ್ರಮಿಸಿದ ಬೌಲರ್
  • ಕೈಬೆರಳು ತೋರಿಸುತ್ತಾ ಚೆನ್ನೈ ಬೌಲರ್​ಗೆ ಎಚ್ಚರಿಕೆ ಕೊಟ್ರಾ ಕೊಹ್ಲಿ?
  • 33 ಬಾಲ್​ಗೆ 62 ರನ್​ಗಳನ್ನು ಬಾರಿಸಿದ ಸ್ಟಾರ್ ಬ್ಯಾಟರ್ ವಿರಾಟ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಅತ್ಯದ್ಭುತ ಗೆಲುವು ಪಡೆದಿದೆ. ಈ ಮೂಲಕ 8 ಪಂದ್ಯಗಳಲ್ಲಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ 16 ಅಂಕಗಳಿಂದ ಅಗ್ರಸ್ಥಾನ ಪಡೆದುಕೊಂಡಿದೆ. ಆದ್ರೆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಬೌಲರ್​ ಖಲೀಲ್ ಅಹ್ಮದ್ ನಡುವೆ ಬಿಸಿ ಬಿಸಿ ಮಾತುಕತೆ ನಡೆದಿದ್ದು ವಾರ್ನ್​ ಕೂಡ ಮಾಡಿದ್ದಾರೆ ಎನ್ನಲಾಗಿದೆ.

ಮೊದಲ ಬ್ಯಾಟಿಂಗ್ ಮಾಡಿದ ಆರ್​ಸಿಬಿ ಓಪನರ್ಸ್​ ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 97 ರನ್​​ವರೆಗೆ ಇಬ್ಬರೂ ಜೊತೆಯಾಟ ಆಡಿ ಚೆನ್ನೈ ಬೌಲರ್​ಗೆ ಬೆಂಡೆತ್ತಿದರು. 5ನೇ ಓವರ್​ ಮಾಡುತ್ತಿದ್ದ ಖಲೀಲ್ ಅಹ್ಮದ್​ಗೆ ಚಳಿ ಬಿಡಿಸಿದ್ದ ಕೊಹ್ಲಿ ಒಂದೇ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸಿಕ್ಸರ್ ಬಾರಿಸಿ ಅದ್ಭುತ ಫಾರ್ಮ್​ ಪ್ರದರ್ಶಿಸಿದರು. ಆದರೆ ಕೊಹ್ಲಿ ಬ್ಯಾಟಿಂಗ್​ನಿಂದ ಖಲೀಲ್ ಬೇಸರಗೊಂಡರು ಎನಿಸುತ್ತದೆ.

ಏಕೆಂದರೆ 12 ಓವರ್ ಮಾಡುತ್ತಿದ್ದ ಸ್ಯಾಮ್ ಕರನ್ ಅವರ ಬೌಲಿಂಗ್​ನಲ್ಲಿ ವಿರಾಟ್​ ಕೊಹ್ಲಿ ಗ್ಯಾಪ್ ಹಾಕಲು ಹೋಗಿ ಖಲೀಲ್ ಅಹ್ಮದ್​ಗೆ ಸುಲಭವಾಗಿ ಕ್ಯಾಚ್ ಕೊಟ್ಟರು. ಇದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದ ಖಲೀಲ್, ಬಾಲ್​ ಜೋರಾಗಿ ನೆಲಕ್ಕೆ ಎಸೆದು ಕೋಪ ತೋರಿಸಿದರು. ಈ ರಿವೆಂಜ್​ ಮನಸಲ್ಲಿ ಇಟ್ಟುಕೊಂಡಿದ್ದ ಕೊಹ್ಲಿ ಅದನ್ನು ತೀರಿಸಿಯೇ ಬಿಟ್ಟರು.

ಇದನ್ನೂ ಓದಿಕೇವಲ ಒಂದೇ 1 ರನ್​​ನಿಂದ ಆರೆಂಜ್​ ಕ್ಯಾಪ್​ ಪಡೆದ ಕಿಂಗ್ ಕೊಹ್ಲಿ.. ಪರ್ಪಲ್ ಕ್ಯಾಪ್​ ಕೂಡ ಕನ್ನಡಿಗನಿಗೆ

publive-image

ಚೆನ್ನೈ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ ಆಟಗಾರರು ಪರಸ್ಪರ ಮಾತನಾಡುವಾಗ ಖಲೀಲ್ ಅಹ್ಮದ್​​ಗೆ ಕೊಹ್ಲಿ ಎಲ್ಲವನ್ನು ಹಿಂದಕ್ಕೆ ಕೊಟ್ಟಿದ್ದಾರೆ. ಕೋಪದಲ್ಲೇ ಮಾತನಾಡಿದ ಕೊಹ್ಲಿ, ನೇರನೇರವಾಗಿಯೇ ಟಕ್ಕರ್ ಕೊಟ್ಟಿದ್ದಾರೆ. ಮುಂದಿನ ಯಾವುದಾದರೂ ಮ್ಯಾಚ್ ಅಲ್ಲಿ ಸಿಗು ಐತಿ ನಿನಗೆ ಎಂದಿದ್ದಾರೆ. ಇದಕ್ಕೆ ಖಲೀಲ್ ಅಹ್ಮದ್ ಎದುರುತ್ತರ ಕೊಡಲು ಬಂದರು ಕೊಹ್ಲಿ ಯಾವುದನ್ನು ಕಿವಿಗೆ ಹಾಕೊಂಡಿಲ್ಲ.

ಇನ್ನು ಈ ಪಂದ್ಯದಲ್ಲಿ ಭಾರೀ ದುಬಾರಿಯಾದ ಖಲೀಲ್ ಅಹ್ಮದ್ 3 ಓವರ್​ಗಳನ್ನು ಮಾಡಿ ಯಾವುದೇ ವಿಕೆಟ್ ಪಡೆಯದೇ ಒಟ್ಟು 65 ರನ್​ ನೀಡಿದರು. ಅಲ್ಲದೇ 19ನೇ ಓವರ್​ನಲ್ಲಿ ರೊಮಾರಿಯೋ ಶೆಫರ್ಡ್​​ ಇಂದ 33 ರನ್​ಗಳನ್ನು ಬಾರಿಸಿಕೊಂಡು ಅವಮಾನಕ್ಕೆ ಒಳಗಾದರು. ಇವರ ಓವರ್​ನಲ್ಲಿ ಬಂದ ರನ್​ಗಳೇ ಚೆನ್ನೈ ತಂಡ ಸೋಲಲು ಕಾರಣವಾಯಿತು ಎಂದು ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment