14 ವರ್ಷಗಳ ಟೆಸ್ಟ್ ಜರ್ನಿ ಅಂತ್ಯ.. ಕೊಹ್ಲಿಗೆ ಬಲವಂತದ ವಿದಾಯನಾ? ಸ್ವಂತ ನಿರ್ಧಾರನಾ?

author-image
Ganesh
ರೋಹಿತ್ ಜೊತೆ ಬಿರುಕು, ಡ್ರೆಸ್ಸಿಂಗ್ ರೂಮ್​ನಲ್ಲಿ ಗಲಾಟೆ -ಸುದ್ದಿಗೋಷ್ಟಿ ನಡೆಸಿ ಗಂಭೀರ್ ಹೇಳಿದ್ದೇನು?
Advertisment
  • 14 ವರ್ಷಗಳ ಕರಿಯರ್​ಗೆ ಭಾವನಾತ್ಮಕ ವಿದಾಯ
  • ವಿರಾಟ್ ಕೊಹ್ಲಿ ಟೆಸ್ಟ್ ಕರಿಯರ್​​ ಹಾದಿ ರೋಚಕ
  • ಭಾರತೀಯ ಕ್ರಿಕೆಟ್​​ಗೆ ಕಿಂಗ್ ಕೊಹ್ಲಿ ಕೊಡುಗೆ ಅಪಾರ

ಲೆಜೆಂಡರಿ ವಿರಾಟ್​​ ಕೊಹ್ಲಿಯ 14 ವರ್ಷಗಳ ಟೆಸ್ಟ್​ ಕ್ರಿಕೆಟ್​​​​​​​​​​​​​​​​​ ಕರಿಯರ್ ಅಂತ್ಯವಾಗಿದೆ.
20, ಜೂನ್​, 2011 ಪದಾರ್ಪಣೆ
123 ಪಂದ್ಯ.. 9230 ರನ್​.. 30 ಶತಕ
14 ವರ್ಷದ ಸುದೀರ್ಘ ಜರ್ನಿ

ಟೆಸ್ಟ್​ ಕ್ರಿಕೆಟ್​ನಲ್ಲಿ ಪರಂಪರೆ ದಿ ಗ್ರೇಟೆಸ್ಟ್ ಅಂಡ್ ಲೆಜೆಂಡರಿ ಕ್ರಿಕೆಟರ್ ವಿರಾಟ್ ಕೊಹ್ಲಿ ಬಿಟ್ಟು ಹೋಗಿರೋ ಪರಂಪರೆ ಇದು. ಕ್ರಿಕೆಟ್​ ದೇವರು ಸಚಿನ್ ಕೈಯಿಂದ ಡೆಬ್ಯು ಕ್ಯಾಪ್ ಪಡೆದಿದ್ದ ಕೊಹ್ಲಿ ವೆಸ್ಟ್ ಇಂಡೀಸ್ ಎದುರಿನ ಕಿಂಗ್ಸ್​ಟನ್​​ ಚೊಚ್ಚಲ ಟೆಸ್ಟ್​ ಆಡಿದ್ರು. ಕೊಹ್ಲಿ, ಅವತ್ತು ಪಡೆದಿದ್ದು ಕೇವಲ ಟೆಸ್ಟ್​ ಕ್ರಿಕೆಟ್​ ಕ್ಯಾಪ್​ ಆಗಿರಲಿಲ್ಲ. ಭಾರತೀಯ ಕ್ರಿಕೆಟ್​ನ ಮುನ್ನಡೆಸುವ ಜವಾಬ್ದಾರಿಯಾಗಿತ್ತು. ಆ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ ವಿರಾಟ್​, ನಂತರ ವಿಶ್ವ ಕ್ರಿಕೆಟ್​ಗೆ ಪರಿಚಯವಾಗಿದ್ದು ವಿಶ್ವ ಸಾಮ್ರಾಟನಾಗಿ. ವಿಶ್ವ ಕ್ರಿಕೆಟ್​ನ ಕಿಂಗ್ ಆಗಿ, ಮಾಡ್ರನ್ ಡೇ ಕ್ರಿಕೆಟ್​ನ ದೇವರಾಗಿ. ಇದೀಗ ಆ ಮಾಡ್ರನ್ ಡೇ ಕ್ರಿಕೆಟ್ ದೇವರ, 14 ವರ್ಷದ ಟೆಸ್ಟ್​ ಕ್ರಿಕೆಟ್ ಕರಿಯರ್​​​ ಅಂತ್ಯವಾಗಿದೆ.

ಇದನ್ನೂ ಓದಿ: ದ ವಾರಿಯರ್ ಕಿಂಗ್‌.. ಟೆಸ್ಟ್ ಕ್ರಿಕೆಟ್ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೆ; ಫ್ಯಾನ್ಸ್‌ ಓದಲೇಬೇಕಾದ ಸ್ಟೋರಿ!

publive-image

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್​​ಗೆ ಗುಡ್ ಬೈ ಹೇಳಿರುವ ವಿರಾಟ್​, ಫ್ಯಾನ್ಸ್​ಗೆ ಶಾಕ್ ನೀಡಿದ್ದಾರೆ. ಜಮೈಕಾದ ಕಿಂಗ್ಸ್​ಟನ್​ನಲ್ಲಿ ಆರಂಭವಾಗಿದ್ದ ಕೊಹ್ಲಿ ಟೆಸ್ಟ್​ ಕರಿಯರ್, ಆಸ್ಟ್ರೇಲಿಯಾದ ಸಿಡ್ನಿ ಪಂದ್ಯದೊಂದಿಗೆ ಅಂತ್ಯವಾಗಿದೆ.

269, ಸೈನ್ ಆಫ್..

14 ವರ್ಷಗಳ ಹಿಂದೆ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಂಡದ ನೀಲಿ ಕ್ಯಾಪ್ ಧರಿಸಿದ್ದಾಗ, ಈ ಪ್ರಯಾಣ ಇಷ್ಟು ದೂರ ಬರಲಿದೆ ಎಂದು ನಿಜಕ್ಕೂ ಊಹಿಸಿರಲಿಲ್ಲ. ಟೆಸ್ಟ್‌ ಕ್ರಿಕೆಟ್‌ ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು, ನಾನು ಜೀವನಪರ್ಯಂತ ಪಾಲಿಸಬೇಕಾದ ಪಾಠಗಳನ್ನು ಕಲಿಸಿತು. ವೈಟ್​ ಜರ್ಸಿಯಲ್ಲಿ ಆಡುವುದೇ ಒಂದು ವಿಶೇಷ. ಶಾಂತವಾದ ಜಂಜಾಟ, ದೀರ್ಘ ದಿನಗಳು, ಯಾರೂ ನೋಡದಿದ್ದರೂ ಸಣ್ಣ ಕ್ಷಣಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಟೆಸ್ಟ್‌ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದೇನೆ. ಇದು ಸುಲಭದ ನಿರ್ಧಾರವಲ್ಲ. ಆದರೆ ಇದು ಸರಿ ಎಂದು ಭಾವಿಸುತ್ತಿದ್ದೇನೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಅಟಕ್ಕೆ ನೀಡಿದ್ದೇನೆ, ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನ ಅದು ನನಗೆ ಹಿಂತಿರುಗಿಸಿದೆ. ನನ್ನೊಂದಿಗೆ ಆಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಹೇಳುತ್ತೇನೆ. ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನಾನು ಯಾವಾಗಲೂ ಮುಗುಳುನಗೆಯೊಂದಿಗೆ ನೆನಪಿಸಿಕೊಳ್ಳುತ್ತೇನೆ. #269, ಸೈನ್ ಆಫ್.  -ವಿರಾಟ್ ಕೊಹ್ಲಿ, ಆಟಗಾರ

ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್‌.. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಕೈ ಕೊಡೋದು ಫಿಕ್ಸ್!

publive-image

ಈ ಭಾವನಾತ್ಮಕ ಪೋಸ್ಟ್​ನೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ವಿರಾಟ್​, ಅಧಿಕೃತ ನಿವೃತ್ತಿ ಘೋಷಿಸಿದ್ದಾರೆ. ಯಂಗ್ ಸ್ಟರ್ ಆಗಿ ಎಂಟ್ರಿಯಾದ ಕೊಹ್ಲಿ, ಕಿಂಗ್ ಕೊಹ್ಲಿ ಆಗಿ ಬೆಳೆದ ಪರಿಯೇ ಅದ್ಭುತ. ಈ 14 ವರ್ಷದಗಳ ಸುದೀರ್ಘ ಕರಿಯರ್​ನಲ್ಲಿ ವಿರಾಟ್ ಮಾಡಿದ ಸಾಧನೆ, ನಾಯಕನಾಗಿ ಟೀಮ್ ಇಂಡಿಯಾಗೆ ತಂದು ಕೊಟ್ಟ ದಿಗ್ವಿಜಯಗಳು ಅವಿಸ್ಮರಣೀಯ. 14 ವರ್ಷಗಳ ಕ್ರಿಕೆಟ್ ಕರಿಯರ್​ನಲ್ಲಿ ವಿರಾಟ್, ತನ್ನದೇ ಆದ ಪರಂಪರೆ ಉಳಿಸಿ ಹೋಗಿದ್ದಾರೆ.

ಬಲವಂತದ ವಿದಾಯನಾ? ಕೊಹ್ಲಿ ನಿರ್ಧಾರನಾ..?

ವಿರಾಟ್ ನಿವೃತ್ತಿ ಹೇಳಿದ್ದೇ ಹೇಳಿದ್ದು., ಇಂಥದ್ದೊಂದು ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೀತಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿಯ ಸತತ ವೈಫಲ್ಯ.. ರೋಹಿತ್ ಶರ್ಮಾ ನಿವೃತ್ತಿಯ ಬೆನ್ನಲ್ಲೇ ತೆಗೆದುಕೊಂಡ ನಿರ್ಧಾರವಾಗಿದೆ. ಯಾಕಂದ್ರೆ ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಹೊಸ ಆಟಗಾರರ ಆಗಮನವಾಗ್ತಿದೆ. ಇಂಗ್ಲೆಂಡ್ ಸರಣಿಯಿಂದ ಹೊಸ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಸೀಸನ್ ಶುರುವಾಗಲಿದೆ. ಈ ಕಾರಣಕ್ಕೆ ಬಿಸಿಸಿಐ, ಪರೋಕ್ಷ ವಿರಾಟ್ ಮೇಲೆ ಒತ್ತಡ ಹೇರಿತ್ತಾ? ಇಲ್ಲ ಕೊಹ್ಲಿಯ ಸ್ವಯಃ ಈ ನಿರ್ಧಾರ ಕೈಗೊಂಡರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಕೊಹ್ಲಿಯ ಆ ಒಂದು ಕನಸು.. ಸಾಧನೆಯ ಹಮ್ಮೀರನಿಗೆ ಅದೊಂದು ಕೊರಗು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment