/newsfirstlive-kannada/media/post_attachments/wp-content/uploads/2025/05/VIRAT_KOHLI_NEW.jpg)
ವಿಶ್ವ ಕ್ರಿಕೆಟ್​ನ ಶ್ರೇಷ್ಠ ಬ್ಯಾಟ್ಸ್​ಮನ್ ಕೊಹ್ಲಿ, ಟೆಸ್ಟ್​ ಕ್ರಿಕೆಟ್​ನಿಂದ ದೂರ ಸರಿದಿದ್ದಾರೆ. ಅಧಿಕೃತವಾಗಿ ಪ್ರಕಟ ಕೂಡ ಮಾಡಿದ್ದು ಟೆಸ್ಟ್​ ಕ್ರಿಕೆಟ್​​ ಅಂದ್ರೆ ನನ್ನ ಫೇವರಿಟ್​ ಫಾರ್ಮಟ್​​ ಅಂತಿದ್ದ ಕೊಹ್ಲಿ ಮನಸ್ಸಿನಲ್ಲಿ ಇದಕ್ಕಿದ್ದಂತೆ ನಿವೃತ್ತಿಯ ಯೋಚನೆ ಬಂದಿದ್ದೇಕೆ?. ಕೊಹ್ಲಿಯ ಈ ನಿರ್ಧಾರಕ್ಕೆ ಆ 2 ವಿಷಯಗಳು ಕಾರಣವಾದವಾ?. ಫಾರ್ಮ್​​ ವಿಚಾರದಲ್ಲಿ ಬೇಸರಗೊಂಡು ಗುಡ್​ಬೈ ಹೇಳಿದ್ರಾ, ಇಲ್ಲ ತಂಡದ ಭವಿಷ್ಯದ ಯೋಚನೆಗೆ ದೃಢ ನಿರ್ಧಾರ ಮಾಡಿದ್ರಾ?.
ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ನ ಅಗ್ರಜ. ಈತನ ರೌದ್ರವತಾರಕ್ಕೆ ಚಿಂದಿಯಾದ ದಾಖಲೆಗಳು ಲೆಕ್ಕಕ್ಕಿಲ್ಲ. ಈತನ ಬೆಂಕಿ ಬ್ಯಾಟಿಂಗ್​​ ಜ್ವಾಲೆಗೆ ಮರೆಯಾದ ಬೌಲರ್​ಗಳು ಒಂದಿಬ್ಬರಲ್ಲ. ಟೆಸ್ಟ್ ಫಾರ್ಮೆಟ್​ ಅಂತ ಬಂದ್ರೆ ಕೊಹ್ಲಿ ಹಸಿದ ಹುಲಿ. ಟಫೆಸ್ಟ್​ ಫಾರ್ಮೆಟ್​​ನಲ್ಲಿ ಕ್ರೀಸ್​​ನಲ್ಲಿರುವಷ್ಟು ಹೊತ್ತು ಎದುರಾಳಿಗಳನ್ನ ಸಿಂಹಸ್ವಪ್ನವಾಗಿ ಕಾಡುವ ಬೇಟೆಗಾರ ವಿರಾಟ್​. ಇಂತಾ ಕೊಹ್ಲಿ ಇದೀಗ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/11/VIRAT_KOHLI_TEST.jpg)
ಟೆಸ್ಟ್​ನ ಗ್ರೇಟೆಸ್ಟ್​ ಬ್ಯಾಟರ್​​​​​​​​​​​​​​​​​​​ ವಿರಾಟ್ ಕೊಹ್ಲಿ..!
2011 ಟು 2019.. ಇದು ವಿರಾಟ್​ ಕೊಹ್ಲಿ ಕರಿಯರ್​ನ ಉತ್ತುಂಗದ ದಿನಗಳು. ಸಾಮಾನ್ಯ ಕೊಹ್ಲಿ, ಕಿಂಗ್​ ಕೊಹ್ಲಿಯಾಗಿ ವಿಶ್ವ ಕ್ರಿಕೆಟ್​​ನ ದೊರೆಯಾಗಿ ಆಳಿದ ದಿನಗಳು. ಈ ಅವಧಿಯಲ್ಲಿ ವಿರಾಟ್ ಮುಟ್ಟಿದೆಲ್ಲ ಚಿನ್ನವಾಗಿತ್ತು. ಎದುರಾಳಿ ಪಾಲಿಗೆ ಸಿಂಹಸ್ವಪ್ನಾರಾಗಿದ್ದ ವಿರಾಟ್​​, ಟೆಸ್ಟ್​ ಕ್ರಿಕೆಟ್​​ನ ಗ್ರೇಟೆಸ್ಟ್​ ಬ್ಯಾಟ್ಸ್​ಮನ್ ಆಗಿ ಮೆರೆದಾಡಿದ್ದರು. ಟನ್​ ಗಟ್ಟಲೇ ರನ್ ಕೊಳ್ಳೆ ಹೊಡೆದು ರೆಡ್ ಬಾಲ್​​ ಕ್ರಿಕೆಟ್​ನ ಚಕ್ರಾಧಿಪತಿಯಾಗಿ ಕ್ರಿಕೆಟ್ ಲೋಕವನ್ನು ಆಳಿದ್ದರು. ಈ ಅವಧಿಯಲ್ಲಿ ಟೆಸ್ಟ್​ ಕ್ರಿಕೆಟ್​ನ ನಂ.1 ಬ್ಯಾಟರ್​ ಆಗಿ ಅಧಿಪತ್ಯ ಸಾಧಿಸಿದ್ದ ವಿರಾಟ್​​ಗೆ ವಿರಾಟ್ ಮಾತ್ರವೇ ಸರಿಸಾಟಿಯಾಗಿದ್ದರು.
2011-2019 ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ
2011ರಿಂದ 2019ರ ಅವಧಿಯಲ್ಲಿ ಆಡಿದ್ದ 141 ಇನ್ನಿಂಗ್ಸ್​ಗಳಿಂದ 7,202 ರನ್​ ಕೊಳ್ಳೆ ಹೊಡೆದಿದ್ದ ವಿರಾಟ್, 54.97ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್ ಕಲೆಹಾಕಿದ್ದರು. ಬರೋಬ್ಬರಿ 27 ಶತಕ ಸಿಡಿಸಿದ್ದರು. ಅಂದ್ರೆ, ಪ್ರತಿ 5.2 ಇನ್ನಿಂಗ್ಸ್​ಗೊಮ್ಮೆ ಶತಕ ವಿರಾಟ್​ ಬ್ಯಾಟ್​ನಿಂದ ಬರುತ್ತಿತ್ತು. 2019 ದಾಟಿದ್ದೇ ದಾಟಿದ್ದು. ಅದೇನಾಯ್ತೋ ಗೊತ್ತಿಲ್ಲ. ಆ ಹಳೇ ಕೊಹ್ಲಿ ಮಾಯವಾಗಿದ್ದಾರೆ. ಇನ್​​ಕನ್ಸಿಸ್ಟೆನ್ಸಿ ಕೊಹ್ಲಿಯನ್ನ ಕಾಡ್ತಿದೆ. ಇದೇ ವಿಚಾರವಾಗೇ ಆಸ್ಟ್ರೇಲಿಯನ್ ಮಾಜಿ ಕ್ರಿಕೆಟರ್ ಮಾಕ್​ ಟೇಲರ್​, ಹೇಳಿಕೆಯೊಂದನ್ನು ನೀಡಿದ್ದಾರೆ.
ವಿರಾಟ್ಗೆ ಈಗ 36 ವರ್ಷ. ನಿಜವಾಗಿಯೂ ಮೂರ್ನಾಲ್ಕು ವರ್ಷದಿಂದ ಉತ್ತಮವಾಗಿಲ್ಲ. ಬಹುಶಃ ಐದು ವರ್ಷದಿಂದ 3 ಶತಕ ಸಿಡಿಸಿರಬೇಕು. ವಿರಾಟ್ ಫಾರ್ಮ್ನಲ್ಲಿ ಇಲ್ಲ. ಹಿಂದಿನ 10 ವರ್ಷ ವಿರಾಟ್, ಈ ಯುಗದ ದಿ ಬೆಸ್ಟ್ ಟೆಸ್ಟ್ ಬ್ಯಾಟರ್ ಅನ್ನೋದ್ರಲ್ಲಿ ಸಂಶಯವಿಲ್ಲ.
ಮಾಕ್ ಟೇಲರ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ನ ಮಾತು ಅಕ್ಷರಶಃ ನಿಜ. ​ಕಳೆದ ಬಾಂಗ್ಲಾದೇಶ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗಳಲ್ಲಿ ಮಾತ್ರವಲ್ಲ. 2019ರ ಬಳಿಕ ಕೊಹ್ಲಿ ಆಟದ ವೈಖರಿಯೇ ಬದಲಾಗಿದೆ. ಕೊಹ್ಲಿ ದಿಢೀರ್​ ನಿವೃತ್ತಿ ನಿರ್ಧಾರಕ್ಕೂ ಇದೇ ಕಾರಣ ಎನ್ನಲಾಗ್ತಿದೆ.
2020ರಿಂದ ಪಾತಾಳಕ್ಕೆ ವಿರಾಟ್ ಟೆಸ್ಟ್ ಕರಿಯರ್..!
2020ರ ಆರಂಭದಿಂದ ಕೊಹ್ಲಿಯನ್ನ ಇನ್​​ಕನ್ಸಿಸ್ಟೆನ್ಸಿ ಕಾಡಿದೆ. ಹಿಂದೆ ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ, ಎದುರಾಳಿಗಳ ಮೇಲೆ ವಿರಾಟ ರೂಪ ಪ್ರದರ್ಶಿಸುತ್ತಿದ್ದ ವಿರಾಟ್​, ವೀರಾವೇಶ ತಣ್ಣಗಾಗಿದೆ. ಫಾರ್ಮ್​​ ಪಾತಾಳಕ್ಕೆ ಕುಸಿದಿದೆ. ಈ ಹಿಂದೆ ಐದಾರು ಇನ್ನಿಂಗ್ಸ್​ಗೆ ಶತಕ ಸಿಡಿಸ್ತಿದ್ದ ವಿರಾಟ್​, ಈಗ 2 ವರ್ಷಕ್ಕೊಂದು ಶತಕ ಸಿಡಿಸುವ ಸ್ಥಿತಿ ತಲುಪಿದ್ದಾರೆ.
ಇದನ್ನೂ ಓದಿ: RCBಗೆ ಬಿಗ್ ಶಾಕ್​; ಈ ಆಟಗಾರರು ತಂಡದಲ್ಲಿ ಆಡುವುದೇ ಅನುಮಾನ.. ಏನಾಯಿತು?
/newsfirstlive-kannada/media/post_attachments/wp-content/uploads/2023/12/Virat-Kohli_Test1.jpg)
2020ರಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿ
2020ರಿಂದ ಇದುವರೆಗೆ 69 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್​, 2028 ರನ್ ಗಳಿಸಿದ್ದಾರೆ. ಕೇವಲ 30.72ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್ ಕಲೆಹಾಕಿರುವ ಕೊಹ್ಲಿ, 69 ಇನ್ನಿಂಗ್ಸ್​ಗಳಿಂದ ಮೂರಂಕಿ ಗಡಿ ತಲುಪಿದ್ದು ಜಸ್ಟ್​ ಮೂರೇ 3 ಬಾರಿ ಮಾತ್ರ.
ಅಂದ್ರೆ, ಕಳೆದ 6 ವರ್ಷಗಳಿಂದ ವಿರಾಟ್​, 23 ಇನ್ನಿಂಗ್ಸ್​​ಗಳಿಗೊಮ್ಮೆ ಶತಕ ಸಿಡಿಸ್ತಿದ್ದಾರೆ. ಇದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ವೈಫಲ್ಯವೇ ವಿರಾಟ್​ ಕೊಹ್ಲಿ, ನಿವೃತ್ತಿಗೆ ಕಾರಣ ಎನ್ನಲಾಗಿದೆ. ಭವಿಷ್ಯದ ಟೀಮ್​ ಇಂಡಿಯಾ ಬಲಿಷ್ಠವಾಗಿರಲು ಯುವಕರಿಗೆ ಅವಕಾಶ ನೀಡೋ ನಿರ್ಧಾರ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us